ಧಾರವಾಡ : ವಿದ್ಯಾರ್ಥಿನಿಯರು ರಂಗೋಲಿ ಬಿಡಿಸುವುದು ಸರ್ವೆ ಸಾಮಾನ್ಯ. ಆದರೆ ಇಲ್ಲಿಯ ಮೃತ್ಯುಂಜಯ ಕಲಾ, ವಾಣಿಜ್ಯ ಮಹಾವಿದ್ಯಾಲಯದ ಕಂಪ್ಯೂಟರ ವಿಭಾಗದ ವಿದ್ಯಾರ್ಥಿಗಳು ತಾವೇನು ಕಡಿಮೆ ಎಂಬಂತೆ ತಮ್ಮ ಕೈ ಚಳಕದಲ್ಲಿ ಒಂದಕ್ಕಿಂತ ಒಂದು ಅದ್ಬುತವಾದ ರಂಗೋಲಿಗಳನ್ನು ಅರಳಿಸಿದರು.
ಅದರಲ್ಲಿ ನಾವು ದಿನ ನಿತ್ಯ ಬಳಸುವ ವಿವಿಧ ಸಾಮಾಜಿಕ ಜಾಲತಾಣಗಳು ಅರಳಿದ್ದವು. ಕಾಲೇಜನಲ್ಲಿ ಹಮ್ಮಿಕೊಂಡಿದ್ದ ಟೆಕ್ನೊ ಫನ’ ನಲ್ಲಿ 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರು ಭಾಗವಹಿಸಿದ್ದರು.
ತಂತ್ರಜ್ಞಾನದ ವಿವಿಧ ಮಹಲುಗಳನ್ನು ಅರಿಯುವ ಮತ್ತು ಅದರ ಕುರಿತು ವಿವಿಧ ಚಿಹ್ನೆಗಳ ಮತ್ತು ಚಿಹ್ನೆಗಳ ಉದ್ಧೇಶಗಳನ್ನು ಚಿತ್ರವನ್ನು ಬಿಡಿಸುವುದರ ಮುಖಾಂತರ ವಿದ್ಯಾರ್ಥಿಗಳು ತಮ್ಮ ಕ್ರಿಯಾಶೀಲತೆ, ಕಾರ್ಯಕ್ಷಮತೆ ಮತ್ತು ಕೌಶಲ್ಯತೆಯನ್ನು ಪ್ರದರ್ಶಿಸಿದರು.
ಧಾರವಾಡ : ಅವಳಿ ನಗರದಲ್ಲಿ ಕಳೆದ ಹಲವು ದಿನಗಳಿಂದ ಪೊಲೀಸರು ಆಟೋ ಚಾಲಕರ ಮೇಲೆ ದೌರ್ಜನ್ಯ, ದಬ್ಬಾಳಿಕೆ ನಡೆಸುತ್ತಿದ್ದು, ಚಾಲಕರ ಬದುಕು ಅತಂತ್ರವಾಗಿದೆ ಎಂದು ಆರೋಪಿಸಿ ಟಿಪ್ಪು ಸುಲ್ತಾನ್ ಸಂಯುಕ್ತ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಕಾರ್ಯಕರ್ತರು ಕಾನೂನು ಜಾರಿಗೊಳಿಸುವ ನೆಪದಲ್ಲಿ ಆಟೋ ಚಾಲಕರ ಮೇಲೆ ಇಲ್ಲ ಸಲ್ಲದ ನಿಯಮಾವಳಿ ಹೇರಿದರೆ, ಅವರು ಜೀವನ ನಡೆಸುವುದು ಹೇಗೆ ಎಂದು ಪ್ರಶ್ನಿಸಿದರು. ಹುಬ್ಬಳ್ಳಿ-ಧಾರವಾಡದಲ್ಲಿ 1600ಕ್ಕೂ ಹೆಚ್ಚು ಆಟೋ ಚಾಲಕರಿದ್ದು, ವಿಮಾ ಮೊತ್ತ […]
ಧಾರವಾಡಃ ೨೦ ವರ್ಷಗಳಿಂದ ಸಾರಿಗೆ ಸಂಸ್ಥೆಯ ಧಾರವಾಡ ವಿಭಾಗೀಯ ಘಟಕದಲ್ಲಿ ನಿರ್ವಾಹಕನಾಗಿ ಸೇವೆ ಸಲ್ಲಿಸಿದ ನನಗೆ ಇಲಾಖೆ ಹಿರಿಯ ಅಧಿಕಾರಿಗಳು ಅಮಾನತು ಆದೇಶ ನೀಡಿ, ಅನ್ಯಾಯ ಮಾಡಿದ್ದಾರೆ. ಹೀಗಾಗಿ ತಮಗೆ ನ್ಯಾಯ ಒದಗಿಸುವಂತೆ ಅಮಾತ್ತುಗೊಂಡ ಬಸ್ ನಿರ್ವಾಹಕ ಹರೀಶ ಪಟ್ನಾಯಿಕ್ ಅಳಲು ತೊಡಿಕೊಂಡಿದ್ದಾರೆ. ಅವರು ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜು.೨೩ ರಂದು ಪಣಜಿ-ಹುಬ್ಬಳ್ಳಿ ಮಾರ್ಗದಲ್ಲಿ ಕರ್ತವ್ಯ ನಿರ್ವಹಿಸುವ ವೇಳೆ ಅಳ್ನಾವರ ಸಮೀಪ ಹೊಟ್ಟೆ ನೋವು ಕಾಣಿಸಿಕೊಂಡ ಪರಿಣಾಮ ಎರಡು ಸಲ ಬಹಿರ್ದೆಸೆಗೆ ಹೋಗಿದ್ದೆ. ಆ ವೇಳೆ […]
ಧಾರವಾಡ : ಶತಮಾನೋತ್ಸವ ಸಂಭ್ರಮದಲ್ಲಿರುವ ಇಲ್ಲಿಯ ಕರ್ನಾಟಕ ಕಾಲೇಜಿನ ಗೋದಾವರಿ ಹಾಸ್ಟೆಲ್ ನ ಶೌಚಾಲಯಗಳು ದುರಸ್ತಿಗೆ ಬಂದು ಹಲವು ದಿನಗಳೇ ಕಳೆದಿವೆ. ಆದರೂ ಈವರೆಗೆ ಯಾರೊಬ್ಬರು ಸ್ಪಂದಿಸದ ಕಾರಣ ದಿನನಿತ್ಯ ನೂರಾರು ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಈ ಬಗ್ಗೆ ಹಾಸ್ಟೆಲ್ ಉಸ್ತುವಾರಿ ವಹಿಸಿಕೊಂಡವರಿಗೆ ಹಾಗೂ ಸಂಬಂಧಪಟ್ಟ ಮೇಲಾಧೀಕಾರಿಗಳಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗದ ಹಿನ್ನಲೆಯಲ್ಲಿ ರೊಚ್ಚಿಗೆದ್ದ ವಿದ್ಯಾರ್ಥಿಗಳು ಶೌಚಾಲಯದಲ್ಲಿ ದೊಡ್ಡ ದೊಡ್ಡ ಕಲ್ಲು ಇಟ್ಟು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಕೆಟ್ಟು ಕೆರ ಹಿಡಿದಿರುವ ವ್ಯವಸ್ಥೆಗೆ ಹಿಡಿ ಶಾಪ […]