ಬೆಂಗಳೂರು : ಇಬ್ಬರು ಉದ್ಯಮಿಗಳ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಗಿರಿ ನಗರ ಪೊಲೀಸರು ಮತ್ತೇ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಈ ನಾಲ್ವರ ಬಂಧನದಿಂದಾಗಿ ಈವರಗೆ ಒಟ್ಟು 7 ಜನರನ್ನು ಬಂಧಿಸಿದಂತಾಗಿದೆ. ಈ ಹಿಂದೆ ಈ ಹತ್ಯೆ ಪ್ರಕರಣದ ಪ್ರಮುಖ ಕಿಂಗ್ ಪಿನ್ ಆಗಿದ್ದ ಬಿಜೆಪಿ ಯುವ ಮೋರ್ಚಾ ಮುಖಂಡ ತೇಜಸ್, ಅನಿಲ್ ಹಾಗೂ ಮಣಿ ಎಂಬುವರನ್ನು ಬಂಧಿಸಲಾಗಿತ್ತು.
ಇದೀಗ ಈ ನಾಲ್ವರು ಆರೋಪಿಗಳನ್ನು 56ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರು ಪಡಿಸಿ, ಹೆಚ್ಚಿನ ವಿಚಾರಣೆಗೆ ಪೊಲೀಸ್ ವಶಕ್ಕೆ ಪಡೆಯಲಾಗಿದೆ.
ಈ ಆರೋಪಿಗಳು ಉದ್ಯಮಿಗಳಾದ ಪ್ರಸಾದ ಬಾಬು ಹಾಗೂ ಬಾಲಾಜಿ ಅವರನ್ನು ಕೊಲೆ ಮಾಡಿ ಸಾಕ್ಷ್ಯ ನಾಶ ಮಾಡಲು ಯತ್ನಿಸಿದ್ದರು. ಅಲ್ಲದೆ, ಅವರನ್ನು ಹಣ ಕೊಡುವುದಾಗಿ ಸ್ಥಳಕ್ಕೆ ಕರೆಸಿಕೊಂಡು ಕೊಲೆ ಮಾಡಲಾಗಿತ್ತು. ಈ ಹಿಂದೆ ಉದ್ಯಮಿಗಳನ್ನು ಹಣಕ್ಕಾಗಿ ಕಿಡ್ನಾಪ್ ಮಾಡಿ ಮರ್ಡರ್ ಮಾಡಲಾಗಿದೆ ಎಂದು ಅನುಮಾನ ವ್ಯಕ್ತಪಡಿಸಲಾಗಿತ್ತು. ಆದರೆ ಇದೀಗ ಒಂದೊಂದಾಗಿ ಸತ್ಯಗಳು ಹೊರಬರುತ್ತಿವೆ. ಈ ಪ್ರಕರಣ ಇಡೀ ಬೆಂಗಳೂರು ಮಹಾನಗರವನ್ನೇ ಬೆಚ್ಚಿ ಬೀಳಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ಶ್ರೀರಂಗಪಟ್ಟಣ : ರಸ್ತೆ ಮಧ್ಯೆಯೇ ಎಣ್ಣೆ ಪಾರ್ಟಿ ಮಾಡಿದ್ದನ್ನು ಪ್ರಶ್ನಿಸಿದಕ್ಕೆ ಬಸ್ ಚಾಲಕ, ಕಂಡಕ್ಟರ್ ಮೇಲೆ ಪುಂಡರು ಹಲ್ಲೆ ಮಾಡಿದ ಘಟನೆ ಮೈಸೂರು ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ನಡೆದಿದೆ. ಶ್ರೀರಂಗಪಟ್ಟಣದ ತಾಲೂಕಿನ, ಹಂಪಾಪುರ ಗ್ರಾಮದ ಬಳಿ ರಸ್ತೆಯಲ್ಲಿ ಕುಡಿಯುತ್ತ ಕುಳಿತಿದ್ದನ್ನು ಪ್ರಶ್ನಿಸಿದ್ದಕ್ಕೆ ಕೆಎಸ್ಆರ್ಟಿಸಿ ಬಸ್ ಕಂಡಕ್ಟರ್ ಮತ್ತು ಡ್ರೈವರ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ.ಅಲ್ಲದೆ, ಯುವಕರ ತಂಡ ಬಸ್ ಮೇಲೂ ಕಲ್ಲು ತೂರಿದ್ದಾರೆ. ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಘಟನೆ ಸಂಬಂಧ ಅರಕೆರೆ ಪೊಲೀಸ್ […]
ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಅವಳಿನಗರದ ಜನತೆಯನ್ನು ಬೆಚ್ಚಿಬೀಳಿಸಿದ್ದ ಉದ್ಯಮಿ ಪುತ್ರನ ಅಪಹರಣ ಪ್ರಕರಣವನ್ನು ಭೇದಿಸುವಲ್ಲಿ ಹುಬ್ಬಳ್ಳಿಯ ವಿದ್ಯಾನಗರ ಪೊಲೀಸರು ಯಶಸ್ವಿಯಾಗಿದ್ದಾರೆ. ಕಳೆದ ಹಲವು ದಿನಗಳ ಹಿಂದೆ ಅನಿವಾಸಿ ಭಾರತೀಯ ಹಾಗೂ ಉದ್ಯಮಿ ನಜೀರ್ ಅಹ್ಮದ್ ಅತ್ತಾರ್ ಅವರ ಪುತ್ರನನ್ನು ಅಪಹರಿಸಿದ್ದ ಕೆಲವು ಅಪಹರಣಕಾರರು ಅವರಿಂದ ಒಂದು ಕೋಟಿ ರೂಪಾಯಿಗೆ ಬೇಡಿಕೆ ಇಟ್ಟಿದ್ದರು. ಅಲ್ಲದೆ, ಈ ಸಂಬಂಧ ಅವರು ಅಪಹರಣಕಾರರಿಗೆ 40 ಲಕ್ಷ ನೀಡಿದ್ದರು. ಇದಾದ ನಂತರ ಪೊಲೀಸ್ ಆಯುಕ್ತ ಎಂ.ಎನ್. ನಾಗರಾಜ ಅವರನ್ನು ಭೇಟಿ ಮಾಡಿ ಈ ಸಂಬಂಧ […]
ಬೆಂಗಳೂರು : ಮಾಲ್ ನಲ್ಲಿ ಬಟ್ಟೆ ತೆಗೆದುಕೊಳ್ಳಲು ಹೋದ ಮಹಿಳೆಯೊಬ್ಬರಿಗೆ ಅಳತೆ ತೆಗೆದುಕೊಳ್ಳುವ ನೆಪದಲ್ಲಿ ಲೈಂಗಿಕ ಕಿರುಕುಳ ನೀಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬಟ್ಟೆ ಅಂಗಡಿಯಲ್ಲಿ ಮಹಿಳೆಯ ಬಟ್ಟೆ ಅಳತೆಯ ನೆಪದಲ್ಲಿ ಫೈಜಲ್ ಎಂಬಾತನೇ ಕಿರುಕುಳ ನೀಡಿದ್ದಾನೆ ಎಂದು ಮಹಿಳೆ ಮಲ್ಲೇಶರಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಮಲ್ಲೇಶ್ವರಂ ಬಳಿಯಿರುವ ಮಂತ್ರಿ ಮಾಲ್ ನ ವಿವಾ ಬಟ್ಟೆ ಅಂಗಡಿಯಲ್ಲಿ ಈ ಘಟನೆ ಆ. 4ರಂದು ನಡೆದಿದೆ ಎಂದು ನೊಂದ ಮಹಿಳೆ ದೂರಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ […]