ಜಿಲ್ಲೆ

‘ಜೀವನ ಶಿಕ್ಷಣ’ ಪತ್ರಿಕೆ’ ವಿತರಣೆ ಬಿಇಓ ಕಚೇರಿಯಿಂದ : ಮೇಜರ್ ಸಿದ್ದಲಿಂಗಯ್ಯ

ಧಾರವಾಡ : ಇಲ್ಲಿಯ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಿಂದ ಪ್ರಕಟಿಸುತ್ತಿರುವ ‘ಜೀವನ ಶಿಕ್ಷಣ’ ಮಾಸಪತ್ರಿಕೆಯ ವಿತರಣೆಯ ಜವಾಬ್ದಾರಿಯನ್ನು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗಳಿಗೆ ವಹಿಸಿದ್ದು, ವಾಯವ್ಯ ಕರ್ನಾಟಕ ಭಾಗದ ೯ ಜಿಲ್ಲೆಗಳ ಸುಮಾರು ೧೨ ಸಾವಿರ ಪ್ರಾಥಮಿಕ ಶಾಲಾ ಮುಖ್ಯಾಧ್ಯಾಪಕರು ಬಿಇಓ ಕಚೇರಿಯಿಂದ ಪತ್ರಿಕೆಯನ್ನು ಕೇಳಿ ಪಡೆಯಬೇಕೆಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ವಾಯವ್ಯ ಕರ್ನಾಟಕ ಶೈಕ್ಷಣಿಕ ವಲಯದ ಅಪರ ಆಯುಕ್ತ ಮೇಜರ್ ಸಿದ್ದಲಿಂಗಯ್ಯ ಹಿರೇಮಠ ಸೂಚಿಸಿದ್ದಾರೆ.

೨೦೧೫ರ ಫೆಬ್ರುವರಿ ತಿಂಗಳಿನಿಂದಲೇ ಪತ್ರಿಕೆಯ ಬಂಡಲ್‌ಗಳನ್ನು ನೇರವಾಗಿ ತಾಲೂಕು ಬಿಇಓ ಕಚೇರಿಗಳಿಗೆ ಕಳುಹಿಸಿದ ದಾಖಲೆಗಳಿದ್ದರೂ, ಪತ್ರಿಕೆಯ ಅನೇಕ ಸಂಚಿಕೆಗಳು ಶಾಲೆಗಳಿಗೆ ವಿತರಣೆಯಾಗದೇ ಬಿಇಓ ಕಚೇರಿಯ ದಾಸ್ತಾನು ಮಳಿಗೆಯಲ್ಲಿಯೇ ಉಳಿದಿರುವುದು ಕಂಡುಬಂದಿದೆ. ಕೂಡಲೇ ೯ ಜಿಲ್ಲೆಗಳ ಎಲ್ಲ ೫೯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಈ ಕುರಿತು ಸೂಕ್ತ ತಪಾಸಣೆ ಕೈಕೊಂಡು ಎಲ್ಲ ಪತ್ರಿಕೆಗಳನ್ನು ಪ್ರಾಥಮಿಕ ಶಾಲೆಗಳಿಗೆ ತಲುಪಿಸುವ ವ್ಯವಸ್ಥೆ ಮಾಡಬೇಕೆಂದು ಅವರು ಆದೇಶಿಸಿದ್ದಾರೆ.

ವಾಯವ್ಯ ಕರ್ನಾಟಕ ಶೈಕ್ಷಣಿಕ ವಲಯದ ಬೆಳಗಾವಿ, ವಿಜಯಪೂರ, ಬಾಗಲಕೋಟ, ಧಾರವಾಡ, ಹಾವೇರಿ, ಗದಗ, ಉತ್ತರಕನ್ನಡ ಕಂದಾಯ ಜಿಲ್ಲೆಗಳು, ಶಿರಸಿ ಹಾಗೂ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗಳ ವ್ಯಾಪ್ತಿಯ ೫೯ ತಾಲೂಕುಗಳ ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳ ನೇತೃತ್ವದಲ್ಲಿ ‘ಜೀವನ ಶಿಕ್ಷಣ’ ಮಾಸಪತ್ರಿಕೆಯ ನಿರ್ವಹಣೆಗಾಗಿ ೧೯-೧೧-೨೦೧೫ರಲ್ಲಿಯೇ ಸಮಿತಿ ರಚಿಸಲಾಗಿದೆ. ಸಮಿತಿಯು ಪ್ರತೀ ತಿಂಗಳೂ ಸಭೆ ಸೇರಿ ಪತ್ರಿಕೆಯ ವಿತರಣೆ ಹಾಗೂ ವಾರ್ಷಿಕ ಚಂದಾಹಣ ಸಂಗ್ರಹ ಸೇರಿದಂತೆ ಎಲ್ಲ ರೀತಿಯ ಪ್ರಗತಿ ಪರಿಶೀಲನೆ ಮಾಡಲು, ಪತ್ರಿಕೆಯ ವಿತರಣೆ ಮಾಡಿದ ಕುರಿತು ಅಗತ್ಯ ದಾಖಲಾತಿಗಳನ್ನು ಬಿ.ಇ.ಓ. ಕಛೇರಿಯಲ್ಲಿ ಓರ್ವ ಶಿಕ್ಷಣ ಸಂಯೋಜಕರ ಬಳಿ ಇಟ್ಟುಕೊಳ್ಳುವಂತೆ ‘ಜೀವನ ಶಿಕ್ಷಣ’ ಮಾಸಪತ್ರಿಕೆಯ ಗೌರವ ಸಂಪಾದಕರೂ ಆಗಿರುವ ಮೇಜರ್ ಸಿದ್ದಲಿಂಗಯ್ಯ ಹಿರೇಮಠ ತಿಳಿಸಿದ್ದಾರೆ.

Please follow and like us:

Leave a Reply

Your email address will not be published. Required fields are marked *