ಅಪರಾಧ

ಗುಲಾಬಿ ತೋಟದಲ್ಲಿ ಅಕ್ಕನ ಗಂಡನ ಕತ್ತು ಕೋಯ್ದ ಭಾಮೈದ ಅರೆಸ್ಟ್ !

ಬೆಂಗಳೂರು : ಕಳೆದ ಒಂದು ವಾರದ ಹಿಂದೆಯಷ್ಟೇ ಪರಸ್ಪರ ಪ್ರೀತಿಸಿ ಮನೆಯವರ ವಿರೋಧದ ನಡುವೆಯೂ ಅಂತರ್ ಜಾತಿ ವಿವಾಹ ಮಾಡಿಕೊಂಡಿದ್ದ ಜೋಡಿಗೆ ಸ್ವತಃ ಹುಡುಗಿಯ ಮನೆಯವರೇ ಶಾಕ್ ನೀಡಿದ್ದಾರೆ.

ತಮ್ಮ ಮನೆಯ ಹುಡಗಿಯ ಮೇಲೆ ಕಣ್ಣು ಹಾಕಿ ಆಕೆಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮನೆ ಅಳಿಯನನ್ನೇ ಇನ್ನಿಲ್ಲವಂತೆ ಮಾಡಿದ್ದಾರೆ.

ಹರೀಶ್ ಜೊತೆಗೆ ಒಡನಾಟ ಹೊಂದಿದ್ದ ಭಾಮೈದನೇ ಆತನನ್ನು ಹೊಂಚು ಹಾಕಿ ಗುಲಾಬಿ ತೋಟಕ್ಕೆ ಕರೆದುಕೊಂಡು ಹೋಗಿ ಆನಂತರ ಆತನ ಕತ್ತು ಕೋಯ್ದು ಕೊಲೆ ಮಾಡಿ ಪರಾರಿಯಾಗಿದ್ದಾನೆ.

ಹರೀಶ್ ದೇವನಹಳ್ಳಿ ತಾಲೂಕಿನ ನಲ್ಲೂರು ಗ್ರಾಮದ ನಿವಾಸಿಯಾಗಿದ್ದ. ಕತ್ತು ಕೊಯ್ದು ಮರ್ಯಾದಾ ಹತ್ಯೆ ಮಾಡಲಾಗಿದೆ ಎಂದು ಹರೀಶ್ ಕುಟುಂಬಸ್ಥರು ಆರೋಪಿಸಿದ್ದಾರೆ. ಅಂತರ್ ಜಾತಿ ವಿವಾಹವಾದ ಹಿನ್ನಲೆಯಲ್ಲಿ ಕಳೆದ ಒಂದು ವಾರದಿಂದ ನಿರಂತರ ಬೆದರಿಕೆ ಕರೆಗಳು ಬರುತ್ತಿದ್ದವು ಎಂದು ಆರೋಪಿಸಿದ್ದಾರೆ.

ಕೊಲೆ ಮಾಡಿ ಪರಾರಿಯಾಗಿದ್ದ ಭಾಮೈದ ವಿನಯ್ನನ್ನು ಪೊಲೀಸರು ಸದ್ಯಕ್ಕೆ ಬಂಧಿಸಿದ್ದು, ತೀವ್ರ ವಿಚಾರಣೆಗೆಗೊಳಪಡಿಸಿದ್ದಾರೆ.

ಈ ಕೊಲೆಯಿಂದಾಗಿ ಗ್ರಾಮದಲ್ಲಿ ಬಿಗುವಿನ ಪರಿಸ್ಥಿತಿ ನಿರ್ಮಾಣವಾಗಿತ್ತು. ಗ್ರಾಮದಲ್ಲಿ ಮುಂಜಾಗ್ರತ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.

ಹುಡುಗಿಯ ಸಂಬಂಧಿಕರು ಹಲವು ಬಾರಿ ಕೊಲೆಗೆ ಬೆದರಿಕೆ ಹೇರಿದ್ದನ್ನು ಕಡೆಗಣಿಸಿ ಹರೀಶ್ ಮದುವೆಯಾಗಿದ್ದ. ಈ ಹಿನ್ನಲೆಯಲ್ಲಿ ಮರ್ಯಾದೆ ಹತ್ಯೆಯಾಗಿದೆ. ಗುಲಾಬಿತೋಟದಲ್ಲಿ ಇದೀಗ ಹೆಣವಾಗಿರುವುದನ್ನು ಕಂಡು ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ.

ಚನ್ನರಾಯಪಟ್ಟಣ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹುಡುಗಿಯ ತಮ್ಮನೇ ಕೊಲೆ ಮಾಡಿರುವುದು ದುರಂತವೇ ಸರಿ. ಅಕ್ಕ ಬಾಳು ಇದೀಗ ಕಣ್ಣೀನಲ್ಲಿ ಕೈ ತೊಳೆಯುವಂತಾಗಿದೆ.

Please follow and like us:

Leave a Reply

Your email address will not be published. Required fields are marked *