ಜಿಲ್ಲೆ

ಅಕ್ರಮ ಮದ್ಯ ಮಾರಾಟ : ೧೪೨ ದಾಳಿ, ೭ ಮೊಕದ್ದಮೆ, ೫ ಆರೋಪಿಗಳ ಬಂಧನ

ಧಾರವಾಡ prajakiran.com : ಕೋವಿಡ್-೧೯ ವೈರಸ್ ತಡೆಗಟ್ಟುವ ಹಾಗೂ ಕಣ್ಗಾವಲು ಕ್ರಮಗಳನ್ನು ವಹಿಸಲು ಜಿಲ್ಲಾಧಿಕಾರಿಗಳು ಹಾಗೂ ಅಬಕಾರಿ ಆಯುಕ್ತರು ನೀಡಿರುವ ಆದೇಶಗಳನ್ನು ಹಾಗೂ ನಿರ್ದೇಶನಗಳನ್ನು ಅನುಷ್ಟಾನಗೊಳಿಸುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿರುವ ಎಲ್ಲಾ ವಿವಿಧ ೨೭೬ ಮದ್ಯದಂಗಡಿಗಳನ್ನು ಹಾಗೂ ೨ ಕೆ ಎಸ್ ಬಿ ಸಿ ಎಲ್ ಡಿಪೋಗಳನ್ನು ಬಂದ್ ಮಾಡಲಾಗಿದೆ.

ಈ ಹಿನ್ನೆಲೆಯಲ್ಲಿ ಸಮಾಜಘಾತಕ ಶಕ್ತಿಗಳು ಅಕ್ರಮವಾಗಿ ಮದ್ಯ ಹಾಗೂ ಕಳ್ಳಭಟ್ಟಿ ಸಾರಾಯಿಯನ್ನು ತಯಾರಿಸುವ, ಸಾಗಾಟ, ಸಂಗ್ರಹಿಸುವ ಮತ್ತು ಮಾರಾಟ ಮಾಡುವ ಸಾಧ್ಯತೆಗಳು ಇರುವುದರಿಂದ ನವನಗರದಲ್ಲಿರುವ ಅಬಕಾರಿ ಉಪ ಆಯುಕ್ತರ ಕಚೇರಿಯಲ್ಲಿ ಉಚಿತ ಸಹಾಯವಾಣಿ (ಟೋಲ್ ಫ್ರೀ) ಸಂಖ್ಯೆ ೧೮೦ ೦೪೨೫ ೦೭೪೨ ನೇದ್ದನ್ನು ಜಿಲ್ಲಾ ಕಂಟ್ರೋಲ್ ರೂಮ ಎಂದು ಸ್ಥಾಪಿಸಲಾಗಿದೆ.

ಅಲ್ಲದೇ ಅಧಿಕಾರಿಗಳ ದೂರವಾಣಿ ಸಂಖ್ಯೆಗಳನ್ನು ನಮೂದಿಸಿ ಅಬಕಾರಿ ಅಕ್ರಮ ಚಟುವಟಿಕೆಗಳ ಕುರಿತು ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ಕೋರಲಾಗಿದೆ.

ಕಂಟ್ರೋಲ್ ರೂಮ ಹಾಗೂ ಅಧಿಕಾರಿಗಳ ದೂರವಾಣಿ ಸಂಖ್ಯೆಗಳಿಗೆ ಬಂದಂತಹ ,ದೂರುಗಳನ್ವಯ ತಕ್ಷಣವೇ ತುರ್ತು ಕ್ರಮ ತೆಗೆದುಕೊಳ್ಳಲಾಗುತ್ತಿದೆ.

ಜಿಲ್ಲೆಯಲ್ಲಿ ಮಾ. ೨೧-೦೩-೨೦೨೦ ರಿಂದ ಏ. ೦೮-೦೪-೨೦೨೦ ರವರೆಗೆ ಚಾಲ್ತಿಯಲ್ಲಿರುವ ೨ ಕಳ್ಳಭಟ್ಟಿ ಕೇಂದ್ರಗಳು ಹಾಗೂ ಹುಬ್ಬಳ್ಳಿ ಶಹರದ ಸೆಟ್ಲಮೆಂಟ್ ಪ್ರದೇಶ ವ್ಯಾಪ್ತಿಯಲ್ಲಿ ೪೮ ಬಾರಿ ತಪಾಸಣೆ ನಡೆಸಲಾಗಿದೆ.

೧೪೨ ಅಬಕಾರಿ ದಾಳಿಗಳನ್ನು ನಿರ್ವಹಿಸಿ ೭ ಮೊಕದ್ದಮೆಗಳನ್ನು ದಾಖಲಿಸಿದ್ದು, ೫ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ನೀಡಲಾಗಿದೆ.

