ಧಾರವಾಡ: ಅಪ್ರಾಪ್ತೆಯನ್ನು ಪುಸಲಾಯಿಸಿ ಅತ್ಯಾಚಾರ ಎಸಗಿದ ಆರೋಪಿಯೊಬ್ಬನನ್ನು ಇಲ್ಲಿನ ಉಪನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ನಗರದ ಕಮಲಾಪೂರದ ಸಂಗಮೇಶ ಬಸವರಾಜ ಕಮಾಟಿ ಎಂಬಾತನೇ ಬಂಧಿತ ಆರೋಪಿಯಾಗಿದ್ದಾನೆ.
ಬಂಧಿತ ಆರೋಪಿ ಸಂಗಮೇಶ ಆಟೋ ಚಾಲಕನಾಗಿದ್ದು, ಆತ ಖಾಸಗಿ ಶಾಲೆಯಲ್ಲಿ ಕಲಿಯುತ್ತಿದ್ದ ಬಾಲಕಿಯನ್ನು ಪ್ರತಿ ದಿನ ತನ್ನ ಆಟೋರಿಕ್ಷಾದಲ್ಲಿ ಶಾಲೆ ಕರೆದೊಯ್ಯುತ್ತಿದ್ದ, ಮತ್ತು ಮರಳಿ ತಂದು ಬಿಡುತ್ತಿದ್ದ.
ಇದೇ ಸಮಯದಲ್ಲಿ ಆಕೆಯನ್ನು ಪುಸಲಾಯಿಸಿ ಹೊರವಲಯದಲ್ಲಿನ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಸಂಗಮೇಶ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.
ಈ ವಿಷಯ ಬಾಲಕಿಯ ಪಾಲಕರಿಗೆ ತಿಳಿದು, ವೈದ್ಯರ ಬಳಿ ಕರೆದುಕೊಂಡು ಪರೀಕ್ಷಿಸಿದಾಗ ಅತ್ಯಾಚಾರ ಎಸಗಿದ್ದು ಗೊತ್ತಾಗಿದೆ.
ನಂತರ ಬಾಲಕಿಯ ಪಾಲಕರು ಈ ಕುರಿತು ಉಪನಗರ ಠಾಣೆಗೆ ದೂರು ನೀಡಿದ್ದರು.
ಪ್ರಕರಣದ ತನಿಖೆ ನಡೆಸಿದ ಸಿಪಿಐ ಮಹಾಂತೇಶ ಬಸಾಪುರ ಆರೋಪಿಯನ್ನು ಪೋಸ್ಕೋ ಕಾಯ್ದೆಯಡಿ ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.