ಜಿಲ್ಲೆ

ಉಚಿತ ತಪಾಸಣೆ ಶಿಬಿರ

ಕಲಬುರಗಿ: ಯೋಗ ಪ್ರಾಣ ವಿದ್ಯಾ ಕೇಂದ್ರ, ಕಲಬುರಗಿ ಮತ್ತು ಗೆಳೆಯರ ಬಳಗ, ಆನಂದ ನಗರ, ಕಲಬುರಗಿ ಇವರ ಸಂಯುಕ್ತ ಆಶ್ರಯದಲ್ಲಿ ದಿನಾಂಕ ಜುಲೈ 22ರಂದು ಭಾನುವಾರ ಉಚಿತ ತಪಾಸಣಾ ಶಿಬಿರ ಏರ್ಪಡಿಸಲಾಗಿದೆ.

ಈ ಶಿಬಿರದಲ್ಲಿ ಸಕ್ಕರೆ ಪ್ರಮಾಣ (ಬ್ಲಡ್ ಶುಗರ್) ಮತ್ತು ರಕ್ತಡ ಒತ್ತಡ (ಬಿ.ಪಿ) ಪರೀಕ್ಷಿಸಲಾಗುವದು. ಬೆಳಿಗ್ಗೆ ೧೦.೩೦ ಗಂಟೆಯಿಂದ ಮಧ್ಯಾಹ್ನ ೧.೦೦ ಗಂಟೆಯವರೆಗೆ ಶಿಬಿರ ಆಯೋಜಿಸಲಾಗಿದ್ದು, ಡಾ|| ಮಲ್ಹಾರ ರಾವ ಮಲ್ಲೆ ದವಾಖಾನೆ ಜಗತ್, ಕಲಬುರಗಿಯಲ್ಲಿ ನಡೆಯಲಿದೆ ಎಂದು ಶಿಬಿರದ ಸಂಯೋಜಕ ಡಾ. ಮಲ್ಲಾರ ರಾವ್ ಮಲ್ಲೆ ಪ್ರಜಾಕಿರಣಕ್ಕೆ ತಿಳಿಸಿದ್ದಾರೆ.

ಸಾರ್ವಜನಿಕರು ಇದರ ಸದುಪಯೋಗ ಪಡೆಯಲು ಕೋರಲಾಗಿದೆ, ಹೆಚ್ಚಿನ ಮಾಹಿತಿಗಾಗಿ ಮೊ.ನಂ : 9448293777 ಸಂಪರ್ಕಿಸಿರಿ.

Please follow and like us:

Leave a Reply

Your email address will not be published. Required fields are marked *