ಬೆಂಗಳೂರು : ವಿಧಾನ ಪರಿಷತ್ ನಲ್ಲಿ ಖಾಲಿ ಇರುವ ಒಂದು ನಾಮನಿರ್ದೇಶನ ಸದಸ್ಯತ್ವಕ್ಕೆ ಜೆಡಿಎಸ್ ರಾಜ್ಯ ಹಿರಿಯ ಉಪಾಧ್ಯಕ್ಷ ಹಾಗೂ ನವಲಗುಂದ ಮಾಜಿ ಶಾಸಕ ಎನ್.ಹೆಚ್. ಕೋನರಡ್ಡಿ ಅವರನ್ನು ನೇಮಕ ಮಾಡಲು ಜೆಡಿಎಸ್ ವರಿಷ್ಟ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಹಾಗೂ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್. ವಿಶ್ವನಾಥ ಅವರು ನಿರ್ಧರಿಸಿದ್ದಾರೆ.
ಈ ಸಂಬಂಧ ಡಿ. ೧೭ರಂದು ಸೋಮವಾರ ರಾಜ್ಯಪಾಲ ವಜುಬಾಯಿ ವಾಲಾ ಅವರಿಗೆ ಪ್ರಸ್ತಾವನೆ ಕಳುಹಿಸಲಾಗುತ್ತದೆ. ಅವರು ವಿಧಾನ ಪರಿಷತ್ ಗೆ ನಾಮನಿರ್ದೇಶನ ಮಾಡಿ ಈ ಕುರಿತು ಅಧಿಕೃತ ಆದೇಶ ಹೊರಡಿಸಲಿದ್ದಾರೆ ಎಂದು ಜೆಡಿಎಸ್ ನ ಉನ್ನತ ಮೂಲಗಳು ಖಚಿತ ಪಡಿಸಿವೆ.
ಕಳೆದ ಹಲವು ದಿನಗಳಿಂದ ವಿಧಾನ ಪರಿಷತ್ ಗೆ ಎನ್.ಹೆಚ್. ಕೋನರಡ್ಡಿ ಅವರನ್ನು ನೇಮಕ ಮಾಡಬೇಕೆಂಬ ಕೂಗು ಪಕ್ಷದಿಂದ ಕೇಳಿಬರುತ್ತಲೇ ಇತ್ತು. ಕೋನರಡ್ಡಿ ಅವರು ನಾಮಪತ್ರ ಸಲ್ಲಿಸಲು ಹೋಗಿ ಸ್ವಲ್ಪದರಲ್ಲಿಯೇ ರಮೇಶಗೌಡ ಅವರ ಪಾಲಾಗಿತ್ತು.
ಇದರಿಂದಾಗಿ ಮತ್ತೆ ಉತ್ತರ ಕರ್ನಾಟಕಕ್ಕೆ ಅನ್ಯಾಯ ಎಂಬ ಅಸಮಾಧಾನ ಹೊಗೆಯಾಡಿತ್ತು. ಆದರೆ ಈ ಬಾರಿ ಉತ್ತರ ಕರ್ನಾಟಕ ಭಾಗದ ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ವಿಧಾನಸಭಾ ಅಧಿವೇಶನದಲ್ಲಿಯೇ ಉತ್ತರ ಕರ್ನಾಟಕ ಭಾಗದ ಪ್ರಭಾವಿ ರೈತ ಹೋರಾಟಗಾರರು ಹಾಗೂ ಸಮಾಜ ಸೇವಕ ಎನ್.ಹೆಚ್. ಕೋನರಡ್ಡಿ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ನೇಮಕ ಮಾಡುವ ಮೂಲಕ ಈ ಭಾಗದ ಜನರ ಗಮನ ಸೆಳೆಯಲು ಜೆಡಿಎಸ್ ನಾಯಕರು ಮುಂದಾಗಿದ್ದಾರೆ.
ಆ ಮೂಲಕ ಉತ್ತರ ಕರ್ನಾಟಕ ಭಾಗವನ್ನು ಜೆಡಿಎಸ್ ಕಡೆಗಣಿಸಿಲ್ಲ ಎಂಬ ಪರೋಕ್ಷ ಸಂದೇಶ ರವಾನಿಸಲು ವೇದಿಕೆ ಸಜ್ಜುಗೊಂಡಿದೆ.
ರಾಜ್ಯದ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರಕಾರದಲ್ಲಿ ವಿಧಾನ ಪರಿಷತ್ ನಲ್ಲಿ ಖಾಲಿ ಇದ್ದ ಮೂರು ಸ್ಥಾನಗಳ ಪೈಕಿ ಈಗಾಗಲೇ ಕಾಂಗ್ರೆಸ್ ಎರಡು ಸ್ಥಾನಗಳಿಗೆ ಯು.ಬಿ. ವೆಂಕಟೇಶ ಹಾಗೂ ಪ್ರಕಾಶ್ ರಾಠೋಡ ಅವರನ್ನು ನೇಮಿಸಿದೆ. ಅದರಂತೆ ಇನ್ನುಳಿದ ಒಂದು ಸ್ಥಾನ ಜೆಡಿಎಸ್ ನ ಎನ್.ಹೆಚ್. ಕೋನರಡ್ಡಿ ಅವರಿಗೆ ಒಲಿಯಲಿದೆ ಎಂದು ತಿಳಿದುಬಂದಿದೆ.
ಎನ್.ಹೆಚ್. ಕೋನರಡ್ಡಿ ಅವರು ಕಳೆದ ಹಲವು ದಶಕಗಳಿಂದ ದೇವೇಗೌಡ ಹಾಗೂ ಕುಮಾರಸ್ವಾಮಿ ಅವರ ಒಡನಾಟದಲ್ಲಿದ್ದು, ಉತ್ತರ ಕರ್ನಾಟಕ ಭಾಗದ ಅನೇಕ ಜಲ್ವಂತ ಸಮಸ್ಯೆಗಳಿಗೆ ಧ್ವನಿಯಾಗುವ ಮೂಲಕ ಕೇಂದ್ರ ಹಾಗೂ ರಾಜ್ಯ ಸರಕಾರದ ಗಮನ ಸೆಳೆದಿರುವ ಎನ್.ಹೆಚ್. ಕೋನರಡ್ಡಿ ಅವರು ಮಹದಾಯಿ, ಕಳಸಾಬಂಡೂರಿಗಾಗಿ ಹತ್ತು ಹಲವು ವಿಭಿನ್ನ ಹೋರಾಟ ನಡೆಸಿರುವುದನ್ನು ಹಾಗೂ ಈ ಭಾಗದಲ್ಲಿ ಜೆಡಿಸ್ ಪಕ್ಷ ಕಟ್ಟಲು ಅದರಲ್ಲೂ ವಿಶೇಷವಾಗಿ ಹೆಚ್.ಡಿ. ಕುಮಾರಸ್ವಾಮಿ ಅವರು ಹುಬ್ಬಳ್ಳಿಯಲ್ಲಿ ಮನೆ ಮಾಡಲು ಕಾರಣಿಕರ್ತರಾಗಿದ್ದನ್ನು ಇಲ್ಲಿ ಸ್ಮರಿಸಬಹುದು.
Hi there, just became aware of your blog through Google,
and found that it is really informative. I am going to watch
out for brussels. I will appreciate if you continue this in future.
Lots of people will be benefited from your writing.
Cheers! http://vanoeveren.net/__media__/js/netsoltrademark.php?d=interior.my