ಜಿಲ್ಲೆ

ವಾಲ್ ಮಾರ್ಟ್ ವಿರೋಧಿಸಿ ಬೀದಿಗಿಳಿದ ವ್ಯಾಪಾರಸ್ಥರು

ಧಾರವಾಡ : ಚಿಲ್ಲರೆ ಮಾರುಕಟ್ಟೆಗೆ ಲಗ್ಗೆ ಇಡುತ್ತಿರುವ ವಾಲ್ ಮಾರ್ಟ್ ವಿರೋಧಿಸಿ ಶನಿವಾರ ಧಾರವಾಡದಲ್ಲಿ ನೂರಾರು ವ್ಯಾಪಾರಸ್ಥರು ಬೀದಿಗಿಳಿದು ಪ್ರತಿಭಟನೆ ನಡೆಸಿದರು.

ಮೆಟ್ರೋ, ರಿಯಲನ್ಸ್ ಮಾಲ್ ಸಂಸ್ಕೃತಿಯಿಂದ ಹಾಗೂ ಬಂಡವಾಳಶಾಹಿಗಳ ಕೈಯಲ್ಲಿ ಸಿಲುಕಿ ಈಗಾಗಲೇ ಸಾಕಷ್ಟು ವ್ಯಾಪಾರಸ್ಥರು ಸಂಕಷ್ಟದಲ್ಲಿದ್ದು, ಸಣ್ಣ ಪುಟ್ಟಅಂಗಡಿ ಮೂಲಕ ಜೀವನ ಸಾಗಿಸುವುದು ಸವಾಲಿನ ಕೆಲಸವಾಗಿದೆ.

ಇಂತಹ ಸಂದರ್ಭದಲ್ಲಿ ವಾಲ್ ಮಾರ್ಟ್ ಚಿಲ್ಲರೆ ಮಾರುಕಟ್ಟೆಗೆ ಲಗ್ಗೆಇಟ್ಟರೆ ನಮ್ಮ ಪರಿಸ್ಥಿತಿ ಅಯೋಮಯವಾಗಲಿದೆ. ಇದು ಸಣ್ಣ ವ್ಯಾಪಾರಸ್ಥರನ್ನು ಬೀದಿಪಾಲು ಮಾಡುವ ಆತಂಕವಿದೆ. ಹೀಗಾಗಿ ಕೂಡಲೇ ರಾಜ್ಯ ಹಾಗೂ ಕೇಂದ್ರ ಸರಕಾರ ವಿಶೇಷ ಮುತುವರ್ಜಿವಹಿಸಿ ಅದನ್ನು ತಡೆಗಟ್ಟಲೇಬೇಕು ಎಂದು ಆಗ್ರಹಿಸಿದರು.

Please follow and like us:

Leave a Reply

Your email address will not be published. Required fields are marked *