ಮೈಸೂರು prajakiran.com : ರಾಜ್ಯದ ರಾಜಕಾರಣದಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಶಾಸಕರು ಹೊರಬಂದಿರಲಿಲ್ಲ.
ಹದಿನೇಳು ಶಾಸಕರು ಮಾರಿಕೊಂಡು ಬಿಟ್ಟರು. ಕೋಟಿ ಕೋಟಿ ರೂಪಾಯಿಗೆ ಎಂದು ಬಿಂಬಿಸಲಾಯಿತು ಎಂದು ಮಾಜಿ ಸಚಿವ ಹೆಚ್. ವಿಶ್ವನಾಥ ಬೇಸರ ವ್ಯಕ್ತಪಡಿಸಿದರು.
ಅವರು ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಎಲ್ಲ ವಿಚಾರವನ್ನು ಪುಸ್ತಕ ರೂಪದಲ್ಲಿ ಹೊರ ತರ್ತಿನಿ ಕರ್ನಾಟಕ ರಾಜಕಾರಣದ ಕುರಿತು ಸಮಗ್ರಚಿತ್ರಣವನ್ನು ಜನರ ಮುಂದೆ ಪುಸ್ತಕದ ರೂಪದಲ್ಲಿ ಇಡ್ತೇನೆ ಎಂದರು.
ಜನಾದೇಶ ಪಡೆದ ಸರಕಾರದ ಕುರಿತು ಕೂಡ ವಿಶ್ಲೇಷಣೆ ಆಗಲಿಲ್ಲ. ಮಾಧ್ಯಮಗಳು ಕೂಡ ಸರಿಯಾಗಿ ಬಿಂಬಿಸಲಿಲ್ಲ ಎಂದು ಅಸಮಾಧಾನ ತೋಡಿಕೊಂಡರು.
ನಾನು ಈವರೆಗೆ ಒಟ್ಟು ಎಳು ಪುಸ್ತಕ ಹೊರ ತಂದಿದ್ದೇನೆ. ಅದರಲ್ಲಿ ಜನತಂತ್ರ, ರಾಜಕಾರಣದ ಕುರಿತು ಇವೆ. ಸಮ್ಮೀಶ್ರ ಸರಕಾರದ ಪತನಕ್ಕೆ ಯಾರೆಲ್ಲಾ ಕಾರಣ. ಹಿಮ್ಮೇಳ ಇತ್ತು. ಮುಮ್ಮೇಳ ಕೂಡ ಇದ್ದರು., ಅದನ್ನು ಮುನ್ನಲೆಗೆ ತಂದವರು ಯಾರು ಎಲ್ಲವೂ ಬಹಿರಂಗ ಪಡಿಸ್ತಿನಿ ಎಂದರು.
ಇದರಲ್ಲಿ ಕೇವಲ ಬಿಜೆಪಿಯವರು ಮಾತ್ರ ಇರಲಿಲ್ಲ. ಕಾಂಗ್ರೆಸ್ ಕೂಡ ಇತ್ತು ಎಂದು ಹೊಸ ಬಾಂಬ್ ಸಿಡಿಸಿದ ವಿಶ್ವನಾಥ ಇದರಲ್ಲಿ ಬೇರೆ ಬೇರೆ ಹೋಗಿದ್ದ ಇರಬಹುದು. ಮುಂಬೈ ಹೋಗಿದ್ದು, ಕೋಲ್ಕತ್ತಾ ಹೋಗಿದ್ದು ಎಲ್ಲವೂ ದಾಖಲಿಸ್ತಿನಿ ಎಂದು ವಿವರಿಸಿದರು.
ಸಾಪ್ಟ್ ಲೀಡರ್ ಗಳು ಇರಬಹುದು, ಪ್ರಚಂಡ ರಾಜಕಾರಣಿಗಳು ಇರಬಹುದು. ಸ್ಪೀಕರ್ ನಡೆ ಕುರಿತು ಅವರು ಸಾಕಷ್ಟು ತಪ್ಪು ಮಾಡಿರುವುದು, ಹೀಗೆ ಹತ್ತು ಹಲವು ಕುತೂಹಲ ಹಾಗೂ ಸಂಚಲನ ಮೂಡಿಸುವ ವಸ್ತು, ವಿಷಯ ಒಳಗೊಂಡಿದೆ ಎಂದರು.
ಸುಮ್ಮ ಸುಮ್ಮನೆ ಯಾರು ಬೇಕಾದರೂ ಯಾರಿಗೆ ಬೇಕಾದರೂ ಮಾರಾಟ ಮಾಡಲು ಮಾರಿಕೊಳ್ಳಲು ಆಗಲ್ಲ. ಅದಕ್ಕೆ ತನ್ನದೇ ಆದ ಸಾಕಷ್ಟು ಕಾರಣಗಳಿವೆ. ಇದು ರಾಜಕಾರಣದ ಮಾರಾಟ ಅಲ್ಲ. ರಾಜಕಾರಣದ ಹೋರಾಟ ಎಂದರು.
ಯಾವ ಕಾರಣಕ್ಕೆ ನಡೆಯಿತು. ರಾಜಕಾರಣಿಗಳಿಗೆ ಹಾಗೂ ಜನರಿಗೆ ಸಂಪೂರ್ಣ ಸತ್ಯ ಹೊರಬೇಕು ಎಂಬ ಸದುದ್ದೇಶದಿಂದ ಈ ಪುಸ್ತಕ ಹೊರ ತರುತ್ತಿದ್ದೇನೆ ಎಂದರು.
ಈಗಾಗಲೇ ಪುಸ್ತಕದ ಬಹುತೇಕ ಅಂಶಗಳು ಸಿದ್ದಗೊಂಡಿವೆ. ಕೇವಲ ತಿದ್ದುಪಡಿ ಮಾಡಿ ಪುಸ್ತಕ ರೂಪ ನೀಡುವುದು ಅಷ್ಟೇ ಬಾಕಿ ಎಂದು ಮಾಜಿ ಸಚಿವ ಹೆಚ್. ವಿಶ್ವನಾಥ ತಮ್ಮ ಮನದಾಳವನ್ನು ಬಿಚ್ಚಿಟ್ಟಿದ್ದಾರೆ.
ಆ ಮೂಲಕ ಆಪರೇಶನ್ ಕಮಲದ ಮತ್ತು ರಾಜ್ಯ ರಾಜಕಾರಣದ ಒಳಿಸುಳಿ ಹೊರಬೀಳುವ ಸಾಧ್ಯತೆಗಳಿವೆ ಎಂಬ ಸುಳಿವು ನೀಡಿದ್ದಾರೆ.
ಈ ಪುಸ್ತಕ ಹಳ್ಳಿ ಹಕ್ಕಿಯ ಹಾಗೆ ಮತ್ತೆ ರಾಜ್ಯ ರಾಜಕಾರಣದಲ್ಲಿ ಅಲ್ಲೊಲ ಕಲ್ಲೋಲ ಹಾಗೂ ಪರಸ್ಪರ ಕೆಸರೆಚಾಟಕ್ಕೆ ಸಾಕ್ಷಿಯಾಗಲಿದೆ ಎಂಬುದು ಬರುವ ದಿನಗಳಲ್ಲಿ ಕಾದು ನೋಡಬೇಕಿದೆ.