ಬೆಳಗಾವಿ : ಈಜಲು ಹೋಗಿದ್ದ ನಾಲ್ವರು ಬಾಲಕರು ಶವವಾಗಿ ಪತ್ತೆಯಾದ ಘಟನೆ ಬೆಳಗಾವಿ ಜಿಲ್ಲೆಯ ಸಾವಗಾಂವ್ ಗ್ರಾಮದಲ್ಲಿ ನಡೆದಿದೆ.
ಕೆರೆ ಪಾಲಾದ ನಾಲ್ಕು ವಿದ್ಯಾರ್ಥಿಗಳ ಶವವನ್ನು ಹೊರ ತೆಗೆಯಲಾಗಿದ್ದು, ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಸಾಹಿಲ್ ಬೆನಕೆ, ಅಮನ್ ಸಿಂಗ್, ಗೌತಮ, ಚೇತನ ಬಾಂದುರ್ಗೆ ಕರೆಯಲ್ಲಿ ಈಜಲು ತೆರಳಿದ್ದರು. ಬಟ್ಟೆಯನ್ನು ಕೆರೆ ದಂಡೆಯಲ್ಲಿಟ್ಟು ನೀರಿಗೆ ಇಳಿದಿದ್ದರು. ಗಂಟೆಗಳಾದರೂ ಅವರು ನೀರಿನಿಂದ ಹೊರ ಬಾರದೆ ಇದ್ದುದ್ದನ್ನು ಕಂಡ ಗ್ರಾಮಸ್ಥರು ಪೊಲೀಸರಿಗೆ ತಿಳಿಸಿದರು.
ಕೂಡಲೇ ಘಟನಾ ಸ್ಥಳಕ್ಕೆ ದೌಡಾಯಿಸಿದ ಬೆಳಗಾವಿ ಗ್ರಾಮಾಂತರ ಪೊಲೀಸ್ ಠಾಣೆ ಪೊಲೀಸರು, ಅಗ್ನಿ ಶಾಮಕ ದಳದ ಸಿಬ್ಬಂದಿ ಬಾಲಕರನ್ನು ಶೋಧ ಕಾರ್ಯ ನಡೆಸಿದರು.
ಕೊನೆಗೆ ಬಾಲಕರು ನೀರು ಪಾಲಾಗಿ, ಶವವಾಗಿ ಪತ್ತೆಯಾಗಿರುವುದು ತಿಳಿಯಿತು. ಗ್ರಾಮಸ್ಥರು ಆತಂಕಗೋಂಡು ನೂರಾರು ಜನ ಜಮಾಯಿಸಿದ್ದರು. ಆನಂತರ ಮಾಹಿತಿ ಅರಿತು ಘಟನಾ ಸ್ಥಳಕ್ಕೆ ದೌಡಾಯಿಸಿ ಬೆಳಗಾವಿ ಪೊಲೀಸ್ ಆಯುಕ್ತ ಡಾ. ಡಿ.ಸಿ. ರಾಜಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಏನೂ ಅರಿಯದ ಮುಗ್ದ ಬಾಲಕರು ಈಜಲು ತೆರಳಿ ಶವವಾಗಿ ಪತ್ತೆಯಾಗಿರುವುದು ಇಡೀ ಬೆಳಗಾವಿ ಜಿಲ್ಲೆಯ ಪೋಷಕರನ್ನು ಬೆಚ್ಚಿ ಬಿಳಿಸಿದೆ. ಈ ಕುರಿತು ಬೆಳಗಾವಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ನಡೆದಿದೆ.