ರಾಜ್ಯ

ಬಳ್ಳಾರಿಯಲ್ಲಿ ಭರ್ಜರಿ ಗೆಲುವು ಸಾಧಿಸಿದ ಕಾಂಗ್ರೆಸ್ : ತವರು ಕ್ಷೇತ್ರದಲ್ಲಿ ಮುಗ್ಗರಿಸಿದ ಶ್ರೀರಾಮುಲು !

ಬಳ್ಳಾರಿ : ಗಣಿನಾಡು ಬಳ್ಳಾರಿಯಲ್ಲಿ ಅಬ್ಬರಿಸಿ ಬೊಬ್ಬರಿದಿದ್ದ ಬಿಜೆಪಿಯ ಶ್ರೀರಾಮುಲು ಪಡೆ ಹೀನಾಯ ಸೋಲು ಅನುಭವಿಸುವ ಮೂಲಕ ತವರು ಕ್ಷೇತ್ರದಲ್ಲಿಯೇ ಮುಗ್ಗರಿಸಿರುವುದು ಕಾಂಗ್ರೆಸ್ ಪಾಳೇಯಕ್ಕೆ ಭಾರೀ ಟಾನಿಕ್ ನೀಡಿದಂತಾಗಿದೆ.

ಗಣಿಧಣಿ ಜನಾರ್ಧನರಡ್ಡಿಯ ಕಾರ್ಯತಂತ್ರದ ನಡುವೆಯೂ ಸಚಿವ ಡಿ.ಕೆ. ಶಿವಕುಮಾರ ನೇತೃತ್ವದಲ್ಲಿ ಚುನಾವಣಾ ಕಾರ್ಯತಂತ್ರ ಹೆಣೆಯುವ ಮೂಲಕ ಬಿಜೆಪಿಯ ಭದ್ರಕೋಟೆಗೆ ಲಗ್ಗೆ ಹಾಕುವ ಮೂಲಕ ಎರಡು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸುವ ಮೂಲಕ ಬಿಜೆಪಿಯ ನಾಯಕರಿಗೆ ನಡುಕ ಹುಟ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಳ್ಳಾರಿಯಲ್ಲಿ ಗಣಿ ಲೂಟಿ, ಪ್ರಧಾನಿಯ ರಫೇಲ್ ಹಗರಣ, ಆಪರೇಶನ್ ಕಮಲದ ಭೀತಿಗೆ ನಾಡಿನ ಜನತೆ ಸರಿಯಾಗಿ ತೀರ್ಪು ನೀಡಿದ್ದಾರೆ. ಬಿಜೆಪಿಯ ಮೋಸಕ್ಕೆ ಮತದಾರರು ತಕ್ಕ ಉತ್ತರ ನೀಡಿದ್ದಾರೆ ಎಂದು ಕಾಂಗ್ರೆಸ್ ನಾಯಕರು ವಿಶ್ಲೇಷಿಸಿದ್ದಾರೆ.

ಬಿಜೆಪಿಯ ಸೋಲಿನ ಹೊಣೆ ಹೊತ್ತಿರುವ ಶ್ರೀರಾಮುಲು ಸೋಲು ಗೆಲವು ಸಮಾನವಾಗಿ ಸ್ವೀಕರಿಸಿದ್ದೇನೆ. ಸಹಜವಾಗಿಯೇ ಕಾಂಗ್ರೆಸ್ ಆರು ಕ್ಷೇತ್ರಗಳಲ್ಲಿ ಹಿಡಿತ ಸಾಧಿಸಿರುವುದರಿಂದ ಹಿನ್ನಡೆಯಾಗಿದೆ. ಇದನ್ನು ಬರುವ ದಿನಗಳಲ್ಲಿ ಸವಾಲಾಗಿ ಸ್ವಿಕರಿಸಿ, ಕ್ಷೇತ್ರದ ಜನತೆಯ ತೀರ್ಪಿಗೆ ತಲೆ ಬಾಗುತ್ತೇವೆ ಎಂದು ಹೇಳಿದ್ದಾರೆ.

Please follow and like us:

Leave a Reply

Your email address will not be published. Required fields are marked *