ಇದರುವರೆಗೂ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ೫೯೮.೮೯೫ ಲೀ ಮದ್ಯ, ೨೯೩.೫೭೦ ಲೀಟರ ಬೀಯರ, ೨.೫ ಲೀ ನೀರು ಮಿಶ್ರಿತ ಮದ್ಯಸಾರ ಹಾಗೂ ೪೦೦ ಲೀ ಬೆಲ್ಲದ ರಸಾಯನ ಜಪ್ತಿ ಪಡಿಸಿಕೊಂಡಿದ್ದು, ಅಬಕಾರಿ ಅಧಿಕಾರಿಗಳು ಮುಂದಿನ ತನಿಖೆಯನ್ನು ಕೈಗೊಂಡಿರುತ್ತಾರೆ.

ಕೆಲವೊಂದು ಪ್ರಕರಣಗಳಲ್ಲಿ ಸನ್ನದುದಾರರು ಕದ್ದುಮುಚ್ಚಿ ಮದ್ಯ ಮಾರಾಟ ಮಾಡುತ್ತಿದ್ದು ನಂತರ ಸನ್ನದು ಕಳ್ಳತನವಾಗಿದೆ ಎಂದು ಪ್ರತಿಬಿಂಬಿಸುವ ಸಾಧ್ಯತೆ ಇರುವುದರಿಂದ ಜಿಲ್ಲೆಯ ಎಲ್ಲಾ ಸನ್ನದುದಾರರಿಗೆ ಅವರ ಸನ್ನದುವಿನಲ್ಲಿರುವ ಮದ್ಯ ಮತ್ತು ಬೀಯರ ದಾಸ್ತಾನನ್ನು ಸಂರಕ್ಷಿಸಿಕೊಳ್ಳುವ ನಿಟ್ಟಿನಲ್ಲಿ ಅಗತ್ಯ ಕ್ರಮ ತೆಗೆದುಕೊಳ್ಳವಂತೆ ತಿಳುವಳಿಕೆ ಪತ್ರಗಳ ಮೂಲಕ ಸೂಚಿಸಲಾಗಿರುತ್ತದೆ.

ಕದ್ದುಮುಚ್ಚಿ ಮಾರಾಟ ಮಾಡಿದ್ದಲ್ಲಿ ಅಥವಾ ದುರ್ಬಳಕೆಯಾದಲ್ಲಿ ಹಾಗೂ ಸನ್ನದು ಬಂದ ಮಾಡಿಸಿದ ದಿನಾಂಕ:೨೧-೦೩-೨೦೨೦ ರಂದು ಅಂತಿಮ ದಾಸ್ತಾನಿಗೆ ಮತ್ತು ಹಾಲಿ ಸನ್ನದಿನಲ್ಲಿರುವ ದಾಸ್ತಾನಿಗೆ ತಾಳೆಯಾಗದಿದ್ದಲ್ಲಿ ಅಂತಹ ಸನ್ನದುವಿನ ವಿರುದ್ಧ ಕಲಂ ೨೯ ರಂತೆ ಸನ್ನದನ್ನು ರದ್ದುಪಡಿಸಲು ಕ್ರಮ ಜರುಗಿಸಲಾಗುವುದೆಂದು ಸೂಚಿಸಲಾಗಿತ್ತು.

ಅದರಂತೆ ಜಿಲ್ಲೆಯಲ್ಲಿ ೦೨ ಪ್ರಕರಣಗಳಲ್ಲಿ ಸನ್ನದುದಾರರು ಅಕ್ರಮ ಮದ್ಯ ಮಾರಾಟ ಮಾಡಿರುವದು ಕಂಡು ಬಂದಿರುವುದರಿಂದ, ಹುಬ್ಬಳ್ಳಿ ತಾಲೂಕಿನ ಹೆಬಸೂರ ಗ್ರಾಮದ ಸ್ಟಾರ್ ವೈನ್ಸ್ ಹಾಗೂ ಹುಬ್ಬಳ್ಳಿ ಶಹರದ ಮೆ ಓರಿಜನಲ್ ಬಾರ್ & ರೆಸ್ಟೋರೆಂಟ್ ಈ ಸನ್ನದುಗಳನ್ನು ರದ್ದುಪಡಿಸಲು ಕ್ರಮ ಜರುಗಿಸಲಾಗುತ್ತಿದೆ.

ಮತ್ತು ಈಗಾಗಲೇ ಜಿಲ್ಲಾಡಳಿತ ಸೂಚನೆಯ ಮೇರೆಗೆ ಇಲಾಖೆಯಿಂದ ಉಚಿತವಾಗಿ ಒಟ್ಟು ೧೨೫೦ ಲೀ ಅಲ್ಕೋಹಾಲ್ ಬೇಸ್ಡ್ ಸ್ಯಾನಿಟೈಜರನ್ನು ಹಸ್ತಾಂತರಿಸಲಾಗಿರುತ್ತದೆ.

Please follow and like us:

Leave a Reply

Your email address will not be published. Required fields are marked *