ಬೆಂಗಳೂರು : ರಾಜ್ಯದಲ್ಲಿ ಸದ್ಯಕ್ಕೆ ಮೂರು ಜನ ಮುಖ್ಯಮಂತ್ರಿಗಳು ಕಾರ್ಯನಿರ್ವಹಿಸುತ್ತಿದ್ದು, ಇದರಲ್ಲಿ ಯಾರು ಓರಿಜನಲ್ ಮುಖ್ಯಮಂತ್ರಿ ಎಂಬುದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಹೆಚ್. ಡಿ. ದೇವೇಗೌಡ ಕುಟುಂಬ ಫೈನಲ್ ಮಾಡಿಕೊಳ್ಳಲಿ ಎಂದು ರಾಜ್ಯ ಬಿಜೆಪಿ ತಿರುಗೇಟು ನೀಡಿದೆ
ಈ ಬಗ್ಗೆ ಬಿಜೆಪಿ ಕರ್ನಾಟಕ ಟ್ವೀಟ್ ಮಾಡಿದ್ದು, ಮೂವರು ಮುಖ್ಯಮಂತ್ರಿಗಳ ಪೈಕಿ ಹೆಚ್ಡಿಕೆ ದುರ್ಬಲ, ಸುಪರ್ ಸಿಎಂ ಹೆಚ್.ಡಿ. ರೇವಣ್ಣ ಇನ್ನೂ ಹೆಚ್.ಡಿ. ದೇವೇಗೌಡ ಸುಪ್ರೀಂ ಸಿಎಂ ಇದ್ದಾರೆ. ಇದರಲ್ಲಿ ಯಾರ ನಿಜವಾದ ಮುಖ್ಯಮಂತ್ರಿ ಎಂದು ಅವರೇ ಕುಳಿತುಕೊಂಡು ನಿರ್ಧಾರ ಮಾಡಿಕೊಳ್ಳಲಿ ಎಂದು ತಿವಿದಿದೆ.
ಬಿಜೆಪಿಯಿಂದ ಈ ಟ್ವಿಟ್ ವಾರ್ ನಡೆದಿದ್ದು, ದೇವೇಗೌಡರ ಕುಟುಂಬ ರಾಜಕಾರಣವನ್ನು ಲೇವಡಿ ಮಾಡಿರುವ ಬಿಜೆಪಿ ಕರ್ನಾಟಕ ದೇವೇಗೌಡರ ಕುಟುಂಬ ರಾಜ್ಯ ಸರಕಾರದಲ್ಲಿ ಹಸ್ತಕ್ಷೇಪ ಮಾಡುತ್ತಿದೆ ಎಂದು ಕುಟುಕಿದೆ.
ಇದು ಮುಂದೆ ಯಾವ ರೀತಿ ಪಡೆಯುತ್ತದೆ. ಇದಕ್ಕೆ ಜೆಡಿಎಸ್ ಯಾವ ರೀತಿ ಪ್ರತಿಕ್ರಿಯಿಸುತ್ತದೆ ಎಂಬುದು ಕಾದು ನೋಡಬೇಕಿದೆ.
ಬೆಂಗಳೂರು : ಇಂದು ಬೆಂಗಳೂರಿನಲ್ಲಿ ಡಿ.ಆರ್. ಪರೀಕ್ಷೆಗೆ ಹಾಜರಾಗಬೇಕಿದ್ದ ನೂರಾರು ಅಭ್ಯರ್ಥಿಗಳು ಬೆಂಗಳೂರು ತಲುಪಲಾಗದೇ ಪರೀಕ್ಷೆಯಿಂದ ವಂಚಿತರಾಗಿದ್ದರು. ಅದರಿಂದಾಗಿ ಅಭ್ಯರ್ಥಿಗಳ ಭವಿಷ್ಯ ಮಂಕಾಗಿತ್ತು. ಇದಕ್ಕೆ ತಕ್ಷಣ ಪ್ರತಿಕ್ರಿಯಿಸಿರುವ ಸಿಎಂ ಕುಮಾರಸ್ವಾಮೀ ಟ್ವೀಟ್ ಮಾಡಿದ್ದು, ರಾಣಿ ಚೆನ್ನಮ್ಮ ಎಕ್ಸ್ಪ್ರೆಸ್ ರೈಲು ತಡವಾಗಿ ಬೆಂಗಳೂರು ತಲುಪಿದ ಕಾರಣ ಪೊಲೀಸ್ ಡಿಎಆರ್ ಪರೀಕ್ಷೆ ಬರೆಯಲು ಆಗದವರಿಗೆ ಮರುಪರೀಕ್ಷೆಗೆ ಅನುವು ಮಾಡಿಕೊಡುತ್ತೇನೆ. ಅಲ್ಲದೆ, ಹುಬ್ಬಳ್ಳಿ ಪರೀಕ್ಷಾ ಕೇಂದ್ರಕ್ಕೂ ಅವಕಾಶ ಮಾಡುತ್ತೇನೆ. ಇದರೊಂದಿಗೆ ಮುಂದೆ ಈ ರೀತಿ ಘಟನೆಗಳಾಗದಂತೆ ನಿಗಾ ವಹಿಸಲು ರೈಲ್ವೆ ಸಚಿವರ […]
ಹುಬ್ಬಳ್ಳಿ : ಇಲ್ಲಿಯ ಗೋಕುಲ ರಸ್ತೆಯಲ್ಲಿ ಉತ್ತರ ಕರ್ನಾಟಕದ ಮೊದಲ ವಿದೇಶಿ ಸೈಕಲ್ ಗಳ “ಅಮೇಜಿಂಗ್ ಬೈಕ್ಸ್ ” ಮಳಿಗೆ ಉದ್ಘಾಟನಾ ಸಮಾರಂಭ ಜರುಗಿತು. ಮಲೇಶಿಯಾದ ಉಕ್ಕಿನ ಮನುಷ್ಯನೆಂದೇ ಖ್ಯಾತಿ ಪಡೆದ ಅಂತಾರಾಷ್ಟ್ರೀಯ ಕ್ರೀಡಾಪಟು ಶ್ರೀಕಾಂತ ದೇಶಪಾಂಡೆ ಚಾಲನೆ ನೀಡಿದರು.ಬಳಿಕ ಮಾತನಾಡಿದ ಅವರು, ಪ್ರತಿನಿತ್ಯ ಕನಿಷ್ಠ 5 ಕೀ.ಮೀ. ಸೈಕಲ್ ಸವಾರಿ ಮಾಡುವುದರಿಂದ ಮನುಷ್ಯನ ದೇಹಕ್ಕೆ ಸೂಕ್ತ ವ್ಯಾಯಾಮ ಲಭಿಸಿ ದೈಹಿಕ ಸದೃಢತೆ ಕಾಪಾಡಿಕೊಳ್ಳಬಹುದು ಎಂದರು. ಸ್ವರ್ಣ ಸಮೂಹ ಸಂಸ್ಥೆಗಳ ಮ್ಯಾನೇಜಿಂಗ್ ಡೈರೆಕ್ಟರ್ ವಿ.ಎಸ್.ವಿ. ಪ್ರಸಾದ ಮಾತನಾಡಿ, […]
ಉಡುಪಿ : ಉಡುಪಿಯ ಅಷ್ಟಮಠಗಳ ಪೈಕಿ ಒಂದಾಗಿರುವ ಶಿರೂರ ಮಠಾಧೀಶ ಲಕ್ಷ್ಮೀವರ ತೀರ್ಥ ಸ್ವಾಮೀಜಿಯ ಅನುಮಾನಸ್ಪದ ಸಾವು ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಮಠವನ್ನು ತಪಾಸಣೆ ನಡೆಸಿದ ಪೊಲೀಸರು ಅನೇಕ ಮಹತ್ತರ ಮಾಹಿತಿಗಳನ್ನು ಕಲೆಹಾಕಿದ್ದಾರೆ. ಅಲ್ಲದೆ, ಸ್ವಾಮೀಜಿಯ ಜೊತೆಗೆ ಮಠದಲ್ಲೇ ತಂಗುತ್ತಿದ್ದಜಗದೀಶ ಎಂಬುವರನ್ನು ತೀವ್ರ ವಿಚಾರಣೆಗೆ ಒಳಪಡಿಸಿದೆ. ನಿನ್ನೇಯಷ್ಟೇ ಸ್ವಾಮೀಜಿಯ ಜೊತೆಗೆ ಒಳ್ಳೇಯ ಬಾಂಧವ್ಯ ಹೊಂದಿದ್ದ ರಮ್ಯಾಶೆಟ್ಟಿಯವರನ್ನು ಕೂಡ ವಿಚಾರಣೆ ನಡೆಸಿತ್ತು. ಅದೇ ರೀತಿ ಜಗದೀಶ ಪೂಜಾರಿ ಕೂಡ ಸ್ವಾಮೀಜಿಯ ಜೊತೆಗೆ ಬಾಲ್ಯದಿಂದ ಒಡನಾಟ ಹೊಂದಿದ್ದ.ಈ ಜಗದೀಶ […]