ಮುಂಬೈ : ನಟಿ ತನುಶ್ರೀ ದತ್ತಾ ಅವಳ್ಳಲ್ಲ, ಅವಳ ಒಳಗೆ ಒಬ್ಬ ವಿಕಟ ಪುರುಷನಿದ್ದಾನೆ. ಹೀಗಾಗಿ ಅವಳು ನನ್ನ ಮೇಲೆ ನಿರಂತರ ಅತ್ಯಾಚಾರವೆಸಗಿದ್ದಾಳೆ ಎಂದು ನಟಿ ರಾಖಿ ಸಾವಂತ್ ಹೊಸ ಬಾಂಬ್ ಸಿಡಿಸಿದ್ದಾಳೆ.
ಈ ಕುರಿತು ಪತ್ರಿಕಾಗೋಷ್ಠಿ ನಡೆಸಿ, ಗಂಭೀರ ಆರೋಪ ಮಾಡಿರುವ ಅವರು, ಅಂದ ಹಾಗೆ ಇದು ಮೀ ಟೂ ಅಲ್ಲ, ಇದು ಶೀ ಟೂ ಎಂದು ವ್ಯಾಖ್ಯಾನಿಸಿದ್ದಾಳೆ.
ತನುಶ್ರೀ ದತ್ತಾ 12 ವರ್ಷಗಳ ಹಿಂದೆ ನನ್ನ ಮೇಲೆಯೇ ಸರಣಿ ರೇಪ್ ಮಾಡಿದ್ದಾರೆ ಎಂದು ಕಣ್ಣೀರು ಹಾಕಿದ್ದಾಳೆ. ನನಗೆ ಈ ಬಗ್ಗೆ ಮಾಹಿತಿ ಬಹಿರಂಗ ಪಡಿಸದಂತೆ ಸಾಕಷ್ಟು ಜೀವ ಬೆದರಿಕೆ ಕರೆ ಬರುತ್ತಿವೆ. ನನ್ನ ಕೈ ಕಾಲುಗಳು ನಡಗುತ್ತಿವೆ. ಹೀಗಾಗಿ ನಾನು ಈ ಬಗ್ಗೆ ಈಗಾಗಲೇ ಪೊಲೀಸ್ ಠಾಣೆಗೆ ದೂರು ನೀಡಿದ್ದೇನೆ ಎಂದು ರಾಖಿ ಸಾವಂತ್ ಅಳಲು ತೋಡಿಕೊಂಡಿದ್ದಾಳೆ.
ನನಗೆ ಅವಳ ಹೆಸರು ಹೇಳಲು ಸಹ ಭಯ ಆಗುತ್ತಿದೆ. ತನುಶ್ರೀ ದತ್ತಾನೇ ಬಲತ್ಕಾರ ಮಾಡಿದ್ದು, ಇದು ಆಗಿನ 377 ಕಲಂ ವ್ತಾಪ್ತಿಗೆ ಬರುತ್ತದೆ. ತನುಶ್ರೀ ಹುಡುಗಿಯಲ್ಲ. ಅವಳು ಮೀಸ್ ಇಂಡಿಯಾ ಆಗಿ ನನ್ನ ಉತ್ತಮ ಸ್ನೇಹಿತಳಾಗಿದ್ದಳು. ಸಿಗರೇಟ್ ನಲ್ಲಿ ತಂಬಾಕು ಖಾಲಿ ಮಾಡಿ ಡ್ರಗ್ಸ್ ಸೇರಿಸಿ, ತಾನು ಸೇವನೆ ಮಾಡಿದ್ದಲ್ಲದೆ, ನನಗೂ ಕೊಡಿಸಿದ್ದಳು, ನಾನು ಗಾಳಿಯಲ್ಲಿ ಹಾರಿಡಿದ್ದೇನೆ ಎಂದು ದೂರಿದ್ದಾಳೆ.
ಈ ಹಿಂದೆ ನಟಿ ತನುಶ್ರೀ ದತ್ತಾ ಅವರು ಹಿರಿಯ ನಟ ನಾನಾ ಪಟೇಕರ್ ವಿರುದ್ದ ಲೈಂಗಿಕ ಕಿರುಕುಳ ಆರೋಪ ಹೊರಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಅಲ್ಲದೆ, ರಾಖಿ ಸಾವಂತ್ ಅವರ ಈ ಹೊಸ ಬಾಂಬ್ ನಿಂದಾಗಿ ಇಡೀ ಹಿಂದಿ ಚಿತ್ರರಂಗ ಹೌಹಾರಿದ್ದು, ಇದಕ್ಕೆ ತನುಶ್ರೀ ದತ್ತಾ ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾಳೆ ಎಂಬುದು ಕಾದು ನೋಡಬೇಕಿದೆ.