ಹಾಸನ : ವಿವಿಧ ಪರೀಕ್ಷೆ ಸಂದರ್ಭಗಳಲ್ಲಿ ಪ್ರಶ್ನೆ ಪ್ರತಿಕೆ ಸೋರಿಕೆ ಸರ್ವೆ ಸಾಮಾನ್ಯ. ಆದರೆ ಪೊಲೀಸ್ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿರುವುದು ಇಲಾಖೆ ಗೌರವಕ್ಕೆ ಧಕ್ಕೆ ತಂದಿದೆ.
ಈ ಹಿನ್ನೆಲೆಯಲ್ಲಿ ಭಾನುವಾರ ನಡೆಯಬೇಕಿದ್ದ ಪೊಲೀಸ್ ಪೇದೆ ಲಿಖಿತ ಪರೀಕ್ಷೆಯನ್ನು ಮುಂದೂಡಲಾಗಿದೆ ಎಂದು ಪೊಲೀಸ್ ಇಲಾಖೆಯ ನೇಮಕಾತಿ ವಿಭಾಗದ ಎಡಿಜಿಪಿ ತಿಳಿಸಿದ್ದಾರೆ.
ಹಾಸನದ ಸಕಲೇಶಪುರ ತಾಲೂಕಿನ ಕೊಡಲಿಪೇಟೆ ಎಂಬ ಗಡಿ ಭಾಗದಲ್ಲಿ ಹಣ ಪಡೆದು 150 ಮಂದಿಗೆ ಪ್ರಶ್ನೆ ಪತ್ರಿಕೆಯನ್ನು ಶಿವಕುಮಾರ್ ಮಾರಾಟ ಮಾಡುತ್ತಿದ್ದಾಗ ಪೊಲೀಸರು ಬಂಧಿಸಿದ್ದರು.
ಬೆಂಗಳೂರು ಮೂಲದ ಶಿವಕುಮಾರ್ ಬಂಧನದ ನಂತರ ಪ್ರಶ್ನೆಪತ್ರಿಕೆ ಸೋರಿಕೆ ವಿಷಯ ಬಹಿರಂಗವಾಗಿತ್ತು.
ಅಲ್ಲದೆ ಪೊಲೀಸ್ ಇಲಾಖೆಗೆ ಈ ಪ್ರಕರಣ ತಲೆ ನೋವಾಗಿತ್ತು.
ಪ್ರತಿ ಪರಿಕ್ಷಾರ್ಥಿಯಿಂದ 5ರಿಂದ 8 ಲಕ್ಷ ಹಣ ಪಡೆದು ಶಿವಕುಮಾರ್ ಪ್ರಶ್ನೆ ಪತ್ರಿಕೆ ಮಾರಾಟ ಮಾಡುತ್ತಿದ್ದ ಎಂದು ತನಿಖೆ ವೇಳೆ ತಿಳಿದು ಬಂದಿರುವುದುಪ್ರಕರಣದ ಗಂಭಿರತೆ ಹೆಚ್ಚಿಸಿದೆ.
ಶಿವಕುಮಾರ್ ಈ ಹಿಂದೆಯೂ ಪಿಯುಸಿ ಪ್ರಶ್ನೆ ಪತ್ರಿಕೆ ಹಗರಣದಲ್ಲಿ ಬಂಧಿತನಾಗಿ ಜೈಲು ಪಾಲಾಗಿದ್ದ,
ಈತನ ವಿರುದ್ದ ಕೋಕಾ ಆಕ್ಟ್ ಅಡಿ ಪ್ರಕರಣ ದಾಖಲಾಗಿ ಜೈಲು ಸೇರಿದ್ದ.
ಕೆಲವೇ ದಿನಗಳ ಹಿಂದೆಯಷ್ಟೇ ಜಾಮೀನಿನ ಮೇಲೆ ಹೊರಬಂದಿದ್ದ ಶಿವಕುಮಾರ್ ತನ್ನ ಹಳೆ ದಂಧೆ ಶುರುವಿಟ್ಟುಕೊಂಡಿದ್ದ.
ಇದೀಗ ಮತ್ತೆ ಆರೋಪಿಯನ್ನು ವಶಕ್ಕೆ ಪಡೆದ ಸಿಸಿಬಿ ಪೊಲೀಸರು ತೀವ್ರವಾಗಿ ವಿಚಾರಣೆಗೆ ಒಳಪಡಿಸಿದ್ದಾರೆ.
ಈ ಪ್ರಕರಣದ ಕಿಂಗ್ ಪಿನ್ ಯಾರಯ, ಯಾರೆಲ್ಲ ಇದರ ಹಿಂದೆ ಇದ್ದಾರೆ ಎಂಬುದರ ತನಿಖೆ ನಡೆದಿದೆ.
ಒಟ್ಟಾರೆ ಇದರಿಂದಾಗಿ ಪೊಲೀಸ್ ಇಲಾಖೆ ಲಿಖಿತ ಪರೀಕ್ಷೆ ಮುಂದೂಡಿದ್ದು ನೌಕರಿ ಆಕಾಂಕ್ಷಿಗಳಿಗೆ ಆತಂಕ ಶುರುವಾಗಿದೆ.