ಬಿಳಿಗಿರಿ ಶ್ರೀನಿವಾಸ
ಚಾಮರಾಜನಗರ : ಗಡಿ ಜಿಲ್ಲೆ ಚಾಮರಾಜನಗರದ ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ದೀಪಾವಳಿಯ ಜಾತ್ರೆಯು ವಿಜ್ರಂಭ್ರಣೆಯಿಂದ ನಡೆಯಿತು.
ಬೆಳಗ್ಗೆ 8.ಗಂಟೆಗೆ ಪ್ರಾರಂಭವಾದ ರಥೋತ್ಸವವೂ 9.45 ಕ್ಕೆ ಸ್ವ ಸ್ಥಾನವನ್ನು ಸೇರಿತು.
ರಥೋತ್ಸವಕ್ಕೆ ಜಿಲ್ಲೆ ಹಾಗೂ ಹೊರ ಜಿಲ್ಲೆಯ ಮತ್ತು ವಿಶೇಷವಾಗಿ ನೆರೆ ರಾಜ್ಯ ತಮಿಳುನಾಡಿನ ಭಕ್ತ ಸಮೂಹ ಮಹದೇಶ್ವರ ಸ್ವಾಮಿಯ ದರ್ಶನ ಪಡೆದರು.
ಗೊರವನ ಕುಣಿತ, ವೀರ ಗಾಸೆ, ತಮಟೆ ನೃತ್ಯ, ಇನ್ನು ಮುಂತಾದ ನೃತ್ಯಗರಥೋತ್ಸವದ ಮೆರಗು ಹೆಚ್ಚಿಸಿದವು.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಜಾತ್ರೆ ಅಂಗವಾಗಿ ವಿಶೇಷ ಬಸ್ ಸೌಲಭ್ಯ ಕಲ್ಪಿಸಿತ್ತು. ಜಾತ್ರೆಗೆ ಲಕ್ಷಾಂತರ ಜನರು ಅಗಮಿಸಿ ಉಘೇ ಉಘೇ ಮಾದೇಶ್ವರ ಸ್ವಾಮಿ ಎಂದು ಜಯ ಘೋಷ ಮೊಳಗಿಸಿತು.