ರಾಜ್ಯ

ನೂತನ ಡಿಜಿ, ಐಜಿಪಿಯಾಗಿ ಪ್ರವೀಣ್ ಸೂದ್ ನೇಮಕ

ಬೆಂಗಳೂರು prajakiran.com : ರಾಜ್ಯದ ಪೊಲೀಸ್ ಮಹಾನಿರ್ದೇಶಕರಾಗಿ 1986 ಬ್ಯಾಚ್ ನ ಹಿರಿಯ ಐಪಿ ಎಸ್ ಅಧಿಕಾರಿ ಪ್ರವೀಣ್ ಸೂದ್ ಅವರನ್ನು ನೇಮಕಗೊಳಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.

ಅವರು ಈ ಹಿಂದೆ 1989ರಲ್ಲಿ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಆನಂತರ ಬಳ‍್ಳಾರಿ ಹಾಗೂ ರಾಯಚೂರು ಎಸ್ಪಿಯಾಗಿ ಕೆಲಸ ನಿರ್ವಹಿಸಿದ್ದರು.

ಜ.31ರಂದು ನೀಲಮಣಿ ರಾಜು ಅವರು ಸೇವಾ ನಿವೃತ್ತಿಯಿಂದಾಗಿ ಈ ಹುದ್ದೆ ಖಾಲಿಯಾಗಿತ್ತು. ಹೀಗಾಗಿ ಅವರ ಸ್ಥಾನಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳಾದ ಎ.ಎಂ. ಪ್ರಸಾದ ಹಾಗೂ ಪ್ರವೀಣ ಸೂದ್ ಅವರ ಹೆಸರು ಕೇಳಿಬಂದಿತ್ತು.

ಸೇವೆ ಹಿರಿತನದ ಆಧಾರದ ಮೇಲೆ ಎ.ಎಂ. ಪ್ರಸಾದ ಅವರಿಗೆ ಸಿಗುವ ಸಾಧ್ಯತೆಗಳಿವೆ ಎಂದು ಹೇಳಲಾಗಿತ್ತು. ಆದರೆ ಕೊನೆ ಕ್ಷಣದಲ್ಲಿ ಪ್ರವೀಣ ಸೂದ್ ಅವರನ್ನು ನೇಮಿಸಿ ಸರಕಾರ ಆದೇಶಿಸಿದೆ.

ನೂತನ ಡಿಜಿ ಐಜಿಪಿಯಾಗಿ ಪ್ರವೀಣ್ ಸೂದ್ ನೇಮಕದ ಬೆನ್ನಲ್ಲೇ ಅವರಿಗೆ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ.

Please follow and like us:

Leave a Reply

Your email address will not be published. Required fields are marked *