ಧಾರವಾಡ prajakiran.com : ಕರೊನಾ ಸೋಂಕಿತರಾಗಿರುವ ಧಾರವಾಡ ಶಹರದ ಹೊಸಯಲ್ಲಾಪೂರದ ನವಲೂರಅಗಸಿಯ ಕೋಳಿಕೆರೆಯ ನಿವಾಸಿ ೩೫ ವರ್ಷದ ಪಿ-೭೦೫ ವ್ಯಕ್ತಿಯು ಮಾರ್ಚ್ ೫ ರಿಂದ ೯, ೨೦೨೦ರ ವರೆಗೆ ಧಾರವಾಡದ ಶ್ರ್ಯಾವ್ಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾನೆ.
ಮಾ.೯, ರಿಂದ ೧೭, ೨೦೨೦ರ ವರೆಗೆ ಧಾರವಾಡದ ಸಪ್ತಾಪೂರದಲ್ಲಿನ ಸ್ಪಂದನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾನೆ.
ಏಪ್ರೀಲ್ ೩೦, ಹಾಗೂ ಮೇ ೧, ೨೦೨೦ ರಂದು ಧಾರವಾಡ ಜಿಲ್ಲಾ ಆಸ್ಪತ್ರೆಗೆ ಹಾಗೂ ಪುನಃ ಧಾರವಾಡದ ಸಪ್ತಾಪೂರದಲ್ಲಿರುವ ಸ್ಪಂದನಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ಹೋಗಿ ಬಂದಿರುತ್ತಾನೆ.
ಆನಂತರ ಕೊನೆಗೆ ಮೇ ೧ ರಂದು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ಭೇಟಿ ನೀಡಿದ್ದ. ಈ ವ್ಯಕ್ತಿಯು ಕಳೆದ ತಿಂಗಳಿನಲ್ಲಿ ಧಾರವಾಡದ ಹೊಸಯಲ್ಲಾಪೂರ, ಶೀಲವಂತರ ಓಣಿ, ಮುರಘಾಮಠ, ಕೊಪ್ಪದಕೇರಿ, ಎಮ್.ಬಿ. ನಗರ ಹಾಗೂ ಹುಬ್ಬಳ್ಳಿಯ ಎಪಿಎಂಸಿ ಮಾರುಕಟ್ಟೆ ಪ್ರದೇಶಗಳಲ್ಲಿ ಸಂಚರಿಸಿರುವುದು ತಿಳಿದು ಬಂದಿದೆ.
ಈ ಎಲ್ಲ ಅಂಶಗಳ ಹಿನ್ನಲೆಯಲ್ಲಿ ಈ ವ್ಯಕ್ತಿಯನ್ನು ಸಂಪರ್ಕಿಸಿದ ಸಾರ್ವಜನಿಕರಿಗೆ ಕರೊನಾ ಸೋಂಕು ತಗಲುವ ಸಾಧ್ಯತೆ ಇದ್ದು, ಆ ಎಲ್ಲ ವ್ಯಕ್ತಿಗಳು ಕೂಡಲೇ ಕೊರೊನಾ ಸಹಾಯವಾಣಿ ೧೦೭೭ ಗೆ ಕರೆಮಾಡಿ ತಮ್ಮ ವಿವರಗಳನ್ನು ನೀಡಬೇಕು.
ಕೂಡಲೇ ಸಮೀಪದ ಸರ್ಕಾರಿ ಆಸ್ಪತ್ರೆಗೆ ಹಾಜರಾಗಿ ಪರೀಕ್ಷೆಗೆ ಒಳಪಡಬೇಕು ಎಂದು ತಿಳಿಸಿ ಸಾರ್ವಜನಿಕ ಹಿತದೃಷ್ಟಿಯಿಂದ ಧಾರವಾಡ ಜಿಲ್ಲಾಧಿಕಾರಿ ದೀಪಾ ಚೋಳನ್ ಮನವಿ ಮಾಡಿದ್ದಾರೆ.