ಧಾರವಾಡ PRAJAKIRAN.COM : ಕಾಡು ಬೆಳಸಿ, ನಾಡು ಉಳಿಸಿ ಎಂದು ಮಾರುದ್ದ ಭಾಷಣ ಬಿಗಿಯುವ ಅರಣ್ಯ ಇಲಾಖೆ ಅಧಿಕಾರಿಗಳಿಂದಲೇ ಅರಣ್ಯ ನಾಶವಾಗುತ್ತಿರೋ ಘಟನೆ ವಿದಗ್ಯಾನಗರಿ ಧಾರವಾಡದಲ್ಲಿ ನಡೆದಿದೆ.
ಧಾರವಾಡದ ಜಿಲ್ಲಾಡಳಿತದ ಕೇಂದ್ರ ಕಚೇರಿಗಳನ್ನು ಹೊಂದಿರುವ ಹಾಗೂ ಜಿಲ್ಲಾಧಿಕಾರಿ ಕಚೇರಿ ಸಮೀಪವಿರುವ ಧಾರವಾಡದ ಮಿನಿವಿಧಾನಸೌಧ ಆವರಣದಲ್ಲಿರೋ ಹಲವಾರು ಮರಗಳ ಮಾರಣಹೋಮವನ್ನು ಅರಣ್ಯ ಅಧಿಕಾರಿಗಳು ಮಾಡುತ್ತಿದ್ದಾರೆ.
ಹೌದು! ಕಟ್ಟಡಗಳಿಗೆ ಆಗುವ ಅಡಚಣೆ ಹೆಸರಿನಲ್ಲಿ ಸಮೃದ್ಧವಾಗಿ ಬೆಳದು ನಿಂತ ಮರಗಳನ್ನ ಕಡೆಯುತ್ತಿದ್ದಾರೆ.
ಒಟ್ಟು 86 ಮರಗಳನ್ನು ಕತ್ತರಿಸಲು ಅರಣ್ಯ ಇಲಾಖೆ ಆದೇಶ ಮಾಡಿದೆ. ಮರಗಳ ಕಟಾವಿಗೆ ಪರಿಸರ ಪ್ರೇಮಿಗಳ ವಿರೋಧವನ್ನು ವ್ಯಕ್ತ ಪಡಿಸಿದ್ದಾರೆ.
ಆದರೆ ಅರಣ್ಯ ಇಲಾಖೆಯವರು ಮಾತ್ರ ಇದಕ್ಕೂ ತಮಗೂ ಸಂಬಂಧವಿಲ್ಲ ಎನ್ನುವಂತೆ ಜಾಣ ಕುರುಡುತನ ತೋರಿಸುತ್ತಿದ್ದಾರೆ ಎಂದು ಪರಿಸರಪ್ರೇಮಿಗಳು ಆಪಾದಿಸಿದ್ದಾರೆ.
ಸಾಗವಾನಿ ಗಿಡ ಸೇರಿದಂತೆ 86 ಮರಗಳಿಗೆ ಕೊಡಲಿ ಏಟು ಹಾಕಲಾಗುತ್ತಿದ್ದು, ಬೇಲಿನೆ ಎದ್ದು ಹೊಲ ಮೇಯ್ತು ಎನ್ನುವಂತಾಗಿದೆ ಎಂದು ಸ್ಥಳೀಯ ಜನತೆ ಅರಣ್ಯ ಇಲಾಖೆ ವಿರುದ್ದ ಹಿಡಿಶಾಪ ಹಾಕುತ್ತಿದ್ದಾರೆ.
ಈಗಲಾದರೂ ಧಾರವಾಡ ಜಿಲ್ಲಾಡಳಿತ ಎಚ್ಚೆತ್ತು ಅದಕ್ಕೆ ಕಡಿವಾಣ ಹಾಕುತ್ತಾ ಎಂಬುದು ಕಾದು ನೋಡಬೇಕು.