ಜಿಲ್ಲೆ

ಹುಬ್ಬಳ್ಳಿ-ಧಾರವಾಡ ಅವಳಿನಗರದಲ್ಲಿ ಸಂಜೆ ೭ ರಿಂದ ಬೆಳಿಗ್ಗೆ ೭ ಗಂಟೆಯವರೆಗೆ ನಿಷೇಧಾಜ್ಞೆ

ಧಾರವಾಡ prajakiran.com : ಜಿಲ್ಲೆಯಲ್ಲಿ ೧ ಲಕ್ಷ ೬೦ ಸಾವಿರ ದುರ್ಬಲ ಗುಂಪಿನ ಜನಸಂಖ್ಯೆಯಿದೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದರು.

ಅವರು ಆರೋಗ್ಯ ಸಚಿವ ಶ್ರೀರಾಮುಲು ಕೋವಿಡ್ ಪರಿಶೀಲನಾ ಸಭೆಯಲ್ಲಿ ಈ ವಿಷಯ ತಿಳಿಸಿದರು.

ಆಶಾ ಕಾರ್ಯಕರ್ತೆಯರು ಸಮೀಕ್ಷೆ ಮಾಡಿ ಮಾಹಿತಿ ಸಂಗ್ರಹಿಸಿದ್ದಾರೆ. ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಕೋವಿಡ್ ಆಸ್ಪತ್ರೆ ಸ್ಥಾಪಿಸಿದ್ದು ಅಲ್ಲಿ ೯೫ ವೆಂಟಿಲೆಟರ್‌ಗಳಿವೆ ಎಂದರು.

ವಿವಿಧ ಖಾಸಗಿ ಆಸ್ಪತ್ರೆಗಳಲ್ಲಿ ೮೭ ವೆಂಟಿಲೆಟರ್‌ಗಳಿವೆ. ಕರೊನಾ ನಿಯಂತ್ರಣಕ್ಕಾಗಿ ಸರ್ಕಾರದಿಂದ ಪ್ರತಿದಿನ ಬರುವ ಆದೇಶ ನಿಯಮಗಳನ್ನು ಜಿಲ್ಲೆಯಲ್ಲಿ ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ತಿಳಿಸಿದರು.

ಮಹಾನಗರ ಪೊಲೀಸ್ ಆಯುಕ್ತ ಆರ್. ದೀಲಿಪ್ ಮಾತನಾಡಿ, ಲಾಕ್‌ಡೌನ್ ಸಡಿಲಿಕೆಯಿಂದ ಜನರ ಓಡಾಟ ಹೆಚ್ಚಾಗಿದೆ.

ಅವಳಿನಗರದಲ್ಲಿ ಸಂಜೆ ೭ ರಿಂದ ಬೆಳಿಗ್ಗೆ ೭ ಗಂಟೆಯವರೆಗೆ ಕರ್ಫ್ಯೂ ವಿಧಿಸಲಾಗಿದ್ದು, ಸಾಕಷ್ಟು ಬೈಕ್ ವಶಪಡಿಸಿಕೊಂಡು ದಂಡ ವಸೂಲು ಮಾಡಲಾಗಿದೆ. ಸಾರ್ವಜನಿಕರ ಸಂಚಾರ ನಿಯಂತ್ರಣದಲ್ಲಿದೆ ಎಂದು ಹೇಳಿದರು.

ಮಹಾನಗರ ಪಾಲಿಕೆ ಆಯುಕ್ತ ಡಾ.ಸುರೇಶ ಇಟ್ನಾಳ ಮಾತನಾಡಿ, ಹಾಟ್‌ಸ್ಪಾಟ್, ಕಂಟೈನ್ಮೆAಟ್ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ ಎಂದರು.

ಮಾಸ್ಕ್ ಧರಿಸದ ವ್ಯಕ್ತಿಗಳಿಂದ ಇಂದಿನವರೆಗೆ ೮೦ ಸಾವಿರ ರೂ.ಗಳಿಗೂ ಹೆಚ್ಚು ದಂಡ ವಸೂಲು ಮಾಡಲಾಗಿದೆ. ಅಂಗಡಿಗಳು ಸೇರಿದಂತೆ ವಿವಿಧ ವಾಣಿಜ್ಯ ಮಳಿಗೆಗಳಲ್ಲಿ ಸಾಮಾಜಿಕ ಅಂತರ ಕಾಪಾಡಲು, ಮಾಸ್ಕ್, ಸ್ಯಾನಿಟೈಸರ್ ಬಳಸುವುದನ್ನು ಕಡ್ಡಾಯಗೊಳಿಸಲಾಗಿದೆ ಎಂದು ತಿಳಿಸಿದರು.

ಜಿಲ್ಲಾ ಆಸ್ಪತ್ರೆಗೆ ಭೇಟಿ : ಸಚಿವರಾದ ಬಿ. ಶ್ರೀರಾಮುಲು ಅವರು ಸಭೆಯ ನಂತರ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ, ಮೂಲಭೂತ ಸೌಕರ್ಯಗಳನ್ನು ಪರಿಶೀಲಿಸಿದರು.

ಕೋವಿಡ್-೧೯ ಫೀವರ್ ಕ್ಲಿನಿಕ್‌ಗೆ ಭೇಟಿ ನೀಡಿ ವೈದ್ಯರು, ನರ್ಸ್ಗಳು ಹಾಗೂ ಆರೋಗ್ಯ ಸಿಬ್ಬಂದಿಗಳೊAದಿಗೆ ಅನೌಪಚಾರಿಕವಾಗಿ ಮಾತನಾಡಿ, ಅವರ ಸೇವೆಯನ್ನು ಪ್ರಶಂಸೆ ಮಾಡಿದರು. ಜಿಲ್ಲಾ ಶಸ್ತçಚಿಕಿತ್ಸಕ ಡಾ: ಶಿವಕುಮಾರ ಮಾನಕರ್ ಮತ್ತಿತರರು ಇದ್ದರು.

Please follow and like us:
PK Team
1999ರಲ್ಲಿ ಕಾನೂನು ಪದವಿ ಓದುತ್ತಿರುವಾಗಲೇ ಉತ್ತರ ಕರ್ನಾಟಕ ಕನ್ನಡ ದಿನ ಪತ್ರಿಕೆಯ ಕಲಬುರಗಿ ಜಿಲ್ಲೆಯ ವರದಿಗಾರನಾಗಿ ಕನ್ನಡ ಪತ್ರಿಕೋದ್ಯಮಕ್ಕೆ ಕಾಲಿಟ್ಟ ನಾಗರಾಜ ಕಿರಣಗಿ ಅವರು ಆ ಪತ್ರಿಕೆಯಲ್ಲಿ ನಾಲ್ಕು ವರ್ಷ ಸೇವೆ ಸಲ್ಲಿಸಿ, ಆನಂತರ 2002ರಲ್ಲಿ ಕಲಬುರಗಿ ಜಿಲ್ಲೆಯಿಂದ ಬೀದರ್ ಜಿಲ್ಲೆಯ ಉದಯ ಟಿವಿ ವರದಿಗಾರನಾಗಿ ಪ್ರಯಾಣ ಬೆಳೆಸಿದರು. 2002ರ ಜೂನ್ ನಿಂದ 2005ರ ಡಿಸೆಂಬರ್ ವರೆಗೆ ಬೀದರ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸಿ, 2006ರ ಜನವರಿಯಿಂದ ಧಾರವಾಡ ಜಿಲ್ಲೆಯ ಈ ಟಿವಿ ಕನ್ನಡ ವರದಿಗಾರರಾಗಿ ಸೇವೆ ಪ್ರಾರಂಭಿಸಿದರು. 2006ರಿಂದ 2008ರ ವರೆಗೆ ಧಾರವಾಡದಲ್ಲಿ ಕೆಲಸ ಮಾಡಿದ ಬಳಿಕ 2008ರಿಂದ 2009ರ ನವೆಂಬರ್ ವರೆಗೆ ಗದಗ,ಹಾವೇರಿ ಹಾಗೂ ಕೊಪ್ಪಳ ಜಿಲ್ಲೆಯ ಜೀ ಕನ್ನಡ ವಾಹಿನಿ ವರದಿಗಾರನಾಗಿ ಕೆಲಸ ನಿರ್ವಹಿಸಿದರು. 2009ರ ಡಿಸೆಂಬರ್ ನಿಂದ 2011ರ ಎಪ್ರಿಲ್ ವರೆಗೆ ಹಾಸನ ಜಿಲ್ಲೆಯ ಸುವರ್ಣ ನ್ಯೂಸ್ ವರದಿಗಾರರಾಗಿ ಕಾರ್ಯ ನಿರ್ವಹಣೆ ಮಾಡಿದರು. ಆ ಬಳಿಕ 2011ರ ಮೇ ನಿಂದ ಬಳ್ಳಾರಿ ಜಿಲ್ಲೆಯ ಉದಯವಾಣಿ ಕನ್ನಡ ದಿನಪತ್ರಿಕೆ ವರದಿಗಾರರಾಗಿ ಕಾರ್ಯ ನಿರ್ವಹಿಸಿ, 2012ರ ಜನೆವರಿಯಿಂದ 2016ರ ಮೇ ವರೆಗೆ ವಿಜಯವಾಣಿ ಕನ್ನಡ ದಿನಪತ್ರಿಕೆಯಲ್ಲಿ ಧಾರವಾಡ ಜಿಲ್ಲಾ ಹಿರಿಯ ವರದಿಗಾರರಾಗಿ, ಆ ಬಳಿಕ ಹಿರಿಯ ಉಪಸಂಪಾದಕರಾಗಿ ಕಾರ್ಯನಿರ್ವಹಿಸಿದರು. 2016ರಿಂದ 2017 ರವರೆಗೆ ಧಾರವಾಡ ಜಿಲ್ಲೆಯ ಸಿ 9 ನ್ಯೂಸ್ ಪ್ರಧಾನ ಸಂಪಾದಕರಾಗಿ ಸೇವೆ ಸಲ್ಲಿಸಿದರು. ಅದಾದ ಬಳಿಕ ಮತ್ತೆ 2017ರಿಂದ 2018ರ ಮಾರ್ಚ್ ವರೆಗೆ ಧಾರವಾಡ ಜಿಲ್ಲೆಯ ಸುವರ್ಣ ನ್ಯೂಸ್ ವರದಿಗಾರರಾಗಿ ಸೇವೆ ಸಲ್ಲಿಸಿದ ನಾಗರಾಜ ಕಿರಣಗಿ ಅವರು ತಮ್ಮ ನೆಚ್ಚಿನ ಗುರುಗಳು, ಮಾರ್ಗದರ್ಶಕರು ಆಗಿರುವ ಹಿರಿಯ ಆಧ್ಯಾತ್ಮಿಕ ಚಿಂತಕರು ಹಾಗೂ ಪ್ರಖ್ಯಾತ ನಾಟಿ ವೈದ್ಯರಾದ ಶ್ರೀ ಶಶಿಕಾಂತ ವಿ. ದೇವಾಡಿಗ ಅವರ ಸಲಹೆ ಮೇರೆಗೆ ಸುದೀರ್ಘ 20 ವರ್ಷಗಳ ಅನುಭವದ ಆಧಾರದ ಮೇಲೆ ತಮ್ಮದೇ ಆದ ಪ್ರಜಾಕಿರಣ ಮೀಡಿಯಾ ಹೌಸ್ ಸ್ಥಾಪಿಸಿ, ಅದರ ಮೂಲಕ www.prajakiran. com online news portal ಹಾಗೂ prajakiran YouTube channel ಮುನ್ನಡೆಸುತ್ತಿದ್ದಾರೆ.
http://prajakian.com

Leave a Reply

Your email address will not be published. Required fields are marked *