ಬೆಂಗಳೂರು : ನನ್ನ ನಲವತ್ತು ವರ್ಷದ ಗೆಳೆತನದಲ್ಲಿ ಅಂಬರೀಶ್ ಅಂತಹ ಇನ್ನೊಬ್ಬ ಗೆಳೆಯ ಸಿಗಲ್ಲ ಎಂದು ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ಕಂಬನಿ ಮಿಡಿದಿದ್ದಾರೆ
ಅವರು ನಟ ಅಂಬರೀಶ್ ಅವರ ಅಂತಿಮ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ನಾನು ಯಾವಾಗ ಬೆಂಗಳೂರಿಗೆ ಬಂದರೂ ಅವನ ಮನೆಗೆ ಹೋಗಿ ಊಟ ಮಾಡದೆ ಹೋಗುತ್ತಿರಲಿಲ್ಲ. ಅಂತಹ ಗೆಳೆತನವಿತ್ತು. ಅವನ ನನ್ನ ನಡುವೆ. ನಾವಿಬ್ಬರು ಎಕವಚನದ ಗೆಳೆಯರಾಗಿದ್ದರು. ಒಂದು ಬಾರಿ ಬಾರದೆ ಹಾಗೆ ಹೋಗಿದ್ದಕ್ಕೆ ಸಿಟ್ಟಾಗಿದ್ದ ಅಂಬರೀಶ್ ಇನ್ನೊಂದ ಬಾರಿ ಬಂದಾಗ ಮನೆಗೆ ಬಾರದೆ ಹಾಗೆ ಹೋದರೆ ಸಾಯಿಸಿಬಿಡ್ತಿನಿ ಎಂದು ಎಚ್ಚರಿಸಿದ್ದ ಎಂದು ಸ್ಮರಿಸಿದರು.
ಕನ್ನಡ ಚಿತ್ರರಂಗದಲ್ಲಿ ಇನ್ನೊಬ್ಬ ನಟ ಅಂಬರೀಶ್ ಸಿಗಬಹುದು. ಆದರೆ ಆತನ ಒಡನಾಟ, ಆಪ್ತತೆ, ಗೆಳೆತನ ಸಿಗಲ್ಲ. ಅವನು ಕೇವಲ ಒಬ್ಬನು ಇಬ್ಬರು ಗೆಳೆಯರನ್ನು ಹೊಂದಿರಲಿಲ್ಲ. ಇನ್ನೂರಕ್ಕೆ ಹೆಚ್ಚು ಆಪ್ತರನ್ನು ಹೊಂದಿದ್ದ ಎಂದು ರಜನಿಕಾಂತ್ ನೆನಪಿಸಿದರು.
ಹಿರಿಯ ನಟ ಶ್ರೀನಾಥ್ ಮಾತನಾಡಿ, ಕನ್ನಡ ಚಿತ್ರರಂಗದಲ್ಲಿ ನನ್ನಂತ ಸಾಕಷ್ಟು ನಟ, ನಟಿಯರನ್ನು ತನ್ನ ಜೊತೆಗೆ ಬೆಳೆಸಿದ ಹಿರಿಯ ನಟ ಅಂಬರೀಶ್ ನಿಧನ ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟ, ಅವರೊಬ್ಬ ಸ್ನೇಹಜೀವಿ, ಕಲಾವಿದರೊಂದಿಗೆ ಸರಾಗವಾಗಿ ಬೆರೆಯುತ್ತಿದ್ದರು. ಹಿರಿಯರು, ಕಿರಿಯರು ಎನ್ನದೆ ಎಲ್ಲರಿಗೂ ಒಡನಾಟ ಹೊಂದಿದ್ದರು. ಅವರ ಅಗಲಿಕೆ ನೋವು ತಂದಿದೆ ಎಂದು ತಮ್ಮ ಒಡನಾಟ ಸ್ಮರಿಸಿದರು.