ಧಾರವಾಡ : ಮುಂಬರುವ ಲೋಕಸಭಾ ಚುನಾವಣೆಗೆ ಮುಂದೆ ಸಮಯ ಹೇಗೆ ಬರತ್ತೋ ಹಾಗೆ ಹೊಂದಾಣಿಕೆಯಿಂದ ಚುನಾವಣೆ ಮಾಡುತ್ತೇವೆ. ನೋಡೋಣ ಮುಂದೆ ಟೈಮ್ ಹೇಗೆ ಬರೋತ್ತೆ ಗೊತ್ತಿಲ್ಲ ಎಂದು ಮಾಜಿ ಸಚಿವ ವಿನಯ ಕುಲಕರ್ಣಿ ತಿಳಿಸಿದರು.
ಅವರು ಭಾನುವಾರ ನಗರದಲ್ಲಿ ಪ್ರಜಾಕಿರಣದೊಂದಿಗೆ ಮಾತನಾಡಿ, ರಾಜಕೀಯ ನಾವು ಮಾಡೇ ಮಾಡುತ್ತೇವೆ. ಇದೇ ವೇಳೆ ನಾನೇನು ಲೋಕಸಭಾ ಚುನಾವಣೆಗೆ ನಿಲ್ಲೋಲ್ಲ ಅಂತಾ ಹೇಳುತ್ತಿಲ್ಲ ಎಂದರು.
ಲೋಕಸಭಾ ಚುನಾವಣೆಗೆ ಜೆಡಿಎಸ್ ಮಾಜಿ ಶಾಸಕ ಎನ್.ಹೆಚ್. ಕೋನರಡ್ಡಿ ಸ್ಪರ್ಧೆ ವಿಚಾರಕ್ಕೆ ಕುರಿತಂತೆ ಪ್ರತಿಕ್ರಿಯಿಸಿದಅವರು ಚುನಾವಣೆಗೆ ನಾನು ಆಕಾಂಕ್ಷಿ ಅಂತಿಲ್ಲ. ನಾವು ಅವರು ಹೊಂದಾಣಿಕೆ ಮಾಡಿಕೊಂಡು ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದ ಅವರು ರಾಜ್ಯದ ಸಮ್ಮಿಶ್ರ ಸರ್ಕಾರದಲ್ಲಿ ಎಲ್ಲವೂ ಸರಿಯಿಲ್ಲ ಅನ್ನೋ ವಿಚಾರಕ್ಕೆ ಸಂಬಂಧಿಸಿದಂತೆ ಸಮ್ಮಿಶ್ರ ಅಂದಾಗ ಇಬ್ಬರೂ ಹೊಂದಾಣಿಕೆಯಿಂದ ಇರಬೇಕು. ಇಬ್ಬರಿಗೂ ಯಾವುದೇ ತೊಂದರೆ ಇಲ್ಲ.ಯಾರಿಗೂ ಚುನಾವಣೆ ಹೋಗುವ ಅವಶ್ಯಕತೆ ಇಲ್ಲ. ಬಿಜೆಪಿಯವರಿಗೆ ಕೂಡ ಚುನಾವಣೆ ಅವಶ್ಯಕತೆ ಇಲ್ಲ ಎಂದರು.
ಸಮ್ಮಿಶ್ರ ಸರ್ಕಾರದಲ್ಲಿ ಲಿಂಗಾಯತ ನಾಯಕರಿಗೆ ಮಾನ್ಯತೆ ಸಿಕ್ಕಿದೆ. ಜೆಡಿಎಸ್ ನಲ್ಲಿ ಎಲೆಕ್ಟ್ ಆದವರು ಜಾಸ್ತಿ ಜನ ಇರಲಿಲ್ಲ. ಆದರೂ ಮಾಜಿ ಸಚಿವ ಎಂ.ಸಿ. ಮನಗೂಳಿ, ಹಾಗೂ ವೆಂಕಟರಾವ್ ನಾಡಗೌಡರಿಗೆ ಮಂತ್ರಿ ಸ್ಥಾನ ಸಿಕ್ಕಿದೆ. ನಮ್ಮ ಭಾಗದಲ್ಲಿ ಇನ್ನು ಇಬ್ಬರು, ಮೂವರಿಗೆ ಸಚಿವ ಸ್ಥಾನ ಸಿಗಬೇಕಿತ್ತು. ಮುಂದಿನ ಸಲ ಉತ್ತರ ಕರ್ನಾಟಕ ಭಾಗದವರಿಗೆ ಕೊಡುವ ಚಾನ್ಸ್ ಇದೆ ಎಂದರು.
ಇನ್ನು ಇದೇ ವೇಳೆ ಉತ್ತರ ಕರ್ನಾಟಕ ನಿರ್ಲಕ್ಷ್ಯ ಎಂಬುದು ಒಳ್ಳೇಯದಲ್ಲ. ಉತ್ತರ ಕರ್ನಾಟಕ ಪ್ರತ್ಯೇಕ ಮಾಡಿದರೆ ಎಷ್ಟು ರೆವಿನ್ಯೂ ಜೆನರೆಟ್ ಆಗೊತ್ತೆ? ಎಂದು ಪ್ರಶ್ನಿಸಿದವಿನಯ ಕುಲಕರ್ಣಿ ಈ ಹಿಂದೆ ಕರ್ನಾಟಕ ಏಕೀಕರಣ ಮಾಡಲು ಎಷ್ಟು ಹೋರಾಟ ನಡೆದಿದೆ. ಬಹಳಷ್ಟು ಜನ ಶ್ರಮವಹಿಸಿದ್ದಾರೆ. ಅಂತಹದನ್ನು ಒಡೆಯೋದು ಸೂಕ್ತ ಅಲ್ಲ. ಏನೆಲ್ಲಾ ಬೇಡಿಕೆಗಳಿವೆ, ಅವುಗಳನ್ನು ಕೇಳೋಣ. ನಾವುಅಧಿಕಾರದಲ್ಲಿದ್ದಾಗ ಸಾಕಷ್ಟು ಅಭಿವೃದ್ಧಿ ಮಾಡಿದ್ದೇವೆ ಎಂದು ಹೇಳಿದರು.
ಸಮ್ಮಿಶ್ರ ಸರ್ಕಾರದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕಡೆಗಣಿಸುವ ಪ್ರಶ್ನೆಯೇ ಉದ್ಭವಿಸಲ್ಲ. ಸಿದ್ದರಾಮಯ್ಯ ಅವರು ನಮ್ಮ ಲೀಡರ್. ಇಂದು ಎಲ್ಲ ಅವರಂತೆಯೇ ನಡೆಯುತ್ತಿದೆ ಎಂದಅವರು ಲಿಂಗಾಯತ,ವೀರಶೈವ ಎರಡು ಒಂದೇ, ಅದರಲ್ಲಿ ಬೇರೆ ಏನಿಲ್ಲ. ಈ ಹಿಂದೆ ಹಲವಾರು ಬಾರಿ ಹೋರಾಟ ಮಾಡಿದ್ದೇವೆ, ಅದರ ಬಗ್ಗೆ ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಕಳುಹಿಸಲಾಗಿದೆ. ಶೀಘ್ರದಲ್ಲಿಯೇ ಎಲ್ಲ ಮುಖಂಡರ ಜೊತೆಗೆ ಸಭೆ ಕರೆಯುತ್ತಿದ್ದೇವೆ. ಸಭೆಯಲ್ಲಿ ಏನಾಗುತ್ತದೆ ಅನ್ನೋದನ್ನ ನೋಡೋಣ ಎಂದು ಮಾಜಿ ಸಚಿವ ವಿನಯ ಕುಲಕರ್ಣಿ ತಿಳಿಸಿದರು.