ಗದಗ : ರಾಜ್ಯದ ದೊರೆ ಹೆಚ್.ಡಿ. ಕುಮಾರಸ್ವಾಮಿ ಅವರು ೨೦೦೭ರ ಫೆ. ೨೮ ರಂದು ಸುಗ್ನಹಳ್ಳಿ ಗ್ರಾಮ ಪ್ರವೇಶ ಮಾಡಿದಾಗ ಸಂಜೆ ೭ ಗಂಟೆಯಾಗಿತ್ತು.
ಗದಗ, ಹಾವೇರಿ ಹಾಗೂ ಧಾರವಾಡ ಜಿಲ್ಲೆ ಸೇರಿದಂತೆ ಉತ್ತರ ಕರ್ನಾಟಕ ಭಾಗದ ವಿವಿಧೆಡೆಯಿಂದ ಜನ ಸಾಗರವೇ ಮನವಿ ಕೊಡಲು ಸುಗ್ನಹಳ್ಳಿ ಗ್ರಾಮಕ್ಕೆ ಆಗಮಿಸಿತ್ತು.
ಅದರೊಂದಿಗೆ ಸುತ್ತಲಿನ ಹತ್ತಾರು ಹಳ್ಳಿಗಳ ಸಾವಿರಾರು ಜನರೊಂದಿಗೆ ಉಭಯ ಕುಶಲೋಪರಿ ನಡೆಸಿ, ಪ್ರತಿಯೊಬ್ಬರ ಅಹವಾಲನ್ನು ಸಮಾಧಾನದಿಂದ ಆಲಿಸಿದ್ದರಿಂದ ಮಧ್ಯರಾತ್ರಿ ೨ರವರೆಗೆ ಜನತಾದರ್ಶನ ನಡೆದಿತ್ತು ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎನ್. ಹೆಚ್. ಕೋನರಡ್ಡಿ ತಿಳಿಸಿದರು.
ಅವರು ಭಾನುವಾರ ಗ್ರಾಮದಲ್ಲಿ ಜನರೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಆದರೂ ಸಿಎಂ ಕುಮಾರಸ್ವಾಮಿ ಅವರು ಸ್ವಲ್ಪವೂ ಬೇಸರಿಕೊಳ್ಳದೆ, ಉತ್ಸಾಹದಿಂದ ಬಹುತೇಕ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಮುಕ್ತಿ ಹಾಡಿದ್ದು ಇಂದಿಗೂ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿದೆ ಎಂದರು.
ಗ್ರಾಮದವರೇ ಸಿಎಂ ಆಪ್ತ ಸಹಾಯಕ…
ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಸುಗ್ನಹಳ್ಳಿ ಗ್ರಾಮದ ರೈತ ಬಸವರಾಜ ಬಸಯ್ಯ ಹೊಂಬಾಳಿಮಠ ಅವರ ಮಗ ಗಂಗಾಧರ ಸದ್ಯ ಸಿಎಂ ಹೆಚ್.ಡಿ ಕುಮಾರಸ್ವಾಮಿಯವರ ಆಪ್ತ ಸಹಾಯಕ. ಅವರೊಂದಿಗೆ ಕಳೆದ ಒಂದು ದಶಕದಿಂದ ಒಡನಾಟ ಹೊಂದಿರುವ ಗಂಗಾಧರ ಅವರು ಅಂದಿನಿಂದ ಇಂದಿನವರೆಗೆ ಅವರೊಂದಿಗೆ ಕಾರ್ಯನಿರ್ವಹಿಸುತ್ತಿರುವುದು ವಿಶೇಷ.
ವೃದ್ದಾಪ್ಯ ವೇತನ ಹೆಚ್ಚಳ…
ಗ್ರಾಮದ ಹಿರಿಯ ಜೀವಗಳ ಮನವಿಗೆ ಸ್ಪಂದಿಸಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ವೃದ್ದಾಪ್ಯ ವೇತನವನ್ನು ಹೆಚ್ಚಿಸುವ ಭರವಸೆ ನೀಡಿದ್ದರು. ಅದರಂತೆ ರಾಜ್ಯದ ಎಲ್ಲ ಹಿರಿಯ ನಾಗರಿಕರಿಗೆ ಅನ್ವಯವಾಗುವಂತೆ ಗೌರವಧನ ಹೆಚ್ಚಿಸಿ ಆದೇಶ ಹೊರಡಿಸಿದರು.
ಬಸ ಸಂಚಾರ ಹೆಚ್ಚಳ…
ಗದಗ ಜಿಲ್ಲೆಯ ಕಟ್ಟಕಡೆಯ ಹಳ್ಳಿಯಾಗಿದ್ದ ಸುಗ್ನಹಳ್ಳಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಯವರ ಗ್ರಾಮ ವಾಸ್ತವ್ಯದ ಫಲದಿಂದಾಗಿ ಗ್ರಾಮಕ್ಕೆ ಬಸ್ ಸಂಚಾರ ಕೂಡ ಹೆಚ್ಚಳಗೊಂಡಿದೆ. ಅಂದು ಕೇವಲ ಸಾಂಕೇತಿಕವಾಗಿ ಓಡಾಡುತ್ತಿದ್ದ ಬಸ್ಗಳ ಸಂಖ್ಯೆ ಇಂದು ಗಣನೀಯವಾಗಿ ಸಂಚರಿಸುವಂತಾಗಿದೆ.
ಇದರಿಂದಾಗಿ ಸುತ್ತಲಿನ ಹತ್ತಾರು ಹಳ್ಳಿಗಳ ಜನತೆಯ ಸುಗ್ನಹಳ್ಳಿ ಗ್ರಾಮವಾಸ್ತವ್ಯಕ್ಕೆ ಕುಮಾರಸ್ವಾಮಿಯವರ ಆಗಮನದಿಂದಾಗಿ ಹೆಚ್ಚಿನ ಮಹತ್ವ ಬಂದಿದೆ ಎಂದು ಇಂದಿಗೂ ಸ್ಮರಿಸುತ್ತಾರೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎನ್. ಹೆಚ್. ಕೋನರಡ್ಡಿ ತಿಳಿಸಿದರು.