ರಾಜ್ಯ

ಜೈಲಿಗೆ ಹೋಗಿ ಬಂದವರನ್ನು ಅದ್ದೂರಿ ಸ್ವಾಗತ ಕೋರೋದು ಒಳ್ಳೆಯದಲ್ಲ

ಬಳ್ಳಾರಿ PRAJAKIRAN.COM : ಜೈಲಿಗೆ ಹೋಗಿ ಬಂದವರನ್ನು ಅದ್ದೂರಿ ಸ್ವಾಗತ ಕೋರೋದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ ಹೆಗಡೆ ಅಸಮಾಧಾನ ವ್ಯಕ್ತಪಡಿಸಿದರು.

ಅವರು ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರಿಗೆ ಅದ್ದೂರಿ ಸ್ವಾಗತ ಕೋರಿ ಶಕ್ತಿ ಪ್ರದರ್ಶನಕ್ಕೆ ಮುಂದಾಗಿರುವ ಕಾಂಗ್ರೆಸ್ ನಾಯಕರ ಕ್ರಮಕ್ಕೆ ತಮ್ಮದೇ ಆದ ರೀತಿಯಲ್ಲಿ ವ್ಯಾಖ್ಯಾನಿಸಿದರು.

ಜೈಲಿಗೆ ಹೋಗಿ ಬಂದವರನ್ನು ಹಿಂದೆ ಅದ್ದೂರಿ ಸ್ವಾಗತ ಕೋರಲಾಗುತ್ತಿತ್ತು. ಆದರೆ ಈಗ ಅಂತಹವರು ಯಾರು ಇಲ್ಲ. ಅಧಿಕಾರದಲ್ಲಿರುವವರಿಗೆ ಪ್ರಾಮಾಣಿಕತೆ ಇಲ್ಲನಾವು ಭ್ರಷ್ಟ ವ್ಯವಸ್ಥೆಯಲ್ಲಿದ್ದೇವೆ ಎಂದರು.

ಈ ಹಿಂದೆ ಜನರು ಜೈಲಿಗೆ ಹೋಗಿ ಬಂದವರನ್ನು ಬಹಿಷ್ಕರಿಸುತ್ತಿದ್ದರು. ಆದರೆ ಈಗ ಅವರಿಗೆ ಭವ್ಯ ಸ್ವಾಗತ ಕೋರುವ ಕಯಾಲಿ ಸುರುವಾಗಿದೆ. ರಾಜಕಾರಣಿಗಳಿಗೆ ಅಧಿಕಾರದ ದುರಾಸೆ. ಜನರಿಗೆ ಹಣದ ಆಸೆ ತೋರಿಸಲಾಗುತ್ತಿದೆ. ಭ್ರಷ್ಟ ವ್ಯವಸ್ಥೆ ಬದಲಾಗಬೇಕಿದೆ. ಜನ ಸಹ ಬದಲಾಗಬೇಕಿದೆ ಎಂದು ಸಂತೋಷ ಹೆಗಡೆ ಹೇಳಿದರು.

 

Please follow and like us:

Leave a Reply

Your email address will not be published. Required fields are marked *