ಬಿಳಿಗಿರಿ ಶ್ರೀನಿವಾಸ
ಚಾಮರಾಜನಗರ : ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿದ ಪರಿಣಾಮ 108 ಆಂಬುಲೆನ್ಸ್ ವಾಹನ ಸಂಪೂರ್ಣ ಸುಟ್ಟು ಭಸ್ಮವಾಗಿದೆ.
ಚಾಮರಾಜನಗರದಿಂದ ಮೈಸೂರಿನ ಕಡೆ ಹೊಗುತ್ತಿದ್ದ 108 ವಾಹನ
ನಂಜನಗೂಡು ತಾಲ್ಲೂಕಿನ ಬದನವಾಳು ಬಳಿ ಹೊತ್ತಿ ಉರಿದಿದೆ.
ಅಗ್ನಿಶಾಮಕ ಸಿಬ್ಬಂದಿ ಬರುವ ವರೆಗೆ 108 ಆಂಬುಲೆನ್ಸ್ ವಾಹನ ಭಸ್ಮವಾಗಿದೆ.ಆದರೆ, ವಿಚಿತ್ರವಾದ್ರೂ ಸತ್ಯವಾದ ಸಂಗತಿಯೆಂದರೆ ಒಳಗಿದ್ದ ರೋಗಿಗಳು ಪವಾಡ ಸದೃಶ್ಯ ಪಾರಾಗಿದ್ದಾರೆ.
ಅವರ ಕಣ್ಣೆದುರೆ ನೋಡು ನೋಡುತ್ತಿದ್ದಂತೆ ಬೆಂಕಿಯ ಕೆನ್ನಾಲಿಗೆ ವಿಸ್ತರಿಸಿಕೊಂಡು ಧಗ ಧಗ ಬೆಂಕಿ ಹತ್ತಿಕೊಂಡಿದೆ.
ಚಲಿಸುತ್ಯತಿದ್ದ 108 ಆಂಬುಲೆನ್ಸ್ ವಾಹನಕ್ಕೆ ಆಕಸ್ಮಿಕವಾಗಿ ಹತ್ತಿಕೊಳ್ಳಲು ಈವರೆಗೆ ನಿಖರ ಕಾರಣ ತಿಳಿದುಬಂದಿಲ್ಲ.
ಕೂಡಲೇ ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ದೌಡಾಯಿಸಿ ಬೆಂಕಿ ನಂದಿಸಿದ್ದಾರೆ.
ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಕುರಿತು ದೊಡ್ಡ ಕವಲಂದೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.