ಬೆಂಗಳೂರು : ಬಾಲಿವುಡ್ ನ ಟಾಪ್ ಸಿನಿ ದಿಗ್ಗಜ ಜೋಡಿಗಳಾದ ದೀಪಿಕಾ ಪಡುಕೋಣೆ, ರಣವೀರ ಸಿಂಗ್ ಈಗಾಗಲೇ ವಿದೇಶದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟು, ನಿನ್ನೆಯಷ್ಟೇ ತವರು ನೆಲದಲ್ಲಿ ಆರಕ್ಷತತೆ ಕಾರ್ಯಕ್ರಮದ ಹಿನ್ನಲೆಯಲ್ಲಿ ಬೆಂಗಳೂರಿಗೆ ಬಂದಿಳಿದಿದೆ.
ಅವರಿಬ್ಬರ ಆರಕ್ಷತತೆ ಕಾರ್ಯಕ್ರಮದಲ್ಲಿ ಕೇವಲ ಕ್ರೀಡಾಪಟುಗಳಾದ ಅಭಿನವ ಬಿಂದ್ರಾ, ರಾಹುಲ್ ದ್ರಾವಿಡ್ ಸೇರಿ ಹಲವು ಕ್ರಿಕೆಟ ಹಾಗೂ ವಿವಿಧ ಕ್ರೀಡಾಪಟುಗಳನ್ನು ಮಾತ್ರ ಆಹ್ವಾನಿಸಲಾಗಿದ್ದು, ಕೇವಲ 500ರಿಂದ 700 ಜನರಿಗೆ ಮಾತ್ರ ಆಹ್ವಾನ ನೀಡಲಾಗಿದೆ.
ವಿಶೇಷವಾಗಿ ಈ ಕಾರ್ಯಕ್ರಮಕ್ಕೆ ಕನ್ನಡತಿಯಾದ ದೀಪಿಕಾ ಪಡುಕೋಣೆ ಕುಟುಂಬ ವರ್ಗ ಇಲ್ಲಿಯ ಸಿನಿ ದಿಗ್ಗಜರನ್ನಾಗಲಿ ರಾಜಕೀಯ ಮುಖಂಡರನ್ನಾಗಿ ಆಹ್ವಾನ ನೀಡಿಲ್ಲ.
ಇಂದ್ರಜೀತ್ ಲಂಕೇಶ್ ನಿರ್ದೇಶನದ ಮೊದಲ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ನಟಿಸಿದ್ದರು. ಈ ಹಿನ್ನಲೆಯಲ್ಲಿ ದೀಪಿಕಾ ಪಡುಕೋಣೆ ಅವರು ಇಂದ್ರಜೀತ್ ಅವರಿಗೆ ವಾಟ್ಸ್ ಅಪ್ ಮೂಲಕ ಆಹ್ವಾನ ನೀಡಿದ್ದಾರೆ. ಆದರೆ ಇಂದ್ರಜೀತ್ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದಿರಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಇನ್ನೂ ಇದೇ ವೇಳೆ ನಿನ್ನೆ ರಾತ್ರಿಯಿಂದಲೇ ಮದುವಣಗಿತ್ತಿಯನ್ನು ನೋಡಲು ಅವರ ಅಭಿಮಾನಿಗಳು ಮನೆ ಮುಂದೆ ಜಮಾಯಿಸಿದ್ದಾರೆ. ಗಂಟೆಗಟ್ಟಲೇ ಮಹಿಳೆಯರು, ಮಕ್ಕಳು ಕಾದು ಕಾದು ಸುಸ್ತಾರಿ ಹಲವರಿಗೆ ನಿರಾಶೆಯಾಗಿದೆ.