ರಾಜ್ಯ

ಟಿಪ್ಪುಗಿಂತ ದೊಡ್ಡ ಮತಾಂಧ ಸಿದ್ದರಾಮಯ್ಯ !

ಮಂಗಳೂರು : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟಿಪ್ಪುಗಿಂತ ದೊಡ್ಡ ಮತಾಂಧ. ಬೇಕಿದ್ದರೆ ರಾಜ್ಯದ ಸಮ್ಮೀಶ್ರ ಸರಕಾರ ಸಿದ್ದರಾಮಯ್ಯ ಜಯಂತಿ ಮಾಡಲಿ ಎಂದು ಮಂಗಳೂರು ಸಂಸದ ನಳೀನ್ ಕುಮಾರ ಕಟೀಲ್ ಸವಾಲ್ ಹಾಕಿದರು.

ಅವರು ಶುಕ್ರವಾರ ಮಂಗಳೂರು ಜಿಲ್ಲಾಧಿಕಾರಿ ಕಚೇರಿ ಎದುರು ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯ ನೇತೃತ್ವವನ್ನು ವಹಿಸಿ ಮಾತನಾಡಿದರು.

ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅಧಿಕಾರಕ್ಕೆ ಬರುವ ಮುನ್ನ ಟಿಪ್ಪು ಜಯಂತಿ ವಿರೋಧಿಸಿದ್ದರು. ಆದರೆ ಇದೀಗ ಸಿದ್ದರಾಮಯ್ಯ ಋಣ ತೀರಿಸುವ ಏಕೈಕ ಉದ್ದೇಶದಿಂದ ವಚನ ಭ್ರಷ್ಟರಾಗಿದ್ದಾರೆ ಎಂದು ಹರಿಹಾಯ್ದಿದಿದ್ದಾರೆ.

ಅಲ್ಲದೆ. ಸಿದ್ದರಾಮಯ್ಯ ಅವರು ಮುಸ್ಲಿಂರ ಮೌಲ್ವಿಯಂಬುದನ್ನು ತೋರಿಸಿಕೊಟ್ಟಿದ್ದಾರೆ ಎಂದು ಪುಂಖಾನು ಪುಂಖವಾಗಿ ವಾಗ್ದಾಳಿ ನಡೆಸಿದರು.

ಪ್ರತಿಭಟನೆಯಲ್ಲಿ ಬಿಜೆಪಿ ಶಾಸಕರಾದ ವೇದವ್ಯಾಸ್ ಕಾಮತ್, ಭರತ ಶೆಟ್ಟಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

Please follow and like us:

One Reply to “ಟಿಪ್ಪುಗಿಂತ ದೊಡ್ಡ ಮತಾಂಧ ಸಿದ್ದರಾಮಯ್ಯ !”

  1. ಇವರಂತಹ ಮೂರ್ಖರು ಜಗತ್ತಿನಲ್ಲಿ ಎಲ್ಲೂ ಸಿಗಲ್ಲ .

Leave a Reply

Your email address will not be published. Required fields are marked *