ಜಿಲ್ಲೆ

ಆಟೋ ಚಾಲಕರ ಮೇಲಿನ ದೌರ್ಜನ್ಯ ನಿಲ್ಲಿಸಲು ಒತ್ತಾಯ

ಧಾರವಾಡ : ಅವಳಿ ನಗರದಲ್ಲಿ ಕಳೆದ ಹಲವು ದಿನಗಳಿಂದ ಪೊಲೀಸರು ಆಟೋ ಚಾಲಕರ ಮೇಲೆ ದೌರ್ಜನ್ಯ, ದಬ್ಬಾಳಿಕೆ ನಡೆಸುತ್ತಿದ್ದು, ಚಾಲಕರ ಬದುಕು ಅತಂತ್ರವಾಗಿದೆ ಎಂದು ಆರೋಪಿಸಿ ಟಿಪ್ಪು ಸುಲ್ತಾನ್ ಸಂಯುಕ್ತ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಕಾರ್ಯಕರ್ತರು ಕಾನೂನು ಜಾರಿಗೊಳಿಸುವ ನೆಪದಲ್ಲಿ ಆಟೋ ಚಾಲಕರ ಮೇಲೆ ಇಲ್ಲ ಸಲ್ಲದ ನಿಯಮಾವಳಿ ಹೇರಿದರೆ, ಅವರು ಜೀವನ ನಡೆಸುವುದು ಹೇಗೆ ಎಂದು ಪ್ರಶ್ನಿಸಿದರು.

ಹುಬ್ಬಳ್ಳಿ-ಧಾರವಾಡದಲ್ಲಿ 1600ಕ್ಕೂ ಹೆಚ್ಚು ಆಟೋ ಚಾಲಕರಿದ್ದು, ವಿಮಾ ಮೊತ್ತ ಈ ಹಿಂದೆ 2800 ಇತ್ತು ಅದು ಈಗ 7600 ರೂಪಾಯಿ ಮಾಡಿರುವುದು, ಆಟೋಗಳಿಗೆ ಕಡ್ಡಾಯ ಮೀಟರ್ ಹೆಸರಿನಲ್ಲಿ 3000 ಸಾವಿರ ಹೊರೆಯಾಗುತ್ತಿದೆ. ಇದರೊಂದಿಗೆ ಆಟೋ ಪರವಾನಿಗೆ ಪಡೆಯಲು 8 ತರಗತಿ ವರಗೆ ಓದಿರುವುದು ಕಡ್ಡಾಯ ಮಾಡಿರುವುದು ಸರಿಯೇ ಎಂದು ಕಿಡಿಕಾರಿದರು.

ಶೀಘ್ರದಲ್ಲಿಯೇ ಆಟೋ ಚಾಲಕರ ಸಮಸ್ಯೆಗೆ ಸ್ಪಂದಿಸುವಂತೆ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಸಾರಿಗೆ ಸಚಿವರಿಗೆ ಪತ್ರ ರವಾನಿಸಿದರು.

Please follow and like us:

Leave a Reply

Your email address will not be published. Required fields are marked *