ಕ್ರೀಡೆ

ಧಾರವಾಡದ ನವೀನ್‌ಗೆ ಜೂಡೋದಲ್ಲಿ ಚಿನ್ನ

ಧಾರವಾಡ : ಪಂಜಾಬ ರಾಜ್ಯದ ಫಗ್ವಾರಾದ ಲೌಲಿ ಪ್ರೊಫೇಷನಲ್ ವಿಶ್ವವಿದ್ಯಾಲಯದ ಆಶ್ರಯದಲ್ಲಿ ಜರುಗಿದ ರಾಷ್ಟ್ರೀಯ ೫ನೇ ವಿದ್ಯಾರ್ಥಿ ಓಲಂಪಿಕ್ ಕ್ರೀಡೆಗಳಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದ ತಾಲೂಕಿನ ತಿಮ್ಮಾಪೂರ ಗ್ರಾಮದ ನವೀನ್ ಬಸಯ್ಯ ಹಿರೇಮಠಗೆ ಜೂಡೋದಲ್ಲಿ ಚಿನ್ನದ ಪದಕ ಲಭಿಸಿದೆ.

ಜೂಡೋ ಪಂದ್ಯದ ೧೯ರ ವಯೋ ಗುಂಪಿನ ೬೦ ಕೆಜಿ ತೂಕದ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ನವೀನ್ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿದ್ದಾನೆ. ಅಂತಾರಾಷ್ಟ್ರೀಯ ವಿದ್ಯಾರ್ಥಿ ಓಲಂಪಿಕ್ ಸಮಿತಿಯಿಂದ ಮಾನ್ಯತೆ ಪಡೆದಿರುವ ಹಾಗೂ ಏಷಿಯಾದ ವಿದ್ಯಾರ್ಥಿ ಓಲಂಪಿಕ್ ಕೌನ್ಸಿಲ್‌ಗೆ ಸಂಲಗ್ನಗೊಂಡಿರುವ ಭಾರತೀಯ ವಿದ್ಯಾರ್ಥಿ ಓಲಂಪಿಕ್ ಸಂಸ್ಥೆ ಮತ್ತು ಪಂಜಾಬದ ವಿದ್ಯಾರ್ಥಿ ಓಲಂಪಿಕ್ ಸಂಸ್ಥೆಗಳು ರಾಷ್ಟ್ರೀಯ ೫ನೇ ವಿದ್ಯಾರ್ಥಿ ಓಲಂಪಿಕ್ ಕ್ರೀಡೆಗಳನ್ನು ಸಂಘಟಿಸಿದ್ದವು.ಭಾರತೀಯ ವಿದ್ಯಾರ್ಥಿ ಓಲಂಪಿಕ್ ಸಂಸ್ಥೆಯ ಅಧ್ಯಕ್ಷ ಡಾ.ಭಗವತ್‌ಸಿನ್ಹ ವಾನರ್, ಪ್ರಧಾನ ಕಾರ್ಯದರ್ಶಿ ಪ್ರದೀಪ್ ಭಾರದ್ವಾಜ್ ಹಾಗೂ ಪಂಜಾಬದ ವಿದ್ಯಾರ್ಥಿ ಓಲಂಪಿಕ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ರಾಖೇಶ್ ಕುಮಾರ್ ಅವರು ನವೀನ್ ಹಿರೇಮಠಗೆ ಚಿನ್ನದ ಪದಕ ಹಾಗೂ ಪ್ರಮಾಣಪತ್ರ ಪ್ರದಾನ ಮಾಡಿದರು.

ಥೈಲ್ಯಾಂಡ್‌ನ ಬ್ಯಾಂಕಾಕ್‌ದಲ್ಲಿ ಜರುಗಲಿರುವ ಅಂತಾರಾಷ್ಟ್ರೀಯ ವಿದ್ಯಾರ್ಥಿ ಓಲಂಪಿಕ್ ಕ್ರೀಡೆಗಳ ಜೂಡೋ ಪಂದ್ಯದಲ್ಲಿ ಭಾರತವನ್ನು ಪ್ರತಿನಿಧಿಸಿ ಪಾಲ್ಗೊಳ್ಳಲು ಅರ್ಹತೆ ಪಡೆದಿರುವ ನವೀನ್ ಹಿರೇಮಠ ಅದಕ್ಕೆ ಪೂರಕವಾಗಿ ಪ್ರಸ್ತುತ ಬೆಂಗಳೂರಿನಲ್ಲಿ ನಿತ್ಯವೂ ಸುಮಾರು ೬ ತಾಸುಗಳ ಕೋಚಿಂಗ್ ಪಡೆಯುತ್ತಿದ್ದಾನೆ.

ಅಂತಾರಾಷ್ಟ್ರೀಯ ವಿದ್ಯಾರ್ಥಿ ಓಲಂಪಿಕ್ ಕ್ರೀಡೆಗೆ ಆಯ್ಕೆಯಾಗಿ ಥೈಲ್ಯಾಂಡ್‌ಗೆ ತರಳಲಿರುವ ತಮ್ಮೂರಿನ ಅಪ್ಪಟ ಹಳ್ಳಿಗಾಡಿನ ಪ್ರತಿಭೆ ನವೀನ್ ಹಿರೇಮಠಗೆ ತಿಮ್ಮಾಪೂರ ಹಾಗೂ ಸುತ್ತಲಿನ ಗ್ರಾಮಗಳ ಯುವ ಸಂಘಟನೆಗಳು ಅಭಿನಂದಿಸಿವೆ.

Please follow and like us:

2 Replies to “ಧಾರವಾಡದ ನವೀನ್‌ಗೆ ಜೂಡೋದಲ್ಲಿ ಚಿನ್ನ”

Leave a Reply

Your email address will not be published. Required fields are marked *

vi.ai, 649458347518047, DIRECT # 41b5eef6 spotxchange.com, 74964, RESELLER, 7842df1d2fe2db34 # 41b5eef6 spotx.tv, 74964, RESELLER, 7842df1d2fe2db34 # 41b5eef6 spotxchange.com, 104684, RESELLER, 7842df1d2fe2db34 # 41b5eef6 spotx.tv, 104684, RESELLER, 7842df1d2fe2db34 # 41b5eef6 spotxchange.com, 122515, RESELLER, 7842df1d2fe2db34 # 41b5eef6 spotx.tv, 122515, RESELLER, 7842df1d2fe2db34 # 41b5eef6 freewheel.tv, 440657, RESELLER # 41b5eef6 freewheel.tv, 440673, RESELLER # 41b5eef6 freewheel.tv, 364193, RESELLER # 41b5eef6 freewheel.tv, 369249, RESELLER # 41b5eef6 rubiconproject.com, 15476, RESELLER, 0bfd66d529a55807 # 41b5eef6 smartadserver.com, 2776, RESELLER # 41b5eef6 pubmatic.com, 156830, RESELLER # 41b5eef6 google.com, pub-5617098146054077, RESELLER, f08c47fec0942fa0 # 41b5eef6 advertising.com, 24831, RESELLER # 41b5eef6