ರಾಜ್ಯ

ರೌಡಿಶೀಟರ್ ಮುಕ್ತುಮ್‌ ಸೊಗಲದಗೆ ಮತ್ತೆ ಬಿಸಿ ತಾಕಿಸಿದ ಪೊಲೀಸರು !

ಧಾರವಾಡ : ಇಲ್ಲಿಯ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸವಾಗಿರುವ ರೌಡಿ ಶೀಟರ್ ಮುಕ್ತುಮ್‌ ಹುಸೇನ ತಂದೆ ದಿಲಾವರಸಾಬ ಸೊಗಲದ ( ೩೨ ) ಗೆ ಪೊಲೀಸರು ಮತ್ತೆ ಬಿಸಿ ತಾಕಿಸಿದ್ದಾರೆ.

ಹುಬ್ಬಳ್ಳಿ-ಧಾರವಾಡ ಮಹಾನಗರ ಪೊಲೀಸ್ ಇಲಾಖೆಯ ಉಪ ಆಯುಕ್ತ ಬಿ.ಎಸ್. ನೇಮಗೌಡ ಅವರು ಉಪನಗರ ಠಾಣೆ ಪೊಲೀಸ್ ಇನ್ಸ್ ಪೆಕ್ಟರ್ ಎಂ.ಐ ಬಸಾಪುರ ಅವರ ವರದಿ ಮೇರೆಗೆ ಆತನನ್ನು ಪೊಲೀಸ್ ಠಾಣೆಗೆ ಕರೆದು ಮತ್ತೆ ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗದಂತೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಅಲ್ಲದೆ, ಮುಂಜಾಗ್ರತ ಕ್ರಮವಾಗಿ ಕಲಂ ೧೧೦ ಮತ್ತು ೧೫೧ ಸಿಆರ್‌ಪಿಸಿ ರ ಅಡಿಯಲ್ಲಿ ಪ್ರಕರಣ ದಾಖಲಿಸಿ, ಇನ್ನು ಮುಂದೆ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗದಂತೆ ಸೂಕ್ತ ಎಚ್ಚರಿಕೆ ನೀಡಿ ಮಧ್ಯಾಂತರ ಜಾಮೀನು ಪಡೆದು ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗಿದೆ ಎಂದು ಹುಬ್ಬಳ್ಳಿ-ಧಾರವಾಡ ಪೊಲೀಸ ಕಮೀಷನರೇಟ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಈ ಹಿಂದೆ ಜೆಡಿಎಸ್ ಜೊತೆಗೆ ಗುರುತಿಸಿಕೊಂಡಿದ್ದ ಈತ ರಿಯಲ್ ಎಸ್ಟೇಟ್ ದಂಧೆ, ಹುಬ್ಬಳ್ಳಿಯಲ್ಲಿ ಅತ್ಯಾಚಾರ ಹಾಗೂ ಧಾರವಾಡದ ಲಕ್ಷ್ಮೀ ನಗರದ ಕೊಲೆ ಪ್ರಕರಣದಲ್ಲಿ ಕೂಡ ಭಾಗಿಯಾಗಿದ್ದ ಆರೋಪ ಎದುರಿಸುತ್ತಿದ್ದಾನೆ.

ಕಳೆದ ವಿಧಾನ ಸಭಾ ಚುನಾವಣೆ ಸಂದರ್ಭದಲ್ಲಿ ಮುಕ್ತುಮ್ ಸೊಗಲದ ನನ್ನು ಹುಬ್ಬಳ್ಳಿ-ಧಾರವಾಡ ಪೊಲೀಸ ಕಮೀಷನರೇಟ್ ಮೂರು ತಿಂಗಳ ಅವಧಿಗಾಗಿ ಗಡಿಪಾರು ಮಾಡಿದ್ಡರು. ಆಗ ನ್ಯಾಯಾಲಯದ ಮೊರೆ ಹೋಗಿದ್ದ ಮುಕ್ತುಂ ಸೊಗಲದ, ಅದಕ್ಕೆ ತಡೆಯಾಜ್ಞೆ ತಂದು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಹೀನಾಯ ಸೋಲು ಅನುಭವಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

Please follow and like us:

Leave a Reply

Your email address will not be published. Required fields are marked *