ಸಿನಿಮಾ

ಅರ್ಜುನ ಸರ್ಜಾ ಪ್ರಕರಣ : ಅಕ್ಟೋಬರ್ 29ಕ್ಕೆ ವಿಚಾರಣೆ ಮುಂದೂಡಿದ ಕೋರ್ಟ್

ಬೆಂಗಳೂರು : ನಟಿ ಶೃತಿ ಹರಿಹರನ್ ವಿರುದ್ದ ಕೋರ್ಟ್ ಮೆಟ್ಟಿಲು ಹತ್ತಿದ್ದ ನಟ ಅರ್ಜುನ ಸರ್ಜಾ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ನಟಿ ಶೃತಿ ಹರಿಹರನ್ ಅವರಿಗೆ ನೋಟೀಸ್ ಜಾರಿ ಮಾಡಿದೆ.

ನ್ಯಾಯಾಲಯ ಅರ್ಜುನ ಸರ್ಜಾ ಅವರ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಪು ನೀಡುವ ಮುನ್ನ ನಮ್ಮ ವಾದವೂ ಆಲಿಸಬೇಕು ಎಂದು ನಟಿ ಶೃತಿ ಹರಿಹರನ್ ಅವರ ಮಧ್ಯಂತರ ಅರ್ಜಿಯನ್ನು ಪರಿಗಣಿಸಬೇಕು ಎಂದು ಅವರ ಪರ ವಕೀಲರು ಮನವಿ ಮಾಡಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ನಟ ಅರ್ಜುನ ಸರ್ಜಾ ಅವರ ಪರ ವಕೀಲರು ಅವರು ಕೇವಿಟ್ ಸಹ ಹಾಕಿಲ್ಲ. ಅಲ್ಲದೆ ನ್ಯಾಯಾಲಯ ನೋಟಿಸ್ ಕೂಡ ನೀಡಿಲ್ಲ. ಹೀಗಾಗಿ ಅವರ ವಾದವನ್ನು ಪರಿಗಣಿಸಬಾರದು ಎಂದು ಕೋರಿದರು.

ಇಬ್ಬರ ವಾದ ಕೇಳಿದ ನಂತರ ನ್ಯಾಯಾಲಯ ನಟಿ ಶೃತಿ ಹರಿಹರನ್ ಅವರ ವಾದವನ್ನು ಕೇಳಬೇಕಿದೆ. ಹೀಗಾಗಿ ವಕೀಲ ಜೈನಾ ಕೋಠಾರಿಯಾ ಅರ್ಜಿಯನ್ನು ಅಂಗೀಕರಿಸಿ, ಶೃತಿ ಹರಿಹರನ್ ಅವರ ವಾದವನ್ನು ಆಲಿಸಲಿದೆ. ಹೀಗಾಗಿ ಪ್ರಕರಣವನ್ನು ಅಕ್ಟೋಬರ್ 29ರಂದು ವಿಚಾರಣೆ ನಡೆಸಲಾಗುವುದು ಎಂದು ಮುಂದೂಡಲಾಗಿದೆ.

ನಟ ಅರ್ಜುನ ಸರ್ಜಾ ಪರ ವಕೀಲ ಶ್ಯಾಂಸುಂದರ್ ಅವರು ಮಾತನಾಡಿ, ಅವರಾಗಿಯೇ ನ್ಯಾಯಾಲಯಕ್ಕೆ ಬಂದಿರುವುದರಿಂದ ಅವರ ವಾದವನ್ನು ಕೇಳಿ ಆನಂತರ ನಿರ್ಧಾರ ಪ್ರಕಟಿಸುವ ಇಂಗಿತ ವ್ಯಕ್ತಪಡಿಸಿದ ಮಾನ್ಯ ನ್ಯಾಯಾಲಯ ಫೇಸ್ ಬುಕ್ ತೇಜೋವಧೆ, ಟ್ರೋಲ್ಸ್ ಕುರಿತು ಲಿಖಿತ ಹೇಳಿಕೆ ಸಲ್ಲಿಸಲು ಅವಕಾಶ ಇರುತ್ತದೆ. ಹೀಗಾಗಿ ಅವರ ವಾದವನ್ನು ಕೇಳೋಣ ಎಂದು ಹೇಳಿದೆ ಎಂದರು.

Please follow and like us:

Leave a Reply

Your email address will not be published. Required fields are marked *