ಬೆಂಗಳೂರು : ನಟ ದುನಿಯಾ ವಿಜಿ ಎರಡನೇ ಪತ್ನಿ ಕೀರ್ತಿಗೌಡ ಮೇಲೆ ಮೊದಲ ಪತ್ನಿ ನಾಗರತ್ನ ಹಲ್ಲೆ ಮಾಡಿರುವುದು ಇದೀಗ ಬೆಳಕಿಗೆ ಬಂದಿದೆ. ಈ ಪ್ರಕರಣ ಇದೀಗ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದೆ.
ಮೊದಲ ಪತ್ನಿ ನಾಗರತ್ನ ಹಾಗೂ ಮೋನಿಕಾ ಮೇಲೆ ನಟ ದುನಿಯಾ ವಿಜಯ ಇಬ್ಬರ ಮೇಲೆ ದೂರು ದಾಖಲಿಸಿದ್ದಾರೆ. ಈ ಸಂಬಂಧ ಪಟ್ಟಂತೆ ಗಿರಿನಗರ ಪೊಲೀಸ್ ಠಾಣೆಗೆ ಮೊದಲ ಪತ್ನಿ ನಾಗರತ್ನ ಹಾಗೂ ಇಬ್ಬರು ಮಕ್ಕಳನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.
ಬೆಳಗ್ಗೆಯಿಂದ ದುನಿಯಾ ವಿಜಿಯ ಮಕ್ಕಳಾದ ಮೊನಿಶಾ ಹಾಗೂ ಮೊನಿಕಾ ಅವರ ಹೇಳಿಕೆ ಪಡೆಯಲು ಗಿರಿನಗರ ಠಾಣೆ ಪೊಲೀಸರು ಹರಸಾಹಸ ಪಡಬೇಕಾಯಿತು. ಬಾಗಿಲು ತೆರೆಯಲು ಹಲವು ಗಂಟೆಗಳ ಕಾಲ ಕಾಡಿದ್ದರು. ಕೊನೆಗೂ ಸಾಕು ಬೇಕಾಗಿ ಪೊಲೀಸರು ಅವರನ್ನು ಮನವೊಲಿಸಿ ಠಾಣೆಗೆ ಕರೆದುಕೊಂಡು ಬಂದಿದ್ದಾರೆ. ಅಲ್ಲದೆ, ಮನೆಗೆ ಬೀಗ ಜಡಿದಿದ್ದಾರೆ.
Please follow and like us: