ಆರೋಗ್ಯ

ಅಜೀರ್ಣಕ್ಕೆ ಬಜೆ ಔಷಧ ಗಿಡದಲ್ಲಿದೆ ಮದ್ದು

• ಕಾದಾರಿದ ನೀರನ್ನಾಗಲಿ ಒಂದೆರಡು ಹನಿ ಜೇನು ತುಪ್ಪವನ್ನಾಗಲಿ ಬಿಟ್ಟು ಅಲ್ಲಿ ಬಜೆಯ ಬೇರನ್ನು ನಾಲ್ಕು ಸುತ್ತು ತೇದು ಶಿಶುಗಳಿಗೆ ನೆಕ್ಕಿಸುವುದರಿಂದ ಬುದ್ದಿ ಹೆಚ್ಚಾಗಲಿದೆ.
• ಇದು ಸಾಮಾನ್ಯ ಜ್ವರ ತೆಲೆ ನೋವು ಕಫ, ಅಜೀರ್ಣಾದಿ ರೋಗಗಳಲ್ಲಿಯೂ ಪರಿಣಾಮಕಾರಿಯಾಗಿದೆ.
• ನೆಗಡಿಯ ಜ್ವರ, ತೆಲೆ ನೋವು, ಮೈ ನೋವು ಇದ್ದಾಗ ಇದನ್ನು ತೇದು ಹಣೆಗೆ ಮೈಗೆ ಹಚ್ಚಿಕೊಳ್ಳುವುದರಿಂದ ಮನಸ್ಸಿಗೆ ಮೈಗೆ ಹಿತವೆನಿಸುತ್ತದೆ.
• ಕಫವಿದ್ದಾಗ ಒಂದು ಚಿಟಿಕೆಯಷ್ಟು ಇದರ ಬೇರಿನ ಪುಡಿಯನ್ನು ಅಥವಾ ಅಷ್ಟೇ ಪ್ರಮಾಣದಲ್ಲಿ ಇದರ ತೇದ ತಿಲಕವನ್ನು ಜೇನುತುಪ್ಪದೊಂದಿಗೆ ಸೇವಿಸುವುದು.
• ಅಜೀರ್ಣವಿದ್ದಾಗ ಚಿಟಿಕೆಯಷ್ಟು ಈ ಬೇರಿನ ಪುಡಿ ಮತ್ತು ಶುಂಠಿ ಪುಡಿಯನ್ನು ಮಜ್ಜಿಗೆಯಲ್ಲಿ ಕದಡಿ ಕುಡಿಯುವುದು
• ಗಾಯಹುಣ್ಣುಗಳ ಮೇಲೆ ಬಜೆ ಬೇರಿನ ಪುಡಿಯನ್ನು ಉದುರಿಸುವುದರಿಂದ ಪರಿಣಾಮ ಉತ್ತಮವಾಗಿರುತ್ತದೆ.
• ತೆಲೆ ಸ್ನಾನದ ಪುಡಿಯೊಂದಿಗೆ ಬಜೆ ಬೇರಿನ ತುಸು ಪುಡಿಯನ್ನು ಸೇರಿಸಿಕೊಂಡು ಸ್ನಾನ ಮಾಡಿದರೆ ಕೂದಲು ಉದುರುವುದು, ತೆಲೆ ಹುಣ್ಣುಂ ಮುಂತಾದ ಸಮಸ್ಯೆಗಳಿದ್ದರೆ ಪರಿಹಾರ ಆಗುವುದು.
• ಸೊಳ್ಳೆಗಳ ಕಾಟ ಮನೆಯಲ್ಲಿ ಜಾಸ್ತಿ ಇದ್ದರೆ ತುಸು ಬಜೆ ಬೇರಿನ ಪುಡಿಯನ್ನು ಸಿಂಪಡಿಸಿದರೆ ಸೊಳ್ಳೆಗಳು ಬರುವುದಿಲ್ಲ. ಇತರ ಕ್ರೀಮಿ ಕೀಟಗಳು ರೋಗಾಣುಗಳು ದೂರ ಸರಿಯುತ್ತವೆ.
ಮಾಹಿತಿ : ಶಶಿಕಾಂತ ದೇವಾಡಿಗ, ನಾಟಿ ವೈದ್ಯರು

Please follow and like us:

Leave a Reply

Your email address will not be published. Required fields are marked *