- ನಾಲ್ಕು ಚಮಚ ಲಿಂಬೆ ರಸವನ್ನು 2 ಟೋಮಾಟೋ ಸೇರಿಸಿ ಪೇಸ್ಟ್ ತಯಾರಿಸಿ ಅದನ್ನು ತೆಲೆ ಬುರುಡೆಗೆ ಹಚ್ಚಿಕೊಂಡರೆ ತುಲೆ ತುರಿಕೆ, ಹೊಟ್ಟು ತುಂಬಿದ್ದರೆ, ಕಜ್ಜುಗಳಾಗಿದ್ದರೆ, ಟೋಮಾಟೋ ಅತ್ಯುತ್ತಮ ಪರಿಹಾರ. ಹಾಗೂ ತಲೆ ಕೂದಲಿಗೆ ಹೊಳಪು ನೀಡುತ್ತದೆ. ಒಣ ಕೂದಲು ಚಿಕಿತ್ಸೆಯಲ್ಲೂ ಟೋಮಾಟೋ ಸಹಾಯ ಮಾಡುತ್ತದೆ.
- ಮೊಸರಿನ ಜೊತೆ ಟೋಮಾಟೋ ಬೆರೆಸಿ ಚರ್ಮಕ್ಕೆ ಹಚ್ಚಿದರೆ ಕಾಂತಿಯುತ ಚರ್ಮ ನಿಮ್ಮದಾಗಿಸಿಕೊಳ್ಳಬಹುದು. ಟೋಮಾಟೋ ಚರ್ಮದ ಆರೋಗ್ಯಕ್ಕೆ ಸರ್ವಶೇಷ್ಟ. ಹಾಗೆಯೇ ತಿಂದರೂ ಸರಿ. ಚರ್ಮದ ಮೇಲೆ ಲೇಪಿಸಿದರೂ ಸರಿ. ಅದು ಒಳ್ಳೆಯ ಪರಿಣಾಮಗಳನ್ನು ಬೀರುವುದು ಖಚಿತ.\
- ಟೋಮಾಟೋಗಳಲ್ಲಿರುವ ನಾರು, ಜೀರ್ಣಾಂಗದ ಸ್ನಾಯುಗಳ ಚಲನವಲನಗಳನ್ನು ಕ್ರಮಬದ್ಧಗೊಳಿಸುತ್ತದೆ. ಹೆಚ್ಚು ಜೀರ್ಣಕಾರಿ ರಸವನ್ನು ಬಿಡುಗಡೆ ಮಾಡಲು ಸಹಾಯ ಮಾಡುತ್ತದೆ. ಹಾಗೂ ಕರುಳಿನ ಚಲನೆಯನ್ನು ನಿಯಂತ್ರಿಸಲು ಸಹಾಯ ಮಾಡುವುದು. ಅಲ್ಲದೆ ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿರಿಸುವುದು.
- ರಕ್ತ ಹೆಪ್ಪುಗಟ್ಟುವಿಕೆ, ಹೃದಯದ ಕಾಯಿಲೆಯನ್ನು ತಡೆಯುತ್ತದೆ. ಹಾಗೂ ರಕ್ತದೊತ್ತಡವನ್ನು ತಡೆಗಟ್ಟುತ್ತದೆ.
- ಟೋಮಾಟೋ ಬೀಜಗಳು ಕೊಲೆಸ್ಟ್ರಾಲ್ ಅನ್ನು ಹೊಂದಿರುವುದಿಲ್ಲ. ಬದಲಾಗಿ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ನೆರವಾಗುವ ನಾರನ್ನು ಹೊಂದಿರುತ್ತದೆ. ಇದರಲ್ಲಿರುವ ಪೋಟ್ಯಾಸಿಯಂ ಯಾವುದೇ ರೋಗಗಳನ್ನು ತಡೆಯಲು ಸಹಾಯ ಮಾಡುತ್ತದೆ.
- ಟೋಮಾಟೋದಲ್ಲಿರುವ ಲಿಕೋಪಿನ್ ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ನಿಯಂತ್ರಿಸುತ್ತದೆ.
- ಕಣ್ಣಿನ ದೃಷ್ಟಿಯನ್ನು ಸುಧಾರಿಸುತ್ತದೆ. ಯಾವುದೇ ದೃಷ್ಟಿ ಸಂಬಂಧಿತ ಕಾಯಿಲೆಗಳ ಅಪಾಯಗಳನ್ನು ಕಡಿಮೆಗೊಳಿಸುತ್ತದೆ.
- ತೂಕ ಕಡಿಮೆ ಮಾಡುವಲ್ಲಿ ಟೋಮಾಟೋ ಸಹಕಾರಿ, ಕೊಬ್ಬು ಕರಗಿಸುವ ಶಕ್ತಿ ಟೋಮಾಟೋ ಹೊಂದಿದೆ.
ಮಾಹಿತಿ : ಶಶಿಕಾಂತ ದೇವಾಡಿಗ, ನಾಟಿ ವೈದ್ಯರು.