ಅಪರಾಧ

ಅಂತರ್‌ಜಾಲ ವಂಚಕರಿಂದ ಲಕ್ಷಾಂತರ ರೂಪಾಯಿ ಕಳೆದುಕೊಂಡ ಪ್ರಾಧ್ಯಾಪಕರು !

ಧಾರವಾಡ : ಅಂತರ್‌ಜಾಲದ ಮಖಾಂತರ ಸಾರ್ವಜನಿಕರಿಗೆ ವಂಚನೆ ಮಾಡುವ ಜಾಲವೊಂದು ಇಲ್ಲಿಯ ಕರ್ನಾಟಕ ವಿಶ್ವವಿದ್ಯಾಲಯದ ಪ್ರಾಧ್ಯಾಪಕರನ್ನು ಖೆಡ್ಡಾಕ್ಕೆ ಕೆಡವಿ ಅವರಿಂದ ಲಕ್ಷಾಂತರ ರೂಪಾಯಿ ದೋಚಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಪೋನ ಕರೆ ಅವರಿಗೆ ನಂಬಿಸಿ ಅವರಿಂದ ಎಟಿಎಂ ಕಾರ್ಡ ಮೇಲಿರುವ ನಂಬರ ಮತ್ತು ಅವರ ಮೋಬೈಲಗೆ ಬರುವ ಓ.ಟಿ.ಪಿ ನಂಬರ ಪಡೆದುಕೊಂಡು ಅವರ ಖಾತೆಯಲ್ಲಿರುವ ಎಲ್ಲ ಹಣವನ್ನು ವರ್ಗಾಯಿಸಿಕೊಂಡು ವಂಚನೆ ಮಾಡಿದ್ದಾರೆ.

ಪ್ರಸ್ತುತ ಒಂದೇ ತಿಂಗಳಲ್ಲಿ ಧಾರವಾಡದ ೪ ಜನ ಪ್ರೊಫೆಸರ ಗಳು ೩,೧೧,೭೪೭ ರೂಪಾಯಿಗಳನ್ನು ಹಾಗೂ ಕೃಷಿ ವಿಶ್ವವಿದ್ಯಾಲಯ ಧಾರವಾಡದ ಒಬ್ಬ ಪ್ರೊಫೆಸರ ೯೯,೯೯೯ ರೂಪಾಯಿಗಳನ್ನು ಕಳೆದುಕೊಂಡಿದ್ದಾರೆ.

ಈ ಬಗ್ಗೆ ಧಾರವಾಡ ಉಪನಗರ ಪೊಲೀಸ ಠಾಣೆ ಮತ್ತು ಸೈಬರ್ ಅಪರಾಧ ಪೊಲೀಸ್ ಠಾಣೆ, ಹು-ಧಾ ದಲ್ಲಿ ೨ ಪ್ರಕರಣಗಳು ದಾಖಲಾಗಿವೆ. ಇಂತಹ ವಂಚಕರ ಜಾಲಕ್ಕೆ ವಿದ್ಯಾವಂತರೆ ಬಲಿಯಾಗುತ್ತಿರುವುದು ವಿಷಾದನೀಯ ಸಂಗತಿಯಾಗಿದೆ ಎಂದು ಹುಬ್ಬಳ್ಳಿ-ಧಾರವಾಡ ಮಹಾನಗರ ಪೊಲೀಸ್ ಉಪ ಆಯುಕ್ತ ರವೀಂದ್ರ ಗಡಾದೆ ತಿಳಿಸಿದ್ದಾರೆ.

ಅವಳಿನಗರದ ಸಾರ್ವಜನಿಕರು ಈ ರೀತಿ ವಂಚನೆ ಮಾಡುವವರಿಂದ ತಮಗೆ ಯಾವುದೇ ಫೋನ ಕರೆ ಬಂದಲ್ಲಿ ಅಂತವುಗಳಿಗೆ ತಮ್ಮ ಬ್ಯಾಂಕ ಖಾತೆ ಮಾಹಿತಿ ಮತ್ತು ಓಟಿಪಿಗೆ ಸಂಬಂಧಿಸಿದಂತೆ ಯಾವುದೇ ಮಾಹಿತಿಯನ್ನು ನೀಡಬಾರದು ಎಂದು ವಿನಂತಿಮಾಡಿಕೊಂಡಿದ್ದಾರೆ.

ಅಲ್ಲದೆ, ಒಂದು ವೇಳೆ ಇಂತಹ ಜಾಲದವರು ತಮಗೆ ಪೋನ ಕರೆ ಮಾಡಿದಲ್ಲಿ ತಕ್ಷಣ ಸೈಬರ್ ಪೊಲೀಸ್ ಠಾಣೆ, ಹುಬ್ಬಳ್ಳಿ-ಧಾರವಾಡ ಅಥವಾ ಉಪ ಪೊಲೀಸ್ ಆಯುಕ್ತರು, (ಕಾನೂನು ಮತ್ತು ಸುವ್ಯವಸ್ಥೆ), ಕರೆ ಮಾಡಿ ವಿಷಯ ತಿಳಿಸಲು ಕೋರಿದ್ದಾರೆ.

ಸೈಬರ್ ಅಪರಾಧ ಪೊಲೀಸ್ ಠಾಣೆ, ಹು-ಧಾ ಪೋನ ನಂ.: ೦೮೩೬-೨೨೩೩೫೬೭,ಉಪ ಪೊಲೀಸ್ ಆಯುಕ್ತರು, (ಕಾನೂನು ಮತ್ತು ಸುವ್ಯವಸ್ಥೆ), ಹುಬ್ಬಳ್ಳಿ-ಧಾರವಾಡ : ೯೪೮೦೮೦೨೦೦೫ಗೆ ಕರೆ ಮಾಡಬಹುದು.

Please follow and like us:

Leave a Reply

Your email address will not be published. Required fields are marked *