ಧಾರವಾಡ : ಧರ್ಮಸ್ಥಳದ ಧರ್ಮಾಧಿಕಾರಿಗಳಾದ ರಾಜರ್ಷಿ ಪೂಜ್ಯ ಡಾ. ಡಿ ವೀರೇಂದ್ರ ಹೆಗ್ಗೆಡೆಯವರ ೭೦ನೇ ಹುಟ್ಟುಹಬ್ಬದ ನಿಮ್ಮಿತ್ತ ಧಾರವಾಡದ ಜೆ.ಎಸ್.ಎಸ್ ಕನ್ನಡ ಮಾಧ್ಯಮ ಪ್ರೌಢ ಶಾಲೆಯ ಮಕ್ಕಳು ನಾನಾ ಪುಷ್ಪಗಳಿಂದ ಅವರ ಭಾವಚಿತ್ರವನ್ನು ಬಿಡಿಸಿ ಶುಭಾಶಯ ಕೋರಿ ಗಮನ ಸೆಳೆದಿದ್ದಾರೆ.
ಅವರ ಹುಟ್ಟು ಹಬ್ಬದ ಪ್ರಯುಕ್ತ ಜನತಾ ಶಿಕ್ಷಣ ಸಮಿತಿಯ ಕಾರ್ಯದರ್ಶಿಗಳಾದ ಡಾ. ನ ವಜ್ರಕುಮಾರವರು ಹಾಗೂ ಹಣಕಾಸು ಅಧಿಕಾರಿಗಳಾದ ಡಾ. ಅಜಿತ್ ಪ್ರಸಾದರವರು ಹುಟ್ಟು ಹಬ್ಬದ ಶುಭಾಶಯಗಳನ್ನು ಕೋರಿದರು. ಶಾಲೆಯ ಮುಖ್ಯೋಪಾಧ್ಯಯರಾದ ರಜನಿ ಹೆಚ್ ದಾಸ್‌ರವರು, ಶಿಕ್ಷಕ ವೃಂದ ಹಾಗೂ ಎಲ್ಲ ವಿದ್ಯಾರ್ಥಿಗಳು ಶುಭಾಶಯಗಳನ್ನು ಆ ಮೂಲಕ ಕೋರಿದರು.
ಮಕ್ಕಳ ಈ ವಿಶಿಷ್ಟ ಪ್ರಯತ್ನಕ್ಕೆ ನಮ್ಮ ಪ್ರಜಾಕಿರಣದ ಬಳಗದ ವತಿಯಿಂದಲೂ ಒಂದು ಅಭಿನಂದನೆ ಸಲ್ಲಿಸೋಣ.