ಹುಬ್ಬಳ್ಳಿ : ಚೋಟಾ ಮುಂಬೈ ಖ್ಯಾತಿಯ ಹುಬ್ಬಳ್ಳಿಯ ಗೋಕುಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪಚ್ಚೆಕಲ್ಲು ಎಂದು ತೋರಿಸಿ ವಂಚಿಸಲು ಯತ್ನಿಸಿದ ಜಾಲ ಬೆಳಕಿಗೆ ಬಂದಿದೆ. ಉದಯಭಟ್ಟ ನವಲಗುಂದ ಸಾ: ಹಳೇಹುಬ್ಬಳ್ಳಿ, ವಾಜೀದ ಜಿಗರೆಸಾಬ ಸಾ: ಗೋಪಾಳ .ಶಿವಮೊಗ್ಗ , ಡಾಕಪ್ಪ ಬಸಲಿಂಗಪ್ಪ ಸಾ: ಆಲೂಗಡ್ಡೆ, ಶಿವಮೊಗ್ಗ , ಜಗದೀಶ ತಂಬಳ ಸಾ: ರಾಜೀವನಗರ ಹುಬ್ಬಳ್ಳಿ ಈ ನಾಲ್ಕೂ ಜನರು ಸೇರಿಕೊಂಡು ಸಾರ್ವಜನಿಕರಿಗೆ ವಂಚಿಸುವ ಉದ್ದೇಶದಿಂದ ಹುನ್ನಾರ ನಡೆಸಿದ್ದಾರೆ.
ನ.24 ರಂದು ಮಧ್ಯಾನ್ಹ ೧.೩೦ ಗಂಟೆ ಸುಮಾರಿಗೆ ಹುಬ್ಬಳ್ಳಿ ಡೆನಿಸನ್ ಹೊಟೆಲ್ ಎದುರಿಗೆ ಇರುವ ಹರೀಶ ಹೆಗಡೆ ಸಾ: ಬೆಳಗಾವಿ ಇವರ ಹತ್ತಿರ ಬಂದು ಮಾತನಾಡಿ ನಮ್ಮ ಹತ್ತಿರ ಹಸಿರು ಪಚ್ಛೆಕಲ್ಲು ಇದೆ ಅಂತಾ ತೋರಿಸಿ ಇದು ಬೆಲೆಬಾಳುವ ಎರ್ಮಾಡ್ ಗ್ರೀನ್ ಅಂತಾ ನಂಬಿಸಿ ಇದನ್ನು ಮಾರಾಟ ಮಾಡಿಸುವಂತೆ ಪ್ರೇರೇಪಿಸಿ ಮೋಸ ಮಾಡಲು ಯತ್ನಿಸಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಅನುಮಾನಗೊಂಡು ಹರೀಶ ಹೆಗಡೆ ಸಾ: ಬೆಳಗಾವಿ ನೀಡಿದ ದೂರಿನ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.