ರಾಜ್ಯ

ಜೆಡಿಎಸ್ ಅಭ್ಯರ್ಥಿಯನ್ನು ಕೋತಿಗೆ ಹೋಲಿಸಿದ ಬಿಜೆಪಿ ಮುಖಂಡ

ಮಂಡ್ಯ : ಮಂಡ್ಯ,ಶಿವಮೊಗ್ಗ, ಬಳ್ಳಾರಿ ಲೋಕಸಭಾ ಉಪಚುನಾವಣೆ ಹಾಗೂ ರಾಮನಗರ, ಜಮಖಂಡಿ ವಿಧಾನ ಸಭಾ ಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ನಾಯಕರು ಪರಸ್ಪರ ಟೀಕೆ ಭರದಲ್ಲಿ ನಾಲಿಗೆ ಹರಿಬಿಡುತ್ತಿದ್ದಾರೆ.

ಈ ಬಾರಿಯ ಬಿಜೆಪಿಯ ಮುಖಂಡ ಅಶ್ವಥ್ ನಾರಾಯಣಗೌಡ ಮಂಡ್ಯ ಲೋಕಸಭಾ ಜೆಡಿಎಸ್ ಅಭ್ಯರ್ಥಿಯನ್ನು ಕೋತಿಗೆ ಹೋಲಿಸಿದ್ದಾರೆ.

ಬಿಜೆಪಿ ಮುಖಂಡ ಅಶ್ವಥ್ ನಾರಾಯಣ ಗೌಡ ಬಿಜೆಪಿ ಅಭ್ಯರ್ಥೀ ಡಾ. ಸಿದ್ದರಾಮಯ್ಯ ಪರ ಬಿರುಸಿನ ಪ್ರಚಾರ ನಡೆಸುವ ಭರದಲ್ಲಿ ಜೆಡಿಎಸ್ ಅಭ್ಯರ್ಥೀ ಶಿವರಾಮೇಗೌಡರನ್ನು ಕೋತಿಗೆ ಹೋಲಿಸಿದ್ದಾರೆ.

ವಿಜ್ಞಾನಿಗಳು ಯಾವುದಾದರೂ ಯಾವುದಾದರೂ ಸಂಶೋ‍ಧ‍ನೆ ಮಾಡಬೇಕಾದರೆ ಮನುಷ್ಯನಿಗಿಂತ ಮೊದಲು ಕೋತಿ ಮೇಲೆ ಪ್ರಯೋಗ ಮಾಡ್ತಾರೆ. ಕೋತಿ ಬದುಕಿದ್ದರೆ ಅದನ್ನು ಮನುಷ್ಯರಿಗೆ ನೀಡ್ತಾರೆ. ಆ ತರಹ ಮಂಡ್ಯದಲ್ಲಿ ಶಿವರಾಮೇಗೌಡ ಅವರನ್ನು ಕಣಕ್ಕೆ ಇಳಿಸಿ, ಅವರು ಉಪಚುನಾವಣೆಯಲ್ಲಿ ಗೆದ್ದರೆ ಆನಂತರ ಮುಂದಿನ ಚುನಾವಣೆಯಲ್ಲಿ ಅವರ ಮೊಮ್ಮಗ ಪ್ರಜ್ವಲ್ ರೇವಣ್ಣನಿಗೆ ಇಲ್ಲಿ ನಿಲ್ಲಿಸ್ತಾರೆ ಎಂದು ಗುಡುಗಿದರು.

ಹೀಗಾಗಿ ಈ ಬಾರಿಯೇ ಕೋತಿಯನ್ನು ಸೋಲಿಸುವ ಮೂಲಕ ಮನುಷ್ಯರನ್ನೇ ಗೆಲ್ಲಿಸಿ ಎಂದು ಬಿಜೆಪಿ ಪರ ಮತಯಾಚನೆ ಮಾಡಿದರು.

Please follow and like us:

Leave a Reply

Your email address will not be published. Required fields are marked *