ಬೆಂಗಳೂರು : ಕೇಂದ್ರದ ಮಾಜಿ ಸಚಿವರೂ, ಚಿತ್ರ ನಟ ಅಂಬರೀಶ್ ಹಾಗೂ ಕೇಂದ್ರದ ಮಾಜಿ ರೈಲ್ವೆ ಸಚಿವರಾದ ಸಿ.ಕೆ.ಜಾಫರ್ ಷರೀಫ್ ಅವರ ನಿಧನದ ಹಿನ್ನೆಲೆಯಲ್ಲಿ ಯಥವಾತ್ತಾಗಿ ಸರಕಾರಿ ರಜೆ ಮುಂದುವರೆಸಲಾಗಿದೆ.
ರಾಜ್ಯದಲ್ಲಿ ಮೂರು ದಿನಗಳ ಕಾಲ ಶೋಕಾಚರಣೆ ಜಾರಿಯಲ್ಲಿರುವದರಿಂದ ನಾಳೆ ನ.೨೬ ರಂದು ಏರ್ಪಡಿಸಲಾಗಿದ್ದ ದಾಸಶ್ರೇಷ್ಟ ಕನಕದಾಸರ ಜಯಂತಿ ಕಾರ್ಯಕ್ರಮವನ್ನು ಮುಂದೂಡಲಾಗಿದೆ.
ಮೂರು ದಿನಗಳ ಶೋಕಾಚರಣೆ ಬಳಿಕ ತಮ್ಮ ಅನುಕೂಲ ದ ದಿನದಂದು ಕನಕದಾಸರ ಜಯಂತಿ ಆಚರಿಸಬಹುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಮುಂದಿನ ಮೂರು ದಿನಗಳಲ್ಲಿ ಯಾವುದೇ ಮನರಂಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬಾರದು ಎಂದು ಈ ಮೂಲಕ ಕೋರಲಾಗಿದೆ.
ರಾಜ್ಯ ಸರಕಾರದ ಅಧೀನ ಕಾರ್ಯದರ್ಶಿ ನವೀನ್ ಜೋಸೆಫ್ ಶಿಷ್ಟಚಾರ ವಿಭಾಗ ಅವರು ಕೂಡ ತಿದ್ದುಪಡಿ ಅಧಿಸೂಚನೆ ಹೊರಡಿಸಿದ್ದು, ಕನಕದಾಸರ ಜಯಂತಿ ಮುಂದೂಡಲಾಗಿದ್ದು, ಮೂರು ದಿನಗಳ ಕಾಲ ಶೋಕಾಚರಣೆ ಘೋಷಣೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.