ಧಾರವಾಡ : ಧಾರವಾಡ ನಗರದ ಜೆ.ಎಸ್.ಎಸ್. ಕಾಲೇಜ್ ಎದುರಿನ ಮುಖ್ಯ ಭಾಗದಲ್ಲಿ ದೂರದ ಮಹಾರಾಷ್ಟ, ದೆಹಲಿ ಮತ್ತು ಗುಜರಾತನಿಂದ ಬಂದು ಕ್ರಿಕೆಟ್ ಬ್ಯಾಟ್ ತಯಾರಿಸಿ ಮಾರಾಟ ಮಾಡಿ ತಮ್ಮ ಉಪಜೀವನ ನಡೆಸುತ್ತಿರುವ ೩ ಅಲೆಮಾರಿ ಗುಡಿಸಲು ವ್ಯಾಪಾರಿ ಕುಟುಂಬಗಳಿಗೆ ಸೋಲಾರ ಸೌರ ಬೆಳಕಿನ ಕಿಟ್ಟನ್ನು ಸೆಲ್ಕೊ ಸಂಸ್ಥೆ ವಿತರಿಸಿದೆ.
ಗುಡಿಸಲುಗಳಿಗೆ ವಿದ್ಯುತ್ ಸಂಪರ್ಕವೇ ಇಲ್ಲದೆ ಕಳೆದ ಹಲವು ವರ್ಷಗಳಿಂದ ಇಲ್ಲಿ ವಾಸವಾಗಿರುವ ಈ ಕುಟುಂಬಗಳು ಹಗಲಿನಲ್ಲಿ ಮಾತ್ರ ತಮ್ಮ ಕಾಯಕವನ್ನು ನಿರ್ವಹಿಸುತ್ತಿದ್ದರು. ಇದನ್ನು ಗಮನಿಸಿದ ಸೆಲ್ಕೋ ಸಂಸ್ಥೆ ಎಜಿಎಂಗಳಾದ ಸುರೇಶ್ ಸಾವಳಗಿ, ಪ್ರಸನ್ನ ಹೆಗಡೆ ಮತ್ತು ಸುಕೋ ಬ್ಯಾಂಕಿನ ರಿಜಿನಲ್ ಮ್ಯಾನೇರ್ಗಳಾದ ಸುನೀಲ್ ಕುಮಾರ್ ಅವರು ಆ ಕುಟುಂಬಗಳಿಗೆ ಬೆಳಕು ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
೨ ದೀಪ ಮತ್ತು ಒಂದು ಮೊಬೈಲ್ ಚಾರ್ಜರ್ನ್ನು ಹೊಂದಿರುವ ಈ ವ್ಯವಸ್ಥೆಯ ಮೊತ್ತ ರೂಪಾಯಿ ೧೦,೦೦೦/- ಇದ್ದು ಇದರಲ್ಲಿ ಸೆಲ್ಕೊ ಸಂಸ್ಥೆಯು ರೂಪಾಯಿ ೨ ಸಾವಿರ ಅನುದಾನವನ್ನು ನೀಡಿರುತ್ತದೆ. ಉಳಿದ ೮೦೦೦/- ಕ್ಕೆ ಸುಕೋ ಬ್ಯಾಂಕ ವಿಶೇಷ ಆಸಕ್ತಿ ವಹಿಸಿ ಸಾಲ ಸೌಲಭ್ಯವನ್ನು ಒದಗಿಸಿರುತ್ತದೆ.
ಇದರ ಪರಿಣಾಮವಾಗಿ ಕತ್ತಲಿನಲ್ಲಿದ್ದು ಬ್ಯಾಟ ತಯಾರಿಸಿ ಮಾರಾಟ ಮಾಡುತ್ತಾ ಜೀವನ ಸಾಗಿಸುತ್ತಿರುವ ಕುಟುಂಬಗಳಿಗೆ ಕೊನೆಗೂ ಸೋಲಾರ್ ಬೆಳಕು ಬಂದಂತಾಗಿದೆ.

