ಬೆಂಗಳೂರು : ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಶತಾಯ ಗತಾಯ ಗೆಲುವು ಸಾಧಿಸಬೇಕು ಎಂದು ಪಣತೊಟ್ಟಿರುವ ರಾಜ್ಯ ಕಾಂಗ್ರೆಸ್ ಬೆಂಗಳೂರಿನ ಮೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಧ್ಯಕ್ಷರಿಗೆ ಕೋಕ್ ನೀಡಲು ಮುಂದಾಗಿದೆ.
ಈ ಹಿನ್ನಲೆಯಲ್ಲಿ ಕೆಪಿಸಿಸಿ ಅಧ್ಯಕ್ಷರು ಆಗಿರುವ ದಿನೇಶ್ ಗುಂಡುರಾವ್ ಮೇಜರ್ ಸರ್ಜರಿ ನಡೆಸಲು ಮುಂದಾಗಿದ್ದಾರೆ. ಈಗಾಗಲೇ ಈ ಹಿಂದಿನ ಮೂರು ಕ್ಷೇತ್ರಗಳ ಅಧ್ಯಕ್ಷರಿಗೆ ಗೇಟ್ ಪಾಸ್ ನೀಡಿದ್ದಾರೆ ಎಂದು ಕೆಪಿಸಿಸಿ ಉನ್ನತ ಮೂಲಗಳು ತಿಳಿಸಿವೆ.
ಬೆಂಗಳೂರು ಉತ್ತರ, ಬೆಂಗಳೂರು ಗ್ರಾಮಾಂತರ ಹಾಗೂ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರಗಳ ಮೇಲೆ ಕಣ್ಣು ಇಟ್ಟಿರುವ ಕಾಂಗ್ರೆಸ್ ಅಧ್ಯಕ್ಷ ದಿನೇಶ್ ಗುಂಡುರಾವ್ ಅವರು ಜಿಲ್ಲಾ ಘಟಕ, ನಗರ ಘಟಕ, ಬ್ಲಾಕ್ ಕಾಂಗ್ರೆಸ್ ಮಟ್ಟದಲ್ಲಿ ಪಕ್ಷವನ್ನು ಬಲಪಡಿಸಲು ಭರ್ಜರಿಯಾದ ಸರ್ಜರಿ ಮಾಡಲು ಮುಂದಾಗಿರುವುದು ಹೊಸ ಹುಮ್ಮಸ್ಸುಮೂಡಿಸಿದೆ. ಇದಕ್ಕೆಯಾವ ರೀತಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಸ್ಪಂದಿಸುತ್ತಾರೆ ಎಂಬುದು ಕಾದು ನೋಡಬೇಕಿದೆ.
ವಿಜಯಪುರ : ಮಹಾತೀರ್ಪು ಸ್ವಲ್ಪ ಮಟ್ಟಿಗೆ ಸಮಾಧಾನ ತಂದಿದೆ ಎಂದು ಮಾಜಿ ಸಚಿವ ಎಂ.ಬಿ. ಪಾಟೀಲ ತಿಳಿಸಿದ್ದಾರೆ. 4 ಟಿಎಂಸಿ ಬದಲಿಗೆ 7.50 ಟಿಎಂಸಿ ಬಂದರೆ ಖುಷಿ ಆಗುತ್ತಿತ್ತು. ನಾಲ್ಕು ಟಿಎಂಸಿ ನೀರು ಯಾವುದೇ ಕಾರಣಕ್ಕೂ ಸರಿ ಹೋಗಲ್ಲ. ನೀರಾವರಿ ಯೋಜನೆಗೆ ಇನ್ನಷ್ಟು ಅಗತ್ಯವಿದೆ ಎಂದರು ನೀರಾವರಿ ಯೋಜನೆಗೆ ಹೆಚ್ಚುವರಿ ಕೇಳಿದ್ದೇವೆ. ಅದು ಕೊಟ್ಟಿಲ್ಲ. ಮಹದಾಯಿ ಬೇಸಿನ ಜನರಿಗೆ 1.5 ಟಿಎಂಸಿ ನೀರು ಇರಲೇ ಬೇಕು. ಇದು ಖಾನಾಪುರ ಭಾಗದಲ್ಲಿ ಅನುಕೂಲವಾಗಲಿದೆ ನಾವು ಕುಡಿಯುವ ಉದ್ದೇಶಕ್ಕೆ ಕೇಳಿದ್ದೀವಿ. […]
ಧಾರವಾಡ : ಸರಕಾರಿ ಸೇವೆಯ ವೃತ್ತಿ ಘನತೆ ಮರೆತು ಕರ್ತವ್ಯಲೋಪ ಎಸಗಿದ ವಿಜಯಪೂರ ಜಿಲ್ಲೆಯ ಸರಕಾರಿ ಪ್ರೌಢ ಶಾಲೆಯ ಇಬ್ಬರು ಶಿಕ್ಷಕರು ಹಾಗೂ ಡಿಡಿಪಿಐ ಕಚೇರಿಯ ಇಬ್ಬರು ಸಿಬ್ಬಂದಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ವಾಯವ್ಯ ಕರ್ನಾಟಕ ಶೈಕ್ಷಣಿಕ ವಲಯದ ಅಪರ ಆಯುಕ್ತ ಮೇಜರ್ ಸಿದ್ದಲಿಂಗಯ್ಯ ಹಿರೇಮಠ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ವಿಜಯಪೂರ ಜಿಲ್ಲೆಯ ಚಡಚಣ ಶೈಕ್ಷಣಿಕ ತಾಲೂಕು ವಲಯದ ಝಳಕಿ ಸರಕಾರಿ ಪ್ರೌಢ ಶಾಲೆಗೆ ಅಪರ ಆಯುಕ್ತರು ಆಕಸ್ಮಿಕ ಸಂದರ್ಶನ ನೀಡಿದ […]
ಮಂಗಳೂರು : ಕರಾವಳಿ ಭಾಗದಲ್ಲಿ ವರುಣನ ಅಬ್ಬರ ಮುಂದುವರೆದ್ದಿದ್ದು, ಜನ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಮಂಗಳೂರು-ಬೆಂಗಳೂರು ರಸ್ತೆ ಸಂಪರ್ಕ ಕಡಿತಗೊಂಡ ಪರಿಣಾಮ ಹಾಸನ, ಮಡಿಕೇರಿ ಕಡೆಗೆ ತೆರಳುವ ಪ್ರಯಾಣಿಕರು ಪರದಾಡುವಂತಾಗಿದೆ. ರಾಜ್ಯ ಹೆದ್ದಾರಿಯ ಮೇಲೆ ನೀರು ಹರಿದ ಪರಿಣಾಮ ಬೋಲೋರೋ ವಾಹನ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದು, ನುಜ್ಜು ಗುಜ್ಜಾಗಿದ್ದು, ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಇದಲ್ಲದೆ, ಕುಶಾಲನಗರ ಸಂಪರ್ಕ ಕಲ್ಪಿಸುವ ಹಾಸನ ರಸ್ತೆ ಮಡಿಕೇರಿ-ಸೋಮವಾರಪೇಟೆ ರಸ್ತೆ. ಮಡಿಕೇರಿ ವಿರಾಜಪೇಟೆ ಮಧ್ಯದ ಬೇತ್ರಿ ಸೇತುವೆಯಲ್ಲಿ ಕಾವೇರಿ ಅಪಾಯಮೀರಿ ಹರಿಯುತ್ತಿದೆ. ಮಹಾಮಳೆಗೆ […]