ಲಂಡನ್ : ನಾನು ಯಾವುದೇ ಬ್ಯಾಂಕ್ ಗಳಿಗೆ ಕ್ಷಮಾದಾನ ಕೋರಿ ಅರ್ಜಿ ಸಲ್ಲಿಸಿಲ್ಲ. ಬದಲಿಗೆ ಎಲ್ಲ ಬ್ಯಾಂಕ್ ಗಳ ಸಾಲವನ್ನು ಮರುಪಾವತಿಸಲು ಸಿದ್ದ ಎಂದು ಉದ್ಯಮಿ ವಿಜಯ ಮಲ್ಯ ತಿಳಿಸಿದ್ದಾರೆ.
ಅವರು ಮಂಗಳವಾರ ಲಂಡನ್ ನ ವೆಸ್ಟ್ ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ಕೋರ್ಟ್ ನಲ್ಲಿ ವಿಚಾರಣೆ ಮುಗಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ಈ ವಿಷಯ ಪ್ರಕಟಿಸಿದ್ದಾರೆ.
ಬ್ಯಾಂಕ್ ಗಳಿಗೆ ನಾನು ತೆಗೆದುಕೊಂಡ ಸಾಲದ ಅಸಲು ಮತ್ತು ಬಡ್ಡಿ ಸಮೇತ ಬಾಕಿ ಮೊತ್ತವನ್ನು ಮರುಪಾವತಿಸಲು ಸಿದ್ದನಿದ್ದೇನೆ ಎಂದು ಹೇಳಿದ್ದಾರೆ.
ದೇಶದ ಅನೇಕ ಬ್ಯಾಂಕ್ ಗಳು ಉದ್ಯಮಿ ವಿಜಯ ಮಲ್ಯ ಅವರ ಸಾಲ ವಸೂಲಾತಿಗೆ ಅವರ ಸ್ಥಿರಾಸ್ಥಿಗಳನ್ನು ಮುಟ್ಟುಗೋಲು ಹಾಕಿಕೊಂಡು ಸಾಲವನ್ನು ವಸೂಲಿ ಮಾಡಿವೆ. ಈ ಹಿಂದೆ ವಿಜಯ ಮಲ್ಯ ಬ್ಯಾಂಕ್ ಗಳಿಗೆ ಕೆಲವು ಷರತ್ತು ಹಾಕಿ ಕೇವಲ ಅಸಲು ಮಾತ್ರ ಪಾವತಿಸುತ್ತೇನೆ. ಬಡ್ಡಿ ಬಿಟ್ಟುಬಿಡಿ ಎಂದು ಕೋರಿದ್ದ. ಇದೀಗ ಎರಡು ಪಾವತಿಸಲು ಸಿದ್ದ ಎಂದು ಹೇಳಿರುವುದು ಭಾರೀ ಕುತೂಹಲಕ್ಕೆ ಕಾರಣವಾಗಿದೆ.
ಈಗಾಗಲೇ ಭಾರತದಲ್ಲಿ ಆರ್ಥಿಕ ದಿವಾಳಿ ಆಗಿರುವ ಅಪರಾದಿಗಳ ಆಸ್ತಿ ಹರಾಜು ಕಾನೂನು ಜಾರಿಯಲ್ಲಿರುವುದು ಇಲ್ಲಿ ಸ್ಮರಿಸಬಹುದು.
ಪಾಕಿಸ್ತಾನ : ಹಿರಿಯ ಕ್ರಿಕೆಟ್ ಪಟು ಹಾಗೂ ಪಾಕಿಸ್ತಾನ ತೆಹ್ರೀಕ್ ಇ ಇನ್ಸಾಫ್ ಅಧ್ಯಕ್ಷರು ಆಗಿರುವ ಇಮ್ರಾನ್ ಖಾನ್ ಅವರು ಶನಿವಾರ ಪಾಕಿಸ್ತಾನದ 22ನೇ ಪ್ರಧಾನಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು, ಪಾಕಿಸ್ತಾನದ ಅಧ್ಯಕ್ಷೀಯ ಕಚೇರಿ ಇಸ್ಲಾಂಬಾದ್ ನಲ್ಲಿ ನಡೆದ ಸರಳ ಸಮಾರಂಭದಲ್ಲಿ ಇಮ್ರಾನ್ ಖಾನ್ ಅವರು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದರು. ಇದಕ್ಕೆ ಪಂಜಾಬ್ ಸರಕಾರದ ಸಚಿವ ಹಾಗೂ ಹಿರಿಯ ಕ್ರಿಕೆಟಿಗ ನವಜೋತ್ ಸಿಂಗ್ ಸಿದ್ದು, ಪಾಕ್ ಆಕ್ರಮಿತ ಕಾಶ್ಮೀರ ಅಧ್ಯಕ್ಷ ಮಸೂದ್ ಖಾನ್ , ಪಾಕ್ ಸೇನೆ ಅಧ್ಯಕ್ಷ […]
ಅಮೆರಿಕಾ : ಅಮೆರಿಕ ಜೈಲಿನಲ್ಲಿರುವ ಮುಂಬೈ ಬಾಂಬ್ ಸ್ಪೋಟದ ಪ್ರಮುಖ ಆರೋಪಿ ಡೇವಿಡ್ ಹೆಡ್ಲಿಗೆ ಜೈಲಿನಲ್ಲಿಯೇ ಸಹ ಖೈದಿಗಳು ಗೂಸಾ ನೀಡಿದ್ದಾರೆ. ಇದರಿಂದಾಗಿ ಅವನ ಪರಿಸ್ಥಿತಿ ಗಂಭೀರವಾಗಿದ್ದು, ಸದ್ಯ ಚಿಕಾಗೋ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈಗಾಗಲೇ 35 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿರುವ ಡೇವಿಡ್ ಸಹ ಖೈದಿಗಳ ಆಕ್ರೋಶಕ್ಕೆ ಗುರಿಯಾಗಿದ್ದ ಹಿನ್ನಲೆಯಲ್ಲಿ ಅವನಿಗೆ ಚೆನ್ನಾಗಿ ಥಳಿಸಿದ್ದಾರೆ. ಇದರಿಂದಾಗಿ ಆತನ ಆರೋಗ್ಯದಲ್ಲಿ ಏರುಪೇರಾಗಿದೆ. ಜುಲೈ 8ರಂದು ಈ ಘಟನೆ ನಡೆದಿದ್ದು, ಈ ಕುರಿತು ಅಮೆರಿಕ ಪೊಲೀಸರು ಹೆಚ್ಚಿನ ತನಿಖೆ […]
ಇಂಡ್ಯೋನೇಷ್ಯಾ : ಇಂಡ್ಯೋನೇಷ್ಯಾದ ಲೊಂಬ್ಯಾಕ್ ನಲ್ಲಿ ಇತ್ತೀಚೆಗೆ ಸಂಭವಿಸಿದ್ದ ಭಾರೀ ಭೂಕಂಪದಿಂದ ನಲುಗಿದ ಜನತೆಯ ಸಂಕಷ್ಟವನ್ನು ಕಣ್ಣಾರೆ ಕಂಡ ಕನ್ನಡಿಗರೊಬ್ಬರು ಅವರಿಗೆ ಅಗತ್ಯ ಸಹಾಯ, ಸಹಕಾರ ನೀಡಿದ್ದಲ್ಲದೆ, ನೆರವು ನೀಡುವ ಮೂಲಕ ಕನ್ನಡಿಗರ ಕೀರ್ತಿಯನ್ನು ಇನ್ನಷ್ಟು ಹೆಚ್ಚಿಸಿದ್ದಾರೆ. ಈ ಭೂಕಂಪದ ವೇಳೆ ಅಲ್ಲಿಯೇ ಇದ್ದ ಧಾರವಾಡದ ಮಾಳಮಡ್ಡಿ ನಿವಾಸಿಯಾಗಿರುವ ಕನ್ನಡಿಗ ರೋಶನ್ ಸಿಂಗ್ ನವಲೂರು ಅವರು ವೈಯಕ್ತಿಕವಾಗಿ 35, 776 ರೂಪಾಯಿ ನಗದು ಹಾಗೂ 35 ಸಾವಿರಕ್ಕೂ ಅಧಿಕ ಮೌಲ್ಯದ ಔಷಧಿ, ಹಾಸಿಗೆಗಳು, ವಾಟರ್ ಪಾಕೆಟ್, ಆಹಾರ […]