ಅಂತಾರಾಷ್ಟ್ರೀಯ

ನಿರ್ಭಯಾ ಆರೋಪಿಗಳ ಗಲ್ಲಿಗೆ ಮತ್ತೇ ತಡೆಯಾಜ್ಞೆ ನೀಡಿದ ಪಟಿಯಾಲಾ ಕೋರ್ಟ್

ನವದೆಹಲಿ prajakiran.com : ದೇಶವನ್ನೇ ಬೆಚ್ಚಿ ಬೀಳಿಸಿದ ನಿರ್ಭಯಾ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಆರೋಪಿಗಳ ಪೈಕಿ ಫೆ. 1ರಂದು ಫಿಕ್ಸ್ ಆಗಿದ್ದ ಗಲ್ಲು ಶಿಕ್ಷೆಗೆ ಪಟಿಯಾಲಾ ಕೋರ್ಟ್ ಮತ್ತೇ ತಡೆಯಾಜ್ಞೆ ನೀಡಿದೆ.

ಹೆಚ್ಚುವರಿ ಸೆಶನ್ಸ್ ನ್ಯಾಯಾಧೀಶ ಧರ್ಮೇಂದರ್ ರಾಣಾ ಶುಕ್ರವಾರ ತಿಹಾರ್ ಜೈಲಿನ ಅಧಿಕಾರಿಗಳು ಮತ್ತು ಅಪರಾಧಿಗಳ ಪರ ವಕೀಲರ ವಾದಗಳನ್ನು ಆಲಿಸಿದ ಬಳಿಕ ಈ ಆದೇಶ ಹೊರಡಿಸಿದರು.

ನಾಲ್ವರು ದೋಷಿಗಳ ಗಲ್ಲು ಶಿಕ್ಷೆ ಮುಂದೂಡಲಾಗಿದ್ದು, ಇನ್ನೂ ಸಹ ಹೊಸ ದಿನಾಂಕ ನಿಗದಿಯಾಗಿಲ್ಲ.

ಮರಣದಂಡನೆ ತಡೆಹಿಡಿದಿದ್ದ ಮೂರು ಅಪರಾಧಿಗಳ ಅರ್ಜಿಯನ್ನು ಪ್ರಶ್ನಿಸಿ, ತಿಹಾರ್ ಜೈಲಿನ ಅಧಿಕಾರಿಗಳು ನ್ಯಾಯಾಲಯದ ಮೆಟ್ಟಿಲು ಹತ್ತಿದ್ದರು.

ಈ ಪೈಕಿ ಒಬ್ಬ ಅಪರಾಧಿಯ ಕ್ಷಮಾದಾನ ಅರ್ಜಿ ಮಾತ್ರ ಬಾಕಿ ಉಳಿದಿದೆ. ಹೀಗಾಗಿ ಇತರ ಮೂವರನ್ನು ಗಲ್ಲಿಗೇರಿಸಬಹುದಾಗಿದೆ ಎಂದು ಹೇಳಲಾಗಿತ್ತು.

ಒಬ್ಬರ ಅರ್ಜಿ ಮಾತ್ರ ವಿಚಾರಣೇಗೆ ಬಾಕಿಯಿದ್ದು,ಮೂವರನ್ನು ಫೆ. 1ರಂದು ಗಲ್ಲಿಗೇರಿಸಲು ಅವಕಾಶ ಕಲ್ಪಿಸಬೇಕು ಎಂದು ಜೈಲು ಅಧಿಕಾರಿ ಮನವಿ ಮಾಡಿದರು.

ಆದರೆ ಅಪರಾಧಿಗಳ ಪರ ವಕೀಲರು ಜೈಲು ಅಧಿಕಾರಿಗಳ ಮಾತಿಗೆ ಒಪ್ಪಲಿಲ್ಲ. ಒಬ್ಬ ಅಪರಾಧಿಯ ಕ್ಷಮಾದಾನ ಮನವಿ ಬಾಕಿ ಇರುವಾಗ, ಇತರರನ್ನು ಗಲ್ಲಿಗೇರಿಸಲಾಗುವುದಿಲ್ಲ ಎಂಬ ನಿಯಮ ಇದೆ ಎಂದು ವಾದ ಮಂಡಿಸಿದರು.

ಹೀಗಾಗಿ ಫೆ. 1ರ ಗಲ್ಲುಶಿಕ್ಷೆಯನ್ನು ಮುಂದೂಡುವಂತೆ ದೋಷಿಗಳಾದ ಪವನ್​ ಗುಪ್ತಾ, ವಿನಯ್​ ಕುಮಾರ್​ ಶರ್ಮಾ ಮತ್ತು ಅಕ್ಷಯ್​ ಕುಮಾರ್​​ ನ್ಯಾಯಾಲಯವನ್ನು ಒತ್ತಾಯಿಸಿದ್ದರು.

ಅಪರಾಧಿ ವಿನಯ್​ ಕ್ಷಮಾದಾನ ಅರ್ಜಿ ವಿಚಾರಣೆ ಇನ್ನೂ ಸಹ ಬಾಕಿಯಿದೆ ಎಂದು ವಕೀಲ ಎಪಿ ಸಿಂಗ್ ವಾದಿಸಿದರು.

ಹೀಗಾಗಿ ದೆಹಲಿ ಹೈಕೋರ್ಟ್ ಈ ನಾಲ್ವರು ಅಪರಾಧಿಗಳಿಗೆ ಡೆತ್ ವಾರೆಂಟ್ ಹೊರಡಿಸಿ, ಜನವರಿ 22, ಬೆಳಗ್ಗೆ 7ಗಂಟೆಗೆ ನೇಣಿಗೇರಿಸಲು ಸಮಯ ನಿಗದಿ ಪಡಿಸಿತ್ತು.

ಆದರೆ, ಕ್ಷಮಾದಾನ ಅರ್ಜಿ ಇನ್ನೂ ವಿಚಾರಣಾ ಹಂತದಲ್ಲಿರುವುದರಿಂದ ದೆಹಲಿಯ ಪಟಿಯಾಲಾ ಕೋರ್ಟ್ ಮತ್ತೇ ತಿಹಾರ್ ಜೈಲು ಅಧಿಕಾರಿಗಳಿಗೆ ಹೊಸದಾಗಿ ಡೆತ್ ವಾರೆಂಟ್ ಹೊರಡಿಸಲು ಮನವಿ ಸಲ್ಲಿಸುವಂತೆ ಸೂಚಿಸಿತ್ತು.

ಇದರಿಂದಾಗಿ ಜ. 22ರ ಬದಲಿಗೆ ಫೆ. 1ರಂದು ನಿಗದಿಯಾಗಿತ್ತು. ಅದು ಕೂಡ ಹುಸಿಯಾಗಿದೆ.

ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ನಿರ್ಭಯಾ ತಾಯಿ, ಕೋರ್ಟ್ ಎಳು ವರ್ಷಗಳ ಕಾಲ ಅಲೆದಾಡಿಸುತ್ತಿದೆ. ತಡೆಯಾಜ್ಞೆ ನೀಡುವುದು ಮೊದಲೇ ನಿಗದಿಯಾಗಿತ್ತು,

ಆರೋಪಿಗಳು ನಮಗೆ ಹೇಳಿಯೇ ಕೋರ್ಟ್ ಗೆ ಹೋಗಿದ್ದರು. ಇದು ನಮಗೆ ನ್ಯಾಯ ನೀಡುವ ರೀತಿಯಾ ಎಂದು ಪ್ರಶ್ನಿಸಿದರು.

2012ರ ಡಿ. 16ರ ರಾತ್ರಿ ನವದೆಹಲಿಯಲ್ಲಿ ಚಲಿಸುವ ಬಸ್ ನಲ್ಲಿ ಆರು ಮಂದಿ ಸಾಮೂಹಿಕ ಅತ್ಯಾಚಾರ ಮಾಡಿ ಎಸೆದು ಹೋಗಿದ್ದರು.

ಬಳಿಕ ಚಿಕಿತ್ಸೆ ಫಲಿಸದೆ ಅವರು ಮೂರು ದಿನಗಳ ಜೀವನ್ಮರಣ ಹೋರಾಟ ನಡೆಸಿ ಸಾವನ್ನಪ್ಪಿದ್ದರು. ಇದರಿಂದಾಗಿ ನಿರ್ಭಯಾ ಕುಟುಂಬ ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿದೆ.

Please follow and like us:

One Reply to “ನಿರ್ಭಯಾ ಆರೋಪಿಗಳ ಗಲ್ಲಿಗೆ ಮತ್ತೇ ತಡೆಯಾಜ್ಞೆ ನೀಡಿದ ಪಟಿಯಾಲಾ ಕೋರ್ಟ್”

  1. This is a very very happy news to me and my brother s ,sisters ,of the district people thanks, looking forward to precious water
    Manjunath Mysore

Leave a Reply

Your email address will not be published. Required fields are marked *