ಧಾರವಾಡ : ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಆಟೋಗಳಿಗೆ ಮೀಟರ್ ಕಡ್ಡಾಯಗೊಳಿಸಿದ್ದರೂ ಅದನ್ನು ಉಲ್ಲಂಘಿಸಿ ಸಂಚರಿಸುತ್ತಿದ್ದ ೫೮ ದ್ವಿ ಚಕ್ರ ವಾಹನ ಮತ್ತು ೭ ಆಟೋ ರೀಕ್ಷಾಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಹೊಸೂರ ಸರ್ಕಲ್ ದಿಂದ ಆರ್.ಟಿ.ಓ ಆಫೀಸ್ ವರೆಗೆ ಚಲಾಯಿಸಿಕೊಂಡು ಬರುವ ಮತ್ತು ಹೋಗುವ ಮೋಟರ್ ಸೈಕಲ್, ಆಟೋ ರೀಕ್ಷಾಗಳನ್ನು ವಿಶೇಷ ತಪಾಸಣೆ ಮೂಲಕ ವಾಹನಗಳ ದಾಖಲೆಗಳನ್ನು ಪರಿಶೀಲಿಸಲಾಯಿತು.
ನೂನ್ಯತೆ ಕಂಡು ಬಂದ ದ್ವಿ ಚಕ್ರ ವಾಹನಗಳನ್ನು ಪರೀಶಿಲಿಸಿದ್ದು ಅದರಲ್ಲಿ ಮುಖ್ಯವಾದ ಕೆ.ಟಿ.ಎಂ. ಬೈಕ್, ಪಲ್ಸರ್, ಬುಲಟ್ ವಾಹನಗಳನ್ನು ವಿಶೇಷವಾಗಿ ತಪಾಸಣೆ ನಡೆಸಲಾಯಿತು.
ಆ ಕಾಲಕ್ಕೆ ವಾಹನ ಚಾಲನೇ ಮಾಡುವವರ ಬಳಿ ಚಾಲನಾ ಪತ್ರ ಇಲ್ಲದ, ಹೆಲ್ಮೆಟ್ ಧರಿಸದೇ ಇರುವ, ವಿಮಾ ಪತ್ರ ಹೊಂದದೆ ಇದ್ದ ಬಗ್ಗೆ ಹಾಗೂ ಸೂಕ್ತ ದಾಖಲಾತಿಗಳು ಇಲ್ಲದೇ ಇರುವ ವಾಹನಗಳ ಮೇಲೆ ಒಟ್ಟು೧೩೩೧ ಪ್ರಕರಣಗಳನ್ನು ದಾಖಲಿಸಿಕೊಂಡು ಒಟ್ಟು೧,೫೯,೮೫೦ ರೂಪಾಯಿ ದಂಡವನ್ನು ಸಂಗ್ರಹಿಸಲಾಯಿತು.
ಸದರಿ ತಪಾಸಣೆ ಕಾಲಕ್ಕೆ ೩೧ ತಂಡಗಳನ್ನಾಗಿ ಮಾಡಿದ್ದು, ಹುಬ್ಬಳ್ಳಿ ಧಾರವಾಡ ನಗರದ ಎಲ್ಲಾ ಎಸಿಪಿ ಹಾಗೂ ಹುಬ್ಬಳ್ಳಿ ಧಾರವಾಡ ನಗರದ ಎಲ್ಲಾ ಪೊಲೀಸ್ ಇನ್ಸಪೆಕ್ಟರ್ ಅವರು ಅಧೀನ ಅಧಿಕಾರಿ ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಲಾಗುತ್ತಿದೇ.
ಆಟೋ ಮೀಟರ್‌ಕುರಿತು ಹಾಗೂ ದ್ವಿ ಚಕ್ರ ವಾಹನಗಳ ದಾಖಲಾತಿ ಪರಿಶೀಲನೆ ಹಾಗೂ ಹೆಲ್ಮೆಟ್‌ಕುರಿತು ವಿಶೇಷ ಕಾರ್ಯಾಚರಣೆ ಮುಂದೆವರೆಯಲಿದೆ ಎಂದು ಡಿಸಿಪಿ ಬಿ.ಎಸ್ ನೇಮಗೌಡ ಹಾಗೂ ಧಾರವಾಡ ಸಂಚಾರ ಪೊಲೀಸ್ ಠಾಣೆ ಇನ್ಸಪೆಕ್ಟರ್ ಮುರುಗೇಶ ಚನ್ನಣ್ಣವರ ಅವರು ಪ್ರಜಾಕಿರಣ.ಕಾಮ್ ಗೆ ತಿಳಿಸಿದ್ದಾರೆ.