ಸಿನಿಮಾ

ನಿರ್ದೇಶಕ ಗುರುಪ್ರಸಾದ ವಿರುದ್ದ ದೂರು ನೀಡಿದ ನಟಿ ಸಂಗೀತಾ ಭಟ್ !

ಬೆಂಗಳೂರು : ಮಠ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಸುದ್ದಿ ಮಾಡಿದ್ದ ನಟ, ನಿರ್ದೇಶಕ ಗುರುಪ್ರಸಾದ ವಿರುದ್ದ ನಟಿ ಸಂಗೀತಾ ಭಟ್ ದೂರು ನೀಡಿದ್ದಾರೆ.

ಶುಕ್ರವಾರ ಸಂಜೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ತಮ್ಮ ಪತಿ ಸುದರ್ಶನ ಜೊತೆಗೆ ಆಗಮಿಸಿದ ಅವರು ನಿರ್ದೇಶಕ ಗುರುಪ್ರಸಾದ ಹೇಳಿಕೆಯಿಂದ ನಮ್ಮ ಮನಸ್ಸಿಗೆ ತುಂಬಾ ಬೇಸರವಾಗಿದೆ. ಹೀಗಾಗಿ ಅವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಲಿಖಿತ ದೂರು ಸಲ್ಲಿಸಿದ್ದಾರೆ.

ನಿರ್ದೇಶಕ ಗುರುಪ್ರಸಾದ ಜೊತೆಗೆ ನಟಿ ಸಂಗೀತಾ ಭಟ್ ಎರಡನೇ ಸಲ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದರು. ಅವರ ಹೆಸರು ಹೇಳದೆ ನಿರ್ದೇಶಕರ ವಿರುದ್ದ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದರು. ಅಲ್ಲದೆ, ತಮಗೂ ಇಂತಹ ಅನುಭವವಾಗಿದ್ದರಿಂದಲೇ ನಾನು ಚಿತ್ರರಂಗದಿಂದ ದೂರ ಸರಿಯಬೇಕಾಯಿತು ಎಂದು ನಟಿ ಸಂಗೀತಾ ಭಟ್ ಈ ಹಿಂದೆ ಹೇಳಿದ್ದರು.

ಇದಕ್ಕೆ ತೀವ್ರ ಬೇಸರ ವ್ಯಕ್ತಪಡಿಸಿದ್ದ ನಿರ್ದೇಶಕ ಗುರುಪ್ರಸಾದ ನಟಿಯರು ತಾವೂ ಸಿನಿಮಾರಂಗದಲ್ಲಿದ್ದರೂ, ಪ್ರತಿವ್ರತೆಯೆಂದು ಸಾಬೀತುಪಡಿಸಲು ಎಂದು ತಮ್ಮ ಪತಿ ಹಾಗೂ ಕುಟುಂಬಸ್ಥರ ಎದುರು ಇಂತಹ ಹೇಳಿಕೆ ನೀಡುತ್ತಾರೆ. ತಾವು ಬಾಯಿ ಬಿಟ್ಟರೆ ಅನೇಕರ ಬಣ್ಣ ಬಯಲಾಗುತ್ತದೆ ಎಂದು ಗುಡುಗಿದ್ದರು.

ಇದೀಗ ನಟಿ ನಿರ್ದೇಶಕರ ವಿರುದ್ದ ನೀಡಿರುವ ಲಿಖಿತ ದೂರಿಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ನಟ, ನಿರ್ದೇಶಕ ಗುರುಪ್ರಸಾದ ಯಾವ ರೀತಿ ಪ್ರತಿಕ್ರಿಯಿಸುತ್ತಾರೆ. ಮುಂದೆ ಯಾವೆಲ್ಲಾ ತಿರುವು ಪಡೆಯುತ್ತದೆ ಎಂಬುದು ಕಾದು ನೋಡಬೇಕಿದೆ.

Please follow and like us:

Leave a Reply

Your email address will not be published. Required fields are marked *