ಬೆಳಗಾವಿ : ಜಿಲ್ಲೆಯ ಬೈಲಹೊಂಗಲದ ಪಟ್ಟಣದಲ್ಲಿರುವ ಆಕ್ಸಿಸ್ ಬ್ಯಾಂಕ್ ರೈತರಿಂದ ಸಾಲ ವಸೂಲಾತಿಗೆ ಕೋರ್ಟ್ ಮೊರೆ ಹೋಗಿರುವುದರಿಂದ ಕೋಲ್ಕತ್ತಾ ನ್ಯಾಯಾಲಯ ರೈತರಿಗೆ ಅರೆಸ್ಟ್ ವಾರೆಂಟ್ ಜಾರಿ ಮಾಡಿದೆ.
ಈ ಹಿನ್ನಲೆಯಲ್ಲಿ ರೈತರು ಬಂಧನ ಭೀತಿಯಿಂದ ತಲೆ ಮೆರೆಸಿಕೊಂಡು ಅಜ್ಞಾತ ಸ್ಥಳದಲ್ಲಿ ಅಲೆದಾಡುತ್ತಿದ್ದಾರೆ. 2005, 2006ರಲ್ಲಿ ರೈತರು ಪಂಪ್ ಸೆಂಟ್ ಸಾಲ, ಬೆಳೆಸಾಲ ಸೇರಿ ದೀರ್ಘಸಾಲ ಪಡೆದುಕೊಂಡಿದ್ದಾರೆ.
ಅವರಿಗೆ ಎರಡು ವರ್ಷಗಳ ಹಿಂದೆ ಎಚ್ಚರಿಕೆ ನೀಡಲಾಗಿತ್ತು. ಆದರೆ ಅವರು ಸ್ಪಂದಿಸರಲಿಲ್ಲ. ಹೀಗಾಗಿ ಆಕ್ಸಿಸ್ ಬ್ಯಾಂಕ್ ವಿಭಾಗೀಯ ಕಚೇರಿ ಕೋಲ್ಕತ್ತಾದಲ್ಲಿರುವುದರಿಂದ ಅಲ್ಲಿಯ ನ್ಯಾಯಾಲಯದಲ್ಲಿಯೇ ಪ್ರಕರಣ ದಾಖಲಿಸಲಾಗಿತ್ತು.
ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ನೇತೃತ್ವದಲ್ಲಿ ಬ್ಯಾಂಕ್ ವಿರುದ್ದ ಧರಣಿ ಹಾಗೂ ಪಾದಯಾತ್ರೆ ನಡೆಸಿ, ಬ್ಯಾಂಕ್ ಗೆ ಮುತ್ತಿಗೆ ಹಾಕಿ ನೂರಾರು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಲ್ಲದೆ, ಸಾಲ ವಸೂಲಾತಿಗಾಗಿ ವಾರೆಂಟ್ ಜಾರಿಗೆ ತೀವ್ರ ವಿರೋಧಿಸಿದರು. ಕೂಡಲೇ ಎಲ್ಲ ಕೇಸ್ ವಾಪಾಸ್ಸು ಪಡೆಯಲು ಮೇಲಾಧಿಕಾರಿಗಳು ಮುಂದಾಗಬೇಕು ಎಂದು ಆಗ್ರಹಿಸಿದರು.