ಒಂದು ಬಕೆಟ್ ನೀರಿನಲ್ಲಿ ಎರಡು ಮುಷ್ಟಿಯಷ್ಟು ಅಡುಗೆ ಉಪ್ಪು ಅಥವಾ ಸ್ವಲ್ಪ ಸೋಡಾ ಪುಡಿಯನ್ನು ಕಲಿಸಿ ಆ ನೀರಿನೋಳಗೆ ಕಾಲುಗಳನ್ನು ಅರ್ಧಗಂಟೆ ಮುಳುಗಿಸಿಟ್ಟು ಆ ಮೇಲೆ ತೊಳೆಯುವುದರಿಂದ ಕಾಲು ಸೆಳೆತ ಕಡಿಮೆಯಾಗುತ್ತದೆ.
ಕಾಲಿನ ನರಗಳು ಸೆಳೆಯುತ್ತಿದ್ದರೆ, ನುಗ್ಗಿ ಮರದ ಚಕ್ಕೆಯನ್ನು ಒಂದಿಷ್ಟು ಜೀರಿಗೆ ಸೇರಿಸಿ ಅರೆದು ಬಿಸಿ ಮಾಡಿ ಲೇಪಿಸುವುದು.
ಅಂಗಾಲು ನೋವು, ಹಿಮ್ಮಡಿ ನೋವು, ಪಾದ ಜುಮ್ ಹಿಡಿದು ಮರದಂತೆ ಆಗುವುದು ಇದ್ದರೆ ಈ ವ್ಯಾಧೀಗೆ ಮಂಜು ಬಿದ್ದಿರುವ ಹುಲ್ಲಿನ ಮೇಲೆ ಬರೆ ಕಾಲಿನಲ್ಲಿ 15ರಿಂದ 20 ನಿಮಿಷಗಳ ಸಮಯ ನಡೆಯುವುದರಿಂದ ಶಮನವಾಗುತ್ತದೆ.
ಬೂಟು ಧರಿಸಿ ಅಥವಾ ಕಾಲ್ನಡಿಗೆಯ ಅಭ್ಯಾಸವಿಲ್ಲದೆ ಇತರ ಕಾರಣಗಳಿಂದ ಅಂಗಾಲು ಮೃಧುವಾಗಿದ್ದರೆ ಅರ್ಧ ಬಕೇಟ್ ನೀರಿಗೆ 30 ಗ್ರಾಂ ಪಟಕದ ಪುಡಿಯನ್ನು ಹಾಕಿ ಕಲಿಸಿ, ಈ ದ್ರಾವಣದಲ್ಲಿ ಪಾದಗಳನ್ನು ದಿನಕ್ಕೆ 3 ಸಾರಿ 10 ರಿಂದ 12 ನಿಮಿಷಗಳವರೆಗೆ ಇಟ್ಟು ತೆಗೆಯುವುದು ಒಂದು ವಾರ ಮಾಡುವುದರಿಂದ ಶಮನವಾಗುತ್ತದೆ.
ರಾತ್ರಿ ಮಲಗುವ ಮುನ್ನ ಒಂದು ಬಾಳೆಹಣ್ಣು ಅಥವಾ ಎರಡು ಹೋಳು ಪಪ್ಪಾಯಿ ಹಣ್ಣು ತಿನ್ನುವುದರಿಂದ ಮಲಶುದ್ಧಿ. ಆತ್ತಿಯ ಎಲೆಯನ್ನು ಜಜ್ಜಿ ಅರೆದು ಸೋಸಿ 50 ಗ್ರಾಂ ಕಲ್ಲು ಸಕ್ಕರೆಯೊಂದಿಗೆ ದಿನಕ್ಕೆ ಒಂದು ಸಲದಂತೆ 12 ದಿನ ಸೇವಿಸುವುದರಿಂದ ಸರಾಗವಾಗಿ ಮಲವು ವಿಸರ್ಜನೆಯಾಗುವುದು. ಹುರುಳಿಯನ್ನು ನೀರಿನಲ್ಲಿ ಚೆನ್ನಾಗಿ ಬೇಯಿಸಬೇಕು. ಆ ನೀರಿಗೆ ನಿಂಬೆಹಣ್ಣಿನ ರಸ ಹಿಂಡಿ ಸ್ವಲ್ಪ ಉಪ್ಪು ಬೇರೆಸಿ ದಿನ ಒಂದು ಗ್ಲಾಸ್ ಕುಡಿಯುವುದರಿಂದ ಮಲಕಟ್ಟು ನಿವಾರಣೆಯಾಗುವುದು. ಪಪ್ಪಾಯಿ ಕಾಯಿಯನ್ನು ಹೋಳು ಮಾಡಿ ಜೀರಿಗೆ ಪುಡಿ, ಕರಿಮೆಣಸಿನ […]
ಚೇಳು ಕಡಿದಾಗ ಜೀರಿಗೆ ಅರೆದು ಲೇಪನ ಮಾಡುವುದರಿಂದ ಚೇಳಿನ ವಿಷ ದೇಹವನ್ನು ವ್ಯಾಪಿಸುವುದಿಲ್ಲ. ನೋವು ನಿವಾರಕವಾಗಿರುವ ಜೀರಿಗೆ ಲೇಪವು ಬಾವನ್ನು ಕೂಡ ಇಳಿಸುತ್ತದೆ. ಮೂತ್ರ ಮಾಡುವಾಗ ಹೆಚ್ಚು ನೋವು ಉಂಟಾಗುವುದು ಹಾಗೂ ಮೂತ್ರ ಮಾರ್ಗದಲ್ಲಿ ತಡೆ ಉಂಟಾಗುವುದನ್ನು ನಿವಾರಣೆ ಮಾಡಿಕೊಳ್ಳಲು ಜೀರಿಗೆ ಉತ್ತಮ ಔಷಧವಾಗಿದೆ. ಜೀರಿಗೆ ಗರ್ಭಾಶಯವನ್ನು ಕೂಡ ಶುಚಿಗೊಳಿಸುತ್ತದೆ. ಶ್ವೇತ ಪದರವನ್ನು ನಿವಾರಿಸುತ್ತದೆ. ತುಂಬಾ ದಿನಗಳಿಂದ ವಿಷಮ ಜ್ವರ ಭಾದಿಸುತ್ತಿದ್ದರೆ ಅಥವಾ ವಾತ ಪ್ರಧಾನ ಜ್ವರಗಳಿದ್ದಾಗ ಬೆಲ್ಲದೊಂದಿಗೆ ಜೀರಿಗೆಯ ಸೇವನೆ ಬಹಳ ಪರಿಣಾಮಕಾರಿಯಾಗಿದೆ. ತುಪ್ಪ ಮತ್ತು […]
ಅರಸಿನ ಪುಡಿ ಮತ್ತು ಅಜ್ಜವಾನ ಸಮನಾಂಶವಾಗಿ ತೆಗೆದುಕೊಂಡು ನೀರಿನಲ್ಲಿ ನುಣ್ಣಗೆ ಅರೆದು ಕಜ್ಜಿಗೆ ಲೇಪಿಸುವುದರಿಂದ ಗುಣವಾಗುತ್ತದೆ. ಹುಣಸೆ ಎಲೆಗಳನ್ನು ಅರೆದು ಪಟ್ಟು ಹಾಕಿದರೆ ತುರಿ ಕಜ್ಜಿ ಗುಣವಾಗುವುದು. ಸೀಬೆ ಎಲೆ ಮತ್ತು ಅರಸಿಣ ನುಣ್ಣಗೆ ಅರೆದು ಹಚ್ಚುವುದರಿಂದ ತುರಿಕಜ್ಜಿ ಮಾಯವಾಗುತ್ತದೆ. ಆಕಳ ಸಗಣಿಯನ್ನು ಸುಟ್ಟು ಅದರ ಬೂದಿಯೊಂದಿಗೆ ಅಡುಗೆ ಉಪ್ಪು ಬೆರೆಸಿ ಮೈ ಮೇಲೆಲ್ಲಾ ಹಚ್ಚಿ ಅರ್ಧಗಂಟೆ ನಂತರ ಅಂಟುವಾಳ ಕಾಯಿ ಬಳಸಿ ಸ್ನಾನ ಮಾಡುವುದು (ಸಾಬೂನು ಹಚ್ಚಬಾರದು) ನಿಂಬೆರಸದಲ್ಲಿ ಶ್ರೀಗಂಧವನ್ನು ತೇದು ಲೇಪಿಸುವುದರಿಂದ ತುರಿಕಜ್ಜಿ ನಿವಾರಣೆ […]