ಜಿಲ್ಲೆ

ಹಿಂಬಡ್ತಿ ಅನ್ಯಾಯ ಸರಿಪಡಿಸುವಂತೆ ಒತ್ತಾಯಿಸುವಂತೆ ಬೀದಿಗಿಳಿದ ಎಸ್ಸಿಎಸ್ಟಿ ನೌಕರರು

ಧಾರವಾಡ : ಹಿಂಬಡ್ತಿಯಿಂದ ಸಂಕಷ್ಟದಲ್ಲಿರುವ ಸರಕಾರಿ ನೌಕರರಿಗೆ ಕೂಡಲೇ ನ್ಯಾಯ ಒದಗಿಸುವಂತೆ ಒತ್ತಾಯಿಸಿ ನೂರಾರು ಎಸ್ಸಿ ಎಸ್ಟಿ ನೌಕರರು ಶನಿವಾರ ಬೀದಿಗಿಳಿದು ಪ್ರತಿಭಟನೆ ನಡೆಸಿದರು.

ನಗರದ ಕಲಾಭವನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದ ನೌಕರರು ಕೆಲ ಕಾಲ ಆಲೂರು ವೆಂಕಟರಾವ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಸುಪ್ರೀಂಕೋರ್ಟ್ನ ಬಿ.ಕೆ. ಪವಿತ್ರ ಪ್ರಕರಣದ ತೀರ್ಪಿನಂತೆ ಮೂರು ನಾಲ್ಕು ತಿಂಗಳಲ್ಲಿ ಪುನರಾವಲೋಕನ ಮಾಡುವಂತೆ ಸೂಚಿಸಿದ್ದರೂ, ರಾಜ್ಯಸರಕಾರ ಈವರೆಗೆ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಹಿಂಬಡ್ತಿ ರದ್ದು ಪಡಿಸಿ, ಈ ಹಿಂದಿನಂತೆಯೇ ಮುಂದುವರೆಸದಿದ್ದರೆ ಮುಂದಿನ ದಿನಗಳಲ್ಲಿ ಬೆಂಗಳೂರು ಚಲೋ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

Please follow and like us:

Leave a Reply

Your email address will not be published. Required fields are marked *