ಧಾರವಾಡ: ಪ್ರತಿವರ್ಷದಂತೆ ಇಲ್ಲಿನ ಕೆಲಗೇರಿ ರಸ್ತೆಯ ಸಾಯಿನಗರದಲ್ಲಿನ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಜು. ೨೬ರಿಂದ ಗುರುಪೂರ್ಣಿಮೆ ಉತ್ಸವ ನಡೆಯಲಿದೆ.
ಜು.೨೬ ರಂದು ಸಾಯಂಕಾಲ ೬.೩೦ಕ್ಕೆ ಗುತ್ತಿಗೆದಾರ ಬಿ.ಟಿ.ರೆಡ್ಡಿ ಅವರು ಗುರು ಪೂರ್ಣಿಮಾ ಉತ್ಸವಕ್ಕೆ ಚಾಲನೆ ನೀಡುವರು. ನಂತರ ಪಲ್ಲಕ್ಕಿ ಸೇವೆ, ಶೇಜಾರತಿ ನಡೆಯಲಿದೆ.
ಜು.೨೭ ರಂದು ಬೆಳಿಗ್ಗೆ ೫.೧೫ಕ್ಕೆ ಕಾಕಡ ಆರತಿ, ೬ ಗಂಟೆಗೆ ಅಭಿಷೇಕ, ಬೆಳಿಗ್ಗೆ ೯.೩೦ ರಿಂದ ಸಾಮೂಹಿಕ ಶ್ರಿÃ ಸಾಯಿ ಸತ್ಯನಾರಾಯಣ ಪೂಜೆ, ಮಧ್ಯಾಹ್ನ ೧೨.೩೦ ರಿಂದ ಮಹಾಪ್ರಸಾದ ವಿತರಣೆ ನಡೆಯಲಿದೆ.
ಸಾಯಂಕಾಲ ೬.೩೦ ಕ್ಕೆ ಮಾಜಿ ಮೇಯರ ಪೂರ್ಣಾ ಪಾಟೀಲ ಅವರು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡುವರು.ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪಾಲಿಕೆ ಸದಸ್ಯ ವಿಜಯಾನಂದ ಶೆಟ್ಟಿ ಆಗಮಿಸಲಿದ್ದು, ಶಿರಡಿ ಸಾಯಿ ಮಂದಿರ ಸಂಸ್ಥೆಯ ಅಧ್ಯಕ್ಷ ಮಹೇಶ ಶೆಟ್ಟಿ ಅಧ್ಯಕ್ಷತೆವಹಿಸುವರು. ಆದ್ದರಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಉತ್ಸವದಲ್ಲಿ ಪಾಲ್ಗೊಳ್ಳಬೇಕು ಎಂದು ಶಿರಡಿ ಸಾಯಿಬಾಬಾ ಸಂಸ್ಥೆಯ ಅಧ್ಯಕ್ಷ ಮಹೇಶ ಶೆಟ್ಟಿ ಅವರು ಪ್ರಜಾಕಿರಣಕ್ಕೆ ತಿಳಿಸಿದ್ದಾರೆ.