ಕೊಪ್ಪಳ: ಕೆರೆಗೆ ಈಜಲು ಹೋಗಿದ್ದ ಇಬ್ಬರು ಮಕ್ಕಳು ಮೃತಪಟ್ಟ ಘಟನೆ ಕೊಪ್ಪಳ ಜಿಲ್ಲೆಯಲ್ಲಿ ಭಾನುವಾರದಂದು ನಡೆದಿದೆ.
ನಾಗೇಶನಹಳ್ಳಿ ಗ್ರಾಮದ. ಕೆರೆಯ ಪಕ್ಕದಲ್ಲೇ ಇರುವ ಗೊಲ್ಲರ ಹಟ್ಟಿಯಲ್ಲಿದ್ದ ಹತ್ತು ವರ್ಷದ ಒಳಗಿನ ಇಬ್ಬರು ಮಕ್ಕಳು ಉದಯ್ ಮತ್ತು ವಿಜಯ್ ಕೆರೆಗೆ ನೀರು ಕುಡಿಯಲು ಹೋಗಿದ್ದಾರೆ.
ಆನತಂತರ ಕೆರೆಗೆ ಈಜಲು ಇಳಿದಿದ್ದಾರೆ. ಆದರೆ ಕೆರೆಯ ಆಳವನ್ನ ಹರಿಯದ ಕಂದಮ್ಮಗಳು ಕೆರೆಗೆ ಇಳದಿದ್ದರಿಂದ ನೀರು ಪಾಲಾಗಿದ್ದಾರೆ.
ಕೆರೆ ತುಂಬಾ ಆಳವಾಗಿದ್ದು, ಮತ್ತು ಹೂಳು ತುಂಬಿ ಕೊಂಡಿರುವುದರಿಂದ ಕೆರೆಯ ಹೂಳಿನಲ್ಲಿ ಸಿಕ್ಕಿ ಹಾಕಿಕೊಂಡ ಮಕ್ಕಳು ಮೃತ್ಯುವಿನ ಪಾಲಾಗಿದ್ದಾರೆ ಎಂದು ತಿಳಿದು ಬಂದಿದೆ.
ತಂದೆ ತಾಯಿಗಳ ಆಕ್ರಂದನ ಮುಗಿಲು ಮುಟ್ಟುತ್ತಿದೆ. ಈ ಕೆರೆಯಲ್ಲಿ ಈ ಹಿಂದೆ ಕೂಡ ಸಾಕಷ್ಟು ಜನ ಮೃತಪಟ್ಟಿದ್ದಾರೆ.
ಘಟನಾ ಸ್ಥಳಕ್ಕೆ ಸ್ಥಳೀಯ ಶಾಸಕ ಪರಣ್ಣ ಮುನವಳ್ಳಿ, ಮುನಿರಾಬಾದ್ ಪಿಎಸ್ಐ ರಂಗಯ್ಯ ಭೇಟಿ ನೀಡಿ ಮಾಹಿತಿ ಪಡೆದರು.
ಮೃತಪಟ್ಟ ಮಕ್ಕಳ ಸಂಬಂಧಿಗಳಿಗೆ ಸಾಂತ್ವನ ಹೇಳಿದ ಶಾಸಕ ಪರಣ್ಣ ಮುನವಳ್ಳಿ, ಅವರು ಸಹಾಯ ಹಸ್ತವನ್ನು ನೀಡಿದರು.ಅಲ್ಲದೆ, ಬಾಲಕರ ಸಾವಿನ ವಿಷಯ ಮುಖ್ಯಮಂತ್ರಿ ಗಳ ಗಮನಕ್ಕೆ ತಂದು ಸಿಎಂ ಪರಿಹಾರ ನಿಧಿಯಿಂದ ಪರಿಹಾರ ಒದಗಿಸಿಕೊಡುವುದಾಗಿ ಭರವಸೆ ನೀಡಿದರು.
ಮುನಿರಾಬಾದ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯ ಮುಂದುವರೆದಿದೆ